ಬೆಂಗಳೂರು: ಮೊದಲ ರಾತ್ರಿಯಲ್ಲಿ ಆಸಕ್ತಿ ತೋರದ ಪತಿ, ಪುರುಷತ್ವ ಪರೀಕ್ಷೆ ದಿನ ಆಸ್ಪತ್ರೆಯಿಂದ ಪರಾರಿಯಾದ ಗಂಡ
ಪುರುಷತ್ವ ಪರೀಕ್ಷೆ ಒಪ್ಪಿಕೊಳ್ಳದೇ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಕನ್ಯತ್ವ ಪರೀಕ್ಷೆಗೆ ಪತ್ನಿ ಒಪ್ಪಿದ್ರೂ, ಪತಿಯ ಪುರುಷತ್ವ ಪರೀಕ್ಷೆಗೆ ಒತ್ತಾಯಿಸಿದಾಗ ಗಂಡ-ಅತ್ತೆಯಿಂದ ಹಲ್ಲೆಗೊಳಗಾಗಿದ್ದಾಳೆ. ವೈದ್ಯಕೀಯ ಪರೀಕ್ಷೆ ತಪ್ಪಿಸಿಕೊಂಡ ಪತಿ, ವರದಕ್ಷಿಣೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು, ಡಿ.6: ಬೆಂಗಳೂರಿನ (Bengaluru) ನೆಲಮಂಗಲದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾದ ಐದೇ ತಿಂಗಳಿಗೆ ನವವಿವಾಹಿತೆ ಪೊಲೀಸ್ ಠಾಣಾ ಮೇಟ್ಟಿಲೇರಿದ್ದಾಳೆ. ಕಾರಣ ಕೇಳಿದ್ರೆ ನೀವು ಅಚ್ಚರಿಪಡುವುದು ಖಂಡಿತ. ಕನ್ಯತ್ವ ಹಾಗೂ ಪುರುಷತ್ವ ಪರೀಕ್ಷೆ ವಿಚಾರವಾಗಿ ಗಂಡ-ಹೆಂಡತಿ ನಡುವೆ ಗಲಾಟೆ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಂಮಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ. ತನ್ನ ಕನ್ಯತ್ವ ಪರೀಕ್ಷೆ ಮಾಡಿಸಿ, ಗಂಡನ ಪುರುಷತ್ವ ಪರೀಕ್ಷೆ ನಡೆಸಲು ಯಾಕೆ ಹಿಂದೇಟು ಹಾಕುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದಕ್ಕೆ ರೊಚ್ಚಿಗೆದ್ದು ಗಂಡ ಹಾಗೂ ಅತ್ತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾಳೆ.
ಜೂನ್ 9ರಂದು ಇಬ್ಬರು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಹೆಸರಘಟ್ಟ ಹೊಬಳಿ ಗುಡ್ಡದಹಳ್ಳಿ 26 ವರ್ಷದ ಯುವತಿಯನ್ನು ನೆಲಮಂಗಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್ ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ. ವರದಕ್ಷಿಣೆ ಹಾಗೂ ಚಿನ್ನಾಭರಣ ನೀಡಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ, ಆದರೆ ಫಸ್ಟ್ನೈಟ್ ದಿನ ಇಬ್ಬರ ನಡುವೆ ಜಗಳ ಶುರುವಾಗಿದೆ.
ಫಸ್ಟ್ ನೈಟ್ನಲ್ಲಿ ಜಗಳ:
ಇಬ್ಬರು ಜೋಡಿ ಚೆನ್ನಾಗಿ ಓದಿಕೊಂಡಿದ್ದಾರೆ. ಎರಡು ಮನೆಯವರು ಒಪ್ಪಿಕೊಂಡು ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಹುಡುಗನಿಗೆ ಬೇಕಾದಷ್ಟು ಚಿನ್ನ, ಹಣ ಎಲ್ಲವನ್ನು ನೀಡಿದ್ದಾರೆ. ಫಸ್ಟ್ ನೈಟ್ ದಿನ ಹುಡುಗ ಯಾವುದಕ್ಕೂ ಆಸಕ್ತಿ ತೋರುತ್ತಿರಲಿಲ್ಲ. ಹೆಂಡತಿ ಹತ್ತಿರ ಹೋದ್ರು, ದೂರು ಹೋಗುತ್ತಿದ್ದ, ಈ ಬಗ್ಗೆ ಮನೆಯಲ್ಲೂ ದಿನ ಜಗಳ ನಡೆಯುತ್ತಿತ್ತು. ಕೊನೆಗೆ ಎರಡು ಕಡೆಯ ಕುಟುಂಬದವರು ಈ ಬಗ್ಗೆ ಚರ್ಚೆ ನಡೆಸಿ, ವೈದ್ಯಕೀಯ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದಾರೆ. ಹುಡುಗಿಯ ವೈದ್ಯಕೀಯ ಪರೀಕ್ಷೆಯಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಪತಿಯು ಪುರುಷತ್ವ ಪರೀಕ್ಷೆ ಮಾಡಿಸದೇ, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಕಳ್ಳತನ, ದರೋಡೆಯಲ್ಲಿ ಖಾಕಿ ಶಾಮೀಲು: ವಿಚಾರಣೆಗೆ ಬಂದಿದ್ದ ಆರೋಪಿಯಿಂದಲೇ ಹಣ ಎಗರಿಸಿದ ಹೆಡ್ ಕಾನ್ಸ್ಟೇಬಲ್
ಆಸ್ಪತ್ರೆಯಿಂದ ಪರಾರಿಯಾದ ಪತಿ ಮನೆ ಬಂದು, ಪತಿ ಮತ್ತು ಅತ್ತೆಯು ಹುಡುಗಿ ಮೇಲೆ ಹಲ್ಲೆ ಮಾಡಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ಜೊತೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಹುಡುಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಸೆಕ್ಷನ್ 85 (BNS) ಮತ್ತು ಡೌರಿ ಪ್ರೊಹಿಬಿಷನ್ ಆಕ್ಟ್‌ನ ಸೆಕ್ಷನ್ 3, 4 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪತ್ನಿ ಹಾಗೂ ಅತ್ತೆ ಪರಾರಿಯಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Sat, 6 December 25




