ಕೆಎಸ್ಆರ್ಟಿಸಿಗೆ ರಾಷ್ಟ್ರೀಯ ಹಾಗೂ ವಿಶ್ಚ ಮಟ್ಟದ ಪ್ರಶಸ್ತಿಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅದರ ನಾವೀನ್ಯತೆ ಮತ್ತು ಉದ್ಯೋಗಿ ಕಲ್ಯಾಣ ಕಾರ್ಯಕ್ರಮಗಳಿಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಉತ್ತಮ ಉದ್ಯೋಗದಾತ, ಆರೋಗ್ಯ ನಿರ್ವಹಣೆ, ವ್ಯವಹಾರ ನಾಯಕತ್ವ, ಮತ್ತು ಸುಸ್ಥಿರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ KSRTC ಗುರುತಿಸಲ್ಪಟ್ಟಿದೆ. ಈ ಪ್ರಶಸ್ತಿಗಳು ಮುಂಬೈನಲ್ಲಿ ಫೆಬ್ರವರಿ 17, 18 ಮತ್ತು 21 ರಂದು ಪ್ರದಾನ ಮಾಡಲಾಗುವುದು.

ಬೆಂಗಳೂರು, ಫೆಬ್ರವರಿ 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಸಾಧನೆಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. ಕೆಎಸ್‌ಆರ್‌ಟಿಸಿ ಜಾರಿಗೆ ತಂದ ಹೊಸ ಹೊಸ ಉಪಕ್ರಮಗಳು ಜನರಿಗೆ ಹತ್ತಿರವಾಗಿದೆ. ಈ ಕಾರಣದಿಂದ ಸಂಸ್ಥೆಗೆ ರಾಷ್ಟ್ರೀಯ ಹಾಗೂ ವಿಶ್ಚ ನಾವೀನ್ಯತೆ ಪ್ರಶಸ್ತಿಗಳು ಲಭಿಸಿವೆ.
ಪ್ರಶಸ್ತಿ ವಿವರ
- ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ
- ಕನಸುಗಳ ಕಂಪನಿಗಳು ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗೆ ಗೌರವ
- ವರ್ಷದ ವ್ಯವಹಾರ ನಾಯಕ ಪ್ರಶಸ್ತಿ ಕಾರ್ಯಸ್ಥಳ ಮತ್ತು ಜನಸಂಪತ್ತು ಅಭಿವೃದ್ಧಿ
- ವಿಶ್ವ ಆರೈಕೆ ಪ್ರಶಸ್ತಿ ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ
- ವಿಶ್ವ ನಾವಿನ್ಯತೆ ಪ್ರಶಸ್ತಿ ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆ
- ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ ಸುಸ್ಥಿರತೆಯ ಗೌರವ
- ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ
ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 17, 18 ಮತ್ತು 21 ರಂದು ಮುಂಬೈನಲ್ಲಿ ನಡೆಯಲಿದೆ.
KSRTC ಎಲ್ಲ ಬಸ್ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್
ಕೆಎಸ್‌ಆರ್‌ಟಿಸಿ ಬಹುತೇಕ ಎಲ್ಲಾ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಯುಪಿಐ ಆ್ಯಪ್ ಮೂಲಕ ಟಿಕೆಟ್‌ಗೆ ದುಡ್ಡು ಪಾವತಿಸಲು ಇದರಿಂದ ಸುಲಭವಾಗಲಿದೆ. ಕಂಡಕ್ಟರ್‌ಗಳಿಗೆ ಇಟಿಎಂ ಯಂತ್ರಗಳನ್ನು ನೀಡಲಾಗಿದೆ. ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ಗುರಿ ಹೊಂದಿರುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:29 am, Tue, 11 February 25