ಸೊಳ್ಳೆ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಅಳವಡಿಕೆ, ಇಲ್ಲಿದೆ ಕಾರ್ಯವಿಧಾನ ಮಾಹಿತಿ

| Updated By: ವಿವೇಕ ಬಿರಾದಾರ

Updated on: Sep 08, 2024 | 10:40 AM

ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತ್ತಿವೆ. ಡೆಂಗ್ಯೂ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಡೆಂಗ್ಯೂ ಸೋಂಕಿತರ ಸಂಖ್ಯೆ ಈವರೆಗೆ 10 ಸಾವಿರ ಗಡಿ ದಾಟಿದೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ನೂತನ ಹೆಜ್ಜೆ ಇಟ್ಟಿದೆ. ಅದೇನು ಈ ಸುದ್ದಿ ಓದಿ.

ಸೊಳ್ಳೆ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಅಳವಡಿಕೆ, ಇಲ್ಲಿದೆ ಕಾರ್ಯವಿಧಾನ ಮಾಹಿತಿ
ಓವಿ ಟ್ರ್ಯಾಪ್​ ಬಯೋ
Follow us on

ಬೆಂಗಳೂರು, ಸೆಪ್ಟೆಂಬರ್​ 08: ಡೆಂಗ್ಯೂ (Dengue), ಮಲೇರಿಯಾ ರೋಗ ಹರಡುವ ಈಡೀಸ್​ ಸೊಳ್ಳೆಗಳ (Aedes Mosquito) ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ನಗರದಲ್ಲಿ ಓವಿ ಟ್ರ್ಯಾಪ್​ ಬಯೋ (Ovitrap Bio) ಸಾಧನವನ್ನು ನಗರದಲ್ಲಿ ಅಳವಡಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಗೋಪಾಲಪುರದಲ್ಲಿ 120 ಓವಿ ಟ್ರ್ಯಾಪ್​ ​ಸಾಧನಗಳನ್ನು ಮನೆಗಳಿಗೆ ಅಳವಡಿಸಲಾಗಿದೆ.

ಪ್ರಾಯೋಗಿಕ ಓವಿ ಟ್ರ್ಯಾಪ್​ ಅಳವಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಓವಿ ಟ್ರ್ಯಾಪ್​ ಬಯೋ ಅನ್ನು ಮುಂಬೈನ ಧಾರಾವಿ ಸ್ಲಂನಲ್ಲಿ ಈಗಾಗಲೆ ಅಳವಡಿಸಲಾಗಿದ್ದು, ಯಶಸ್ಸು ಕಂಡಿದೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ನಗರದಲ್ಲಿ ಓವಿ ಟ್ರ್ಯಾಪ್ ಬಯೋ ಅಳವಡಿಸುತ್ತಿವೆ.

ಓವಿ ಟ್ರ್ಯಾಪ್ ಬಯೋ ಕಾರ್ಯ

ಓವಿ ಟ್ರ್ಯಾಪ್ ಬಯೋ ಮಡಿಕೆ ಆಕಾರದ ಸಾಧನ. ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಬೆರಸಲಾಗುತ್ತದೆ. ರಾಸಾಯನಿಕ ಮಿಶ್ರಣ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಈಡಿಸ್​ ಸೊಳ್ಳೆಗಳು ಮತ್ತು ಅವುಗಳ ಮೊಟ್ಟೆಗಳನ್ನು ನಾಶಪಡಿಸುತ್ತದೆ. ಓವಿ ಟ್ರ್ಯಾಪ್ ಬಯೋ ಶೇ60 ರಷ್ಟು ಸೊಳ್ಳೆಗಳನ್ನು ನಿಯಂತ್ರಿಸಬಹುದು. ಓವಿ ಟ್ರ್ಯಾಪ್ ಬಯೋ 30 ದಿನ ಕೆಲಸ ಮಾಡುತ್ತೆ.

ಇದನ್ನೂ ಓದಿ: ಡೆಂಗ್ಯೂವನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದ ಸರ್ಕಾರ: ಸ್ವಚ್ಛತೆ ಕಾಪಾಡದವರಿಗೆ ದಂಡ

ಸದ್ಯ ಪ್ರಾಯೋಗಿಕವಾಗಿ ಗೋಪಾಲಪುರದ ನಾಲ್ಕು ಬೀದಿಗಳಲ್ಲಿ 20 ಅಡಿಗೆ ಒಂದರಂತೆ ಒಟ್ಟು 120 ಟ್ರ್ಯಾಪ್‌ ಅಳವಡಿಕೆ ಮಾಡಲಾಗಿದೆ. ಸಾಯಂಕಾಲ ಸಂದರ್ಭದಲ್ಲಿ ಸೊಳ್ಳೆಗಳ‌ ಕಾಟ ಹೆಚ್ಚಿಗೆ ಇತ್ತು ಇದೀಗ ಟ್ರ್ಯಾಪ್ ಅಳವಡಿಕೆ ಮಾಡಿದ ಒಂದು ವಾರದಲ್ಲಿಯೇ ಸೊಳ್ಳೆಗಳು ನಿಯಂತ್ರಣ ಆಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದ ಓವಿ ಟ್ರ್ಯಾಪ್ ಬಯೋಗಳಿಂದ ತಕ್ಕ ಮಟ್ಟಿಗೆ ಸೊಳ್ಳೆ ನಿಯಂತ್ರಣ ಆಗಿದೆ. ಒಂದು ವೇಳೆ ಇದು ಯಶಸ್ವಿಯಾದರೆ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ