ರೆಕ್ಕೆ ಬಿಚ್ಚದ ಇಂಡಿಗೋ: ಲೂಟಿಗಿಳಿದ ಇತರೆ ವಿಮಾನ ಸಂಸ್ಥೆಗಳು
ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರ ಪರದಾಟವನ್ನೇ ಬಂಡವಾಳ ಮಾಡಿಕೊಂಡ ಇತರೆ ಏರ್‌ಲೈನ್ಸ್‌ಗಳು ದುಪ್ಪಟ್ಟು ಟಿಕೆಟ್ ದರ ಹೆಚ್ಚಿಸುವ ಮೂಲಕ ಸುಲಿಗೆಗೆ ಇಳಿದಿವೆ. 4-5 ಸಾವಿರ ರೂ. ಇದ್ದ ಫೈಟ್ ಟಿಕೆಟ್ ಬೆಲೆ ದಿಢೀರ್ ಮೂರುಪಟ್ಟು ಹೆಚ್ಚಳವಾಗಿವೆ. ಹಾಗಾದರೆ ಯಾವೆಲ್ಲಾ ನಗರಗಳಿಗೆ ಎಷ್ಟೆಷ್ಟು ದರ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 06: ಪ್ರಯಾಣಿಕರ ಮೆಚ್ಚುಗೆ ಗಳಿಸಿದ್ದ ಇಂಡಿಗೋ ಏರ್‌ಲೈನ್ಸ್ (Indigo Airlines), ಇದೀಗ ಅದೇ ಪ್ರಯಾಣಿಕರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದೆ. ಏಕೆಂದರೆ ಕಳೆದ 4 ದಿನಗಳಿಂದ ಇಂಡಿಗೋ ಸಂಸ್ಥೆಯಿಂದ ಕೋಲಾಹಲ ಸೃಷ್ಟಿಯಾಗಿದೆ. ನಿತ್ಯ 500 ರಿಂದ 600 ಫೈಟ್ ರದ್ದಾಗಿದ್ದು, ಪ್ರಯಾಣಿಕರು ನಲುಗಿ ಹೋಗಿದ್ದಾರೆ. ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡ ಇತರೆ ವಿಮಾನಯಾನ ಸಂಸ್ಥೆಗಳು, ಪ್ರಯಾಣಿಕರ ಸುಲಿಗೆ ಮಾಡುತ್ತಿವೆ. ದುಪ್ಪಟ್ಟು ದರ (Double rate) ಹೆಚ್ಚಿಸಿ ವಸೂಲಿ ಮಾಡುತ್ತಿರುವುದು ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.
ದುಪ್ಪಟ್ಟು ದರ ಏರಿಕೆ
ಇಂಡಿಗೋ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದು ಮಾಡಿದೆ. ಇನ್ನೂ 10 ದಿನ ಈ ರೀತಿ ಸಮಸ್ಯೆ ಇರಲಿದೆ. ಹೀಗಾಗಿ, ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ಕ್ಷಮೆಯಾಚಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಇತರೆ ವಿಮಾನಯಾನ ಸಂಸ್ಥೆಗಳು, ದುಪ್ಪಟ್ಟು ದರ ಏರಿಕೆ ಮಾಡಿವೆ. ಬೆಂಗಳೂರಿನಿಂದ ದೆಹಲಿಗೆ 4-5 ಸಾವಿರ ರೂ. ಇದ್ದ ಫೈಟ್ ಟಿಕೆಟ್ ಬೆಲೆ ಇದೀಗ 45 ಸಾವಿರದಿಂದ 70, 80 ಸಾವಿರ ರೂ.ದವರೆಗೆ ಹೆಚ್ಚಳವಾಗಿದೆ.
ಟಿಕೆಟ್ ದರ ವಿವರ ಹೀಗಿದೆ
- ಬೆಂಗಳೂರಿನಿಂದ ಮುಂಬೈಗೆ 39,525 ಸಾವಿರದಿಂದ 74,055 ಸಾವಿರ ರೂ. ವರೆಗೆ
- ಬೆಂಗಳೂರಿನಿಂದ ಕೊಚ್ಚಿಗೆ 18,850 ಸಾವಿರ ರೂ
- ಬೆಂಗಳೂರು ಟು ಹೈದರಾಬಾದ್ಗೆ 12 ಸಾವಿರದಿಂದ 13 ಸಾವಿರ ರೂ
- ಬೆಂಗಳೂರು ಟು ಗೋವಾಗೆ 16 ಸಾವಿರದಿಂದ 24 ಸಾವಿರ ರೂ
- ಬೆಂಗಳೂರು ಟು ಸೂರತ್ಗೆ 34, 118 ರೂ
- ಬೆಂಗಳೂರು ಟು ಪುಣೆಗೆ 24 ಸಾವಿರದಿಂದ 34 ಸಾವಿರ ರೂ
- ಬೆಂಗಳೂರು ಟು ಚೆನ್ನೈ 25,010 ರೂ
ದರ ಏರಿಕೆ ಮಾಡದಂತೆ ಎಚ್ಚರಿಕೆ
ವಿಮಾನಯಾನ ಸಂಸ್ಥೆಗಳ ದುಪ್ಪಟ್ಟು ದರ ಏರಿಕೆ ಬೆನ್ನಲ್ಲೇ ವಿಮಾನಯಾನ ಸಚಿವಾಲಯ ಅಲರ್ಟ್ ಆಗಿದ್ದು, ಏರ್ಲೈನ್ಸ್ಗಳಿಗೆ ಯದ್ವಾತದ್ವಾ ದರ ಏರಿಕೆ ಮಾಡದಂತೆ ಎಚ್ಚರಿಕೆ ನೀಡಿದೆ. ಟಿಕೆಟ್ ದರ ಏರಿಕೆಯಲ್ಲಿ ಮಾನದಂಡ ಪಾಲಿಸುವಂತೆ ನಿರ್ದೇಶಿಸಿದೆ. ನಿಯಮ ಪಾಲಿಸದಿದ್ದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೂಡ ನೀಡಿದೆ.
ಇದನ್ನೂ ಓದಿ: Indigo Refunds Ordered: ನಾಳೆ ರಾತ್ರಿ 8 ಗಂಟೆಯೊಳಗೆ ಬಾಕಿ ಹಣ ಮರುಪಾವತಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸೂಚನೆ
500 ಕಿಲೋ ಮೀಟರ್ವರೆಗಿನ ಪ್ರಯಾಣದ ಅಂತರದ ದರ 7 ಸಾವಿರದ 500 ರೂ. ಮೀರುವಂತಿಲ್ಲ ಅಂತಾ ವಿಮಾನಯಾನ ಸಚಿವಾಲಯ ಆದೇಶಿಸಿದೆ. ಅಲ್ಲದೇ, 500ರಿಂದ 1000 ಕಿಲೋ ಮೀಟರ್ಗೆ 12 ಸಾವಿರ ರೂ. 1,000 ದಿಂದ 1 ಸಾವಿರದ ಐನೂರು ಕಿಲೋ ಮೀಟರ್ವರೆಗೆ 15,000. 1 ಸಾವಿರದ ಐನೂರು ಕಿಲೋ ಮೀಟರ್ ಮೇಲ್ಪಟ್ಟು ಪ್ರಯಾಣಿಸುವ ದೂರಕ್ಕೆ 18 ಸಾವಿರದವರೆಗೆ ಮಾತ್ರ ರೇಟ್ ಫಿಕ್ಸ್ ಮಾಡಬಹುದು ಅಂತಾ ಸೂಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



