ಇನ್ವೆಸ್ಟ್​ ಕರ್ನಾಟಕ 2025: ಬೆಂಗಳೂರು ಅರಮನೆ ಸುತ್ತಮುತ್ತ ಸಂಚಾರ ಮಾರ್ಪಾಡು

ಇನ್ವೆಸ್ಟ್ ಕರ್ನಾಟಕ 2025 ಕಾರ್ಯಕ್ರಮದಿಂದಾಗಿ ಬೆಂಗಳೂರಿನ ಅರಮನೆ ಮೈದಾನದ ಸುತ್ತಮುತ್ತ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ವಾಹನಗಳನ್ನು ನಿಲುಗಡೆ ಮಾಡಲು ನಿರ್ದಿಷ್ಟ ಸ್ಥಳಗಳನ್ನು ನಿಗದಿಪಡಿಸಲಾಗಿದೆ ಮತ್ತು ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಇನ್ವೆಸ್ಟ್​ ಕರ್ನಾಟಕ 2025: ಬೆಂಗಳೂರು ಅರಮನೆ ಸುತ್ತಮುತ್ತ ಸಂಚಾರ ಮಾರ್ಪಾಡು
ಸಾಂದರ್ಭಿಕ ಚಿತ್ರ

Updated on: Feb 11, 2025 | 8:05 AM

ಬೆಂಗಳೂರು, ಫೆಬ್ರವರಿ 11: ಅರಮನೆ ಮೈದಾನದಲ್ಲಿ ಮಂಗಳವಾರ (ಫೆ.11) ರಿಂದ ಶುಕ್ರವಾರ (ಫೆ.14) ರ ವರೆಗೆ ಬೆಳಿಗ್ಗೆ 08.00 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಇನ್ವೆಸ್ಟ್ ಕರ್ನಾಟಕ ಫೋರಂ ವತಿಯಿಂದ, ‘ಇನ್‌ವೆಸ್ಟ್ ಕರ್ನಾಟಕ-2025’ (Invest Karnataka 2025) ಗ್ಲೋಬಲ್ ಇನ್‌ವೆಸ್ಟರ್ಸ ಮೀಟ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರುಗಳು, ಉದ್ದಿಮೆದಾರರು, ವಿದೇಶಿ ಗಣ್ಯರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ, ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರ ಮಾರ್ಪಾಡು ಮಾಡಿದ್ದಾರೆ.

ಸಂಚಾರ ಮಾರ್ಪಾಡು

  • ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು: ಬಸವೇಶ್ವರ ಸರ್ಕಲ್-ಒಲ್ಡ್ ಹೈಗ್ರೌಂಡ್​ ಜಂಕ್ಷನ್ – ಕಲ್ಪನ – ಎಂ.ಸಿ.ಸಿ – ವಸಂತನಗರ ಅಂಡರ್ ಬ್ರಿಡ್ಜ್ ಬಲತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ನಿಲುಗಡೆ ಮಾಡಿರುವವರು, ಸ್ಕೋವರ್ಡ್ ಗೇಟ್ ಮುಖಾಂತರ ಹೊರಬಂದು ಜಯಮಹಲ್ ರಸ್ತೆ ಮೂಲಕ ಸಂಚರಿಸಬಹುದು.
  • ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು: ಮೇಕ್ರಿ ಸರ್ಕಲ್ ಅಂಡರ್ ಪಾಸ್ ಮುಖಾಂತರ ಹೋಗಿ ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ, ಪ್ಯಾಲೇಸ್ ಕ್ರಾಸ್‌ನಲ್ಲಿ ಎಡ ತಿರುವು ಪಡೆದು, ಚಕ್ರವರ್ತಿ ಲೇಔಟ್ ಎಡ ತಿರುವು ಪಡೆದು ಸರ್ವಿಸ್ ರಸ್ತೆಯಲ್ಲಿ ಎಡತಿರುವು ಪಡೆದು. ಮುಖ್ಯ (Main Palace) ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನ ನಿಲುಗಡೆ ಮಾಡಿರುವವರು ಸ್ಕೋವರ್ಡ್ ಗೇಟ್ ಮೂಲಕ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.
  • ಯಶವಂತಪುರ ಕಡೆಯಿಂದ ಬರುವ ವಾಹನಗಳು: ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತ್ತಿರುವು ಪಡೆದು -ಸರ್ವಿಸ್ ರಸ್ತೆಯಲ್ಲಿ ಸಾಗಿ, ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ, ಪ್ಯಾಲೇಸ್ ಕ್ರಾಸ್​ನಲ್ಲಿ ಎಡತಿರುವು ಪಡೆದು ಚಕ್ರವರ್ತಿ ಲೇಔಟ್ ಎಡತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯನಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ನಿಲುಗಡೆ ಮಾಡಿರುವವರು. ಸ್ಕೋವರ್ಡ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.
  • ಕಂಟೋನ್ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು: ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್-ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಎಡತಿರುವು ಪಡೆದು -ಸರ್ವಿಸ್ ರಸ್ತೆಯಲ್ಲಿ ಸಾಗಿ, ಕಾವೇರಿ ಜಂಕ್ಷನ್.ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಪ್ಯಾಲೇಸ್ ಕ್ರಾಸ್​ನಲ್ಲಿ ಎಡತಿರುವು ಪಡೆದು ಚಕ್ರವರ್ತಿ ಲೇಔಟ್ ಎಡ ತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ. ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನ ನಿಲುಗಡೆ ಮಾಡಿರುವವರು, ಸೋವರ್ಡ್ ಗೇಟ್​ ಜಯಮಹಲ್ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.

ಇದನ್ನೂ ಓದಿ: ಇಂದಿನಿಂದ 3 ದಿನ ಇನ್ವೆಸ್ಟ್ ಕರ್ನಾಟಕ ಸಮ್ಮಿಟ್: ಈ ಬಾರಿಯ ವಿಶೇಷವೇನು? ಇಲ್ಲಿದೆ ವಿವರ

ಟೆಂಪೋ ಟ್ರಾವೆಲರ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವವರು:

  • ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು: ಬಸವೇಶ್ವರ ಸರ್ಕಲ್-ಒಲ್ಡ್ ಹೈಂಡ್ ಜಂಕ್ಷನ್-ಕಲ್ಪನ-ಎಂ.ಸಿ.ಸಿ-ವಸಂತನಗರ ಅಂಡರ್ ಬ್ರಿಡ್ಜ್ ಬಲತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ, ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಶಾರೂಕ್ ಖಾನ್ ಗ್ರೌಂಡ್​ನಲ್ಲಿ ನಿಲುಗಡೆ ಮಾಡಿರುವವರು ಸೋವರ್ಡ್ ಗೇಟ್​ ಮುಖಾಂತರ ಹೊರಬಂದು ಜಯಮಹಲ್ ರಸ್ತೆ ಮೂಲಕ ಸಂಚರಿಸಬಹುದು.
  • ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು: ಮೇಕ್ರಿ ಸರ್ಕಲ್ ಅಂಡರ್‌ಪಾಸ್ ಮುಖಾಂತರ ಹೋಗಿ ಕಾವೇರಿ ಜಂಕ್ಷನ್, ಪಿ ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಪ್ಯಾಲೇಸ್ ಕ್ರಾಸ್​ನಲ್ಲಿ ಎಡ ತಿರುವು ಪಡೆದು ಚಕ್ರವರ್ತಿ ಲೇಔಟ್ ಎಡ ತಿರುವು ಪಡೆದು ಸರ್ವಿಸ್ ರಸ್ತೆಯಲ್ಲಿ ಎಡತಿರುವು ಪಡೆದು ಮುಖ್ಯ ಅರಮನೆ ಮೈದಾನದ ಶಾರೂಕ್​ ಖಾನ್ ಗ್ರೌಂಡ್​ನಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಶಾರೂಕ್ ಖಾನ್ ಗ್ರೌಂಡ್​ನಲ್ಲಿ ವಾಹನ ನಿಲುಗಡೆ ಮಾಡಿರುವವರು ವಾಹನಗಳು ಸ್ಪೋವರ್ಡ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.
  • ಯಶವಂತಪುರ ಕಡೆಯಿಂದ ಬರುವ ವಾಹನಗಳು: ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತಿರುವು ಪಡೆದು – ಸರ್ವಿಸ್ ರಸ್ತೆಯಲ್ಲಿ ಸಾಗಿ ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಪ್ಯಾಲೇಸ್ ಕ್ರಾಸ್​ನಲ್ಲಿ ಎಡತಿರುವು ಪಡೆದು ಚಕ್ರವರ್ತಿ ಲೇಔಟ್ ಎಡ ತಿರುವು ಪಡೆದು ಮುಖ್ಯ ಅರಮನೆ ಮೈದಾನದ ಶಾರೂಕ್ ಖಾನ್ ಗೌಂಡ್ ನಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಶಾರೂಕ್ ಖಾನ್ ಗ್ರೌಂಡ್​ನಲ್ಲಿ ನಿಲುಗಡೆ ಮಾಡಿರುವವರು, ವರ್ಡ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.
  • ಕಂಟೋನ್ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು: ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್- ಜಯಮಹಲ್ ರಸ್ತೆಯಲ್ಲಿ ಸಾಗಿ, ಮೇಕ್ರಿ ಸರ್ಕಲ್ ಎಡತಿರುವು ಪಡೆದು – ಸರ್ವಿಸ್ ರಸ್ತೆಯಲ್ಲಿ ಸಾಗಿ ಕಾವೇರಿ ಜಂಕ್ಷನ್, ಪಿ.ಜಿ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ, ಪ್ಯಾಲೇಸ್ ಕ್ರಾಸ್​ನಲ್ಲಿ ಎಡ ತಿರುವು ಪಡೆದು ಚಕ್ರವರ್ತಿ ಲೇಔಟ್​ನಲ್ಲಿ ಎಡ ತಿರುವು ಪಡೆದು ಮುಖ್ಯ ಆರಮನೆ ಮೈದಾನದ ಶಾರೂಕ್ ಖಾನ್ ಗ್ರೌಂಡ್​ ನಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.
  • ನಿರ್ಗಮನ: ಅರಮನೆ ಮೈದಾನದ ಶಾರೂಕ್ ಖಾನ್ ಗ್ರೌಂಡ್​ನಲ್ಲಿ ನಿಲುಗಡೆ ಮಾಡಿರುವವರು, ಸ್ಕೋವರ್ಡ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು ಮೇಕ್ರಿ ಸರ್ಕಲ್ ಮುಖಾಂತರ ಸಂಚರಿಸಬಹುದು.

ವಾಹನ ನಿಲುಗಡೆ ನಿಷೇಧಿಸಿರುವ ರಸ್ತೆಗಳು

ಪ್ಯಾಲೇಸ್ ರಸ್ತೆ, ಸರ್.ಸಿ.ವಿ.ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಎಂ.ವಿ.ಜಯರಾಮ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ಜಯಮಹಲ್ ರಸ್ತೆ, ರಮಣಮಹರ್ಷಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ