ಇಂಡಿಗೋ ವಿಮಾನ ರದ್ದು ಪ್ರಭಾವ, ಖಾಸಗಿ ಬಸ್​ಗಳಿಂದ ಬೇಕಾಬಿಟ್ಟಿ ವಸೂಲಿ: ಬೆಂಗಳೂರು ಮುಂಬೈ ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ!

Bangalore Mumbai Bus Fare: ಇಂಡಿಗೋ ವಿಮಾನಗಳ ರದ್ದತಿಯನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಕಂಪನಿಗಳು ಬೆಂಗಳೂರು-ಮುಂಬೈ ಮಾರ್ಗದ ಟಿಕೆಟ್ ದರವನ್ನು 10,000 ರೂ.ರೆಗೆ ಹೆಚ್ಚಿಸಿವೆ. ಹಬ್ಬದ ದಿನಗಳಿಗಿಂತಲೂ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದು, ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇಂಡಿಗೋ ವಿಮಾನ ರದ್ದು ಪ್ರಭಾವ, ಖಾಸಗಿ ಬಸ್​ಗಳಿಂದ ಬೇಕಾಬಿಟ್ಟಿ ವಸೂಲಿ: ಬೆಂಗಳೂರು ಮುಂಬೈ ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ!
ಖಾಸಗಿ ಬಸ್ (ಸಾಂದರ್ಭಿಕ ಚಿತ್ರ)
Updated By: Ganapathi Sharma

Updated on: Dec 06, 2025 | 2:43 PM

ಬೆಂಗಳೂರು, ಡಿಸೆಂಬರ್ 6: ಇಂಡಿಗೋ (IndiGo) ವಿಮಾನ ಹಾರಾಟ ರದ್ದಾಗಿರುವ ಪರಿಣಾಮವಾಗಿ ಖಾಸಗಿ ಬಸ್ ಟಿಕೆದ್ ದರ ಭಾರೀ ಏರಿಕೆಯಾಗಿದೆ. ಖಾಸಗಿ ಬಸ್​ಗಳು ಜನರಿಂದ ಅತ್ಯಂತ ದುಬಾರಿ ಮೊತ್ತ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪ್ರಯಾಣಿಕರ ತುರ್ತು ಬೇಡಿಕೆಯ ಅನಿವಾರ್ಯತೆನ್ನು ಗಮನಿಸಿದ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ದುಪ್ಪಟ್ಟು–ಮೂರುಪಟ್ಟು ಹೆಚ್ಚಿಸಿ ವಸೂಲಿ ಮಾಡುತ್ತಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಬೆಂಗಳೂರು – ಮುಂಬೈ ಬಸ್ ಟಿಕೆಟ್ ದರ ಎಷ್ಟು?

ಬೆಂಗಳೂರಿನಿಂದ ಮುಂಬೈ ಮಾರ್ಗದಲ್ಲಿ ಸಾಮಾನ್ಯವಾಗಿ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರ 1200 ರೂ.ನಿಂದ 1400 ರೂ. ವರೆಗೆ ಇತ್ತು. ಆದರೆ ಇಂಡಿಗೋ ಫ್ಲೈಟ್ ಕ್ಯಾನ್ಸಲ್ ಆಗಿದ್ದರಿಂದ ಅದೇ ಮಾರ್ಗದ ಬಸ್‌ಗಳಲ್ಲಿ ಈಗ ಆರಂಭದ ದರವೇ 3200 ರೂ, 3800 ರೂ, 4999 ರೂ, 6500 ರೂ. ಆಗಿದೆ. ಕೆಲ ಬಸ್‌ಗಳಲ್ಲಿ ಗರಿಷ್ಠ ದರ ₹10,000 ತಲುಪಿದೆ.

ಹಬ್ಬದ ದಿನಗಳಲ್ಲಿಯೂ ಸಹ ಹೆಚ್ಚು ಎಂದರೆ 4000 ರೂ. ಮಾತ್ರ ಟಿಕೆಟ್ ಮಾತ್ರ ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಮಾಲೀಕರು, ಈಗ ವಿಮಾನ ಬಿಕ್ಕಟ್ಟಿನ ಸನ್ನಿವೇಶವನ್ನು ಬಳಸಿಕೊಂಡು ಮನಬಂದಂತೆ ದರ ಹೆಚ್ಚಿಸಿರುವುದು ಕಂಡುಬಂದಿದೆ. ಖಾಸಗಿ ಬಸ್​ಗಳು ‘ಹಗಲು ದರೋಡೆ ಮಾಡುತ್ತಿವೆ’ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಅನಿಯಂತ್ರಿತ ಬಸ್ ಟಿಕೆಟ್ ದರ‌ ವಿಧಿಸುವುದರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎನ್ನುವ ಆಗ್ರಹ ಹೆಚ್ಚಾಗಿದೆ.

ಇಂಡಿಗೋ ವಿಮಾನ ಬಿಕ್ಕಟ್ಟು ಐದನೇ ದಿನವಾದ ಶನಿವಾರ ಸಹ ಮುಂದುವರಿದಿದ್ದು, ಬೆಂಗಳೂರಷ್ಟೇ ಅಲ್ಲದೆ ಮುಂಬೈ, ಚೆನ್ನೈನಲ್ಲೂ ವಿಮಾನಗಳ ಸಂಚಾರ ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಮುಂಬೈನಲ್ಲಿ 109 ಇಂಡಿಗೋ ವಿಮಾನಗಳ ಸಂಚಾರ ರದ್ದಾಗಿವೆ. ದೆಹಲಿಯಲ್ಲಿ 86, ಹೈದರಾಬಾದ್‌ನಲ್ಲಿ 69, ಬೆಂಗಳೂರಿನಲ್ಲಿ 50, ಪುಣೆಯಲ್ಲಿ 42 ಹಾಗೂ ಅಮಹದಾಬಾದ್‌ನಲ್ಲಿ 19 ವಿಮಾನಗಳ ಹಾಟಾರ ಸ್ಥಗಿತವಾಗಿದೆ.

ಇದನ್ನೂ ಓದಿ: ಇಂಡಿಗೋ ಮಾಲೀಕ ಯಾರು? ಅವರ ಬಳಿ ಎಷ್ಟಿದೆ ಆಸ್ತಿ? ದಿಢೀರ್ ಬಿಕ್ಕಟ್ಟಿಗೆ ಕಾರಣ ಏನು ಗೊತ್ತೇ? ಇಲ್ಲಿದೆ ಸಮಗ್ರ ಮಾಹಿತಿ

ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್​ಗಳು ದರ ಏರಿಕೆ ಮಾಡಿವೆ. ಮತ್ತೊಂದೆಡೆ, ಪ್ರಯಾಣಿಕರ ಪರದಾಟವನ್ನೇ ಬಂಡವಾಳ ಮಾಡಿಕೊಂಡ ಇತರ ಏರ್‌ಲೈನ್ಸ್‌ ಕೂಡ ಟಿಕೆಟ್ ದರ ಹೆಚ್ಚಿಸಿವೆ. 20 ಸಾವಿರ ರೂಪಾಯಿಯಿಂದ 75 ಸಾವಿರ ರೂಪಾಯಿವರೆಗೆ ದರ ಏರಿಕೆ ಮಾಡಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ