ಬೆಂಗಳೂರು, ಫೆಬ್ರವರಿ 26: ಬೆಂಗಳೂರು (Bengaluru) ಮಹಾನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ನಗರದಲ್ಲಿನ ಸಂಚಾರ ದಟ್ಟಣೆಯನ್ನು (Traffic Jam) ನಿಯಂತ್ರಿಸಲು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಸಾಕಷ್ಟು ಹರಸಾಹಸ ಪಡುತ್ತಿದ್ದು, ವಿನೂತನ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದೀಗ, ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ದಟ್ಟಣೆಗೆ ಕೃತಕ ಬುದ್ದಿಮತ್ತೆ AI ಆಧರಿತ ಸ್ವಯಂ ಚಾಲಿತ ಸಿಗ್ನಲ್ಗಳನ್ನು (AI Based Signal) ಅಳವಡಿಸಿದ್ದಾರೆ. ಬೆಂಗಳೂರಿನ 125 ಜಂಕ್ಷನ್‌ಗಳಲ್ಲಿ ಈಗಾಗಲೇ ಎಐ ಆಧರಿತ ಸಿಗ್ನಲ್ ಅಳವಡಿಸಲಾಗಿದೆ.
ಈ ಎಐ ಆಧಾರಿತ ಸಿಗ್ನಲ್‌ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತವೆ. ಅತಿ ಹೆಚ್ಚು ವಾಹನ ದಟ್ಟಣೆ ಇರುವ ಸಮಯ ನಿರ್ವಹಿಸುವ ತಂತ್ರಜ್ಞಾನ ಇದಾಗಿದೆ. 53 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಒಟ್ಟು 165 ಜಂಕ್ಷನ್ನಲ್ಲಿ ಎಐ ಆಧರಿತ ಕ್ಯಾಮೆರಾ ಅಳವಡಿಸಲು ಯೋಚಿಸಲಾಗಿದೆ. ಸದ್ಯ 125 ಜಂಕ್ಷನ್‌ಗಳಲ್ಲಿ ಎಐ ಸ್ವಯಂ ಚಾಲಿತ ಕ್ಯಾಮೆರಾ ಅಳವಡಿಸಲಾಗಿದೆ. ಸಿ-ಡಾಕ್ ಕಂಪನಿಯಿಂದ ಎಐ ಸ್ವಯಂ ಚಾಲಿತ ಸಿಗ್ನಲ್ ಅಳವಡಿಸಲಾಗಿದೆ.
ಎಐ ಸಿಗ್ನಲ್ನಲ್ಲಿ ಎರಡು ವಿಧಗಳಿವೆ. ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ (BATCAS) ಮತ್ತು ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ (VAC). ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಬೆಂಗಳೂರಿನ ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಗ್ರೀನ್ ಸಿಗ್ನಲ್ ಅನ್ನು ನೀಡುತ್ತದೆ. ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ ಹೆಚ್ಚು ವಾಹನ ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಕಾಲ ಗ್ರೀನ್ ಸಿಗ್ನಲ್ಯನ್ನೂ ಮತ್ತು ಕಡಿಮೆ ವಾಹನ ಇರುವಲ್ಲಿ ಕಡಿಮೆ ಸಮಯ ಗ್ರೀನ್ ಸಿಗ್ನಲ್ ನೀಡುತ್ತದೆ.
ಇದನ್ನೂ ಓದಿ: ಮಹಾಶಿವರಾತ್ರಿ: ಬೆಂಗಳೂರಿನ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಎಐ ಸಿಗ್ನಲ್‌ಗಳು ಪ್ರಯಾಣದ ಸಮಯವನ್ನು ಶೇ 33 ರಷ್ಟು ಕಡಿಮೆ ಮಾಡಲಿದೆ. AI ಸಿಗ್ನಲ್‌ಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿವೆ. ವಿಶೇಷವಾಗಿ ಪೀಕ್ ಸಮಯದಲ್ಲಿ ಬಹಳಷ್ಟು ಅನುಕೂಲಕಾರಿಯಾಗಿದೆ. ಅಲ್ಲದೇ, ಅನಗತ್ಯ ಜಾಮ್ ತಪ್ಪಲಿದೆ. ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಅವಕಾಶ ನೀಡುವ ಮೂಲಕ ಕಾಯುವ ಸಮಯ ತಗ್ಗಲಿದೆ. ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಅವಕಾಶ ನೀಡುವ ಮೂಲಕ ಕಾಯುವ ಸಮಯ ತಗ್ಗಲಿದೆ.
Published On - 9:38 am, Wed, 26 February 25