Investor’s Conclave: ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಗಣಿಗಾರಿಕೆ ವಲಯದ ಹೂಡಿಕೆದಾರರ ಸಮಾವೇಶ

| Updated By: ಆಯೇಷಾ ಬಾನು

Updated on: Dec 03, 2022 | 11:31 AM

ಬೆಂಗಳೂರಿನ ನಗರದ ಖಾಸಗಿ ಹೋಟೆಲ್​ನಲ್ಲಿ ಕಲ್ಲಿದ್ದಲು ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ವಾಣಿಜ್ಯ ಗಣಿ ಹರಾಜು ಮತ್ತು ದೇಶದ ಗಣಿಗಾರಿಕೆ ವಲಯದಲ್ಲಿನ ನಾನಾ ಅವಕಾಶಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯುತ್ತಿದೆ.

Investor’s Conclave: ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಗಣಿಗಾರಿಕೆ ವಲಯದ ಹೂಡಿಕೆದಾರರ ಸಮಾವೇಶ
ಖಾಸಗಿ ಹೋಟೆಲ್​ನಲ್ಲಿ ಗಣಿಗಾರಿಕೆ ವಲಯದ ಹೂಡಿಕೆದಾರರ ಸಮಾವೇಶ
Follow us on

ಬೆಂಗಳೂರು: ನಗರದ ಖಾಸಗಿ ಹೋಟೆಲ್​ನಲ್ಲಿ ಕಲ್ಲಿದ್ದಲು ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಹಾಲಪ್ಪ ಆಚಾರ್ ಉಪಸ್ಥಿತರಿದ್ದಾರೆ. ವಾಣಿಜ್ಯ ಗಣಿ ಹರಾಜು ಮತ್ತು ದೇಶದ ಗಣಿಗಾರಿಕೆ ವಲಯದಲ್ಲಿನ ನಾನಾ ಅವಕಾಶಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯುತ್ತಿದೆ. ಹಾಗೂ ದೇಶದ ಅನೇಕ ಗಣಿ ಹೂಡಿಕೆದಾರರು ಸಮಾವೇಶದಲ್ಲಿ ಭಾಗಿಯಾಗಿದ್ದು ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯ ಬಗ್ಗೆ ಮಾಹಿತಿ ವಿನಿಮಯವಾಗುತ್ತಿದೆ.

ಹೂಡಿಕೆದಾರರ ಶೃಂಗಸಭೆ ಎರಡು ದಿನಗಳ ಕಾಲ ನಡೆಯುತ್ತಿದ್ದು ಗುರುವಾರ ಮುಂಬೈನಲ್ಲಿ ನಡೆದ ಸಮಾವೇಶ ಯಶಸ್ವಿಯಾಗಿದೆ. ಸದ್ಯ ಶನಿವಾರ(ಇಂದು) ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಆಸಕ್ತ ಹೂಡಿಕೆದಾರರು ಭಾಗವಹಿಸಲು ಅವಕಾಶ ನೀಡಲಾಗಿದೆ. ಈ ಸಮಾವೇಶವು ದೇಶದಲ್ಲಿ ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯ ಅರಿಯಲು ನೆರವಾಗುತ್ತದೆ. ವಾಣಿಜ್ಯ ಗಣಿ ಹರಾಜು ಮತ್ತು ದೇಶದ ಗಣಿಗಾರಿಕೆ ವಲಯದಲ್ಲಿನ ನಾನಾ ಅವಕಾಶಗಳ ಕುರಿತೂ ಸಮಾವೇಶದಲ್ಲಿ ಮಾಹಿತಿ ಸಿಗಲಿದೆ. ಸಮಾವೇಶದಲ್ಲಿ ಸಿಎಂ ಬಸವರಾಜಬೊಮ್ಮಾಯಿ ಪಾಲ್ಗೊಳ್ಳಲಿದ್ದು, ನಾನಾ ವಾಣಿಜ್ಯ ಗಣಿ ಮೆಗಾ ಹರಾಜು ಪ್ರಕ್ರಿಯೆ ಕುರಿತಂತೆಯೂ ಹೂಡಿಕೆದಾರರಿಗೆ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: Investor’s Conclave: ಡಿಸೆಂಬರ್ 3ರಂದು ಬೆಂಗಳೂರಿನಲ್ಲಿ ಗಣಿಗಾರಿಕೆ ವಲಯದ ಹೂಡಿಕೆದಾರರ ಸಮಾವೇಶ

6 ನೇ ಸುತ್ತಿನ ವಾಣಿಜ್ಯ ಹರಾಜಿನಲ್ಲಿ 133 ಕಲ್ಲಿದ್ದಲು ಗಣಿಗಳನ್ನು, 5 ನೇ ಹಂತದ ವಾಣಿಜ್ಯ ಹರಾಜಿನ 2 ನೇ ಪ್ರಯತ್ನದಲ್ಲಿ 8 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ 141 ಕಲ್ಲಿದ್ದಲು ಗಣಿಗಳು ಮುಖ್ಯವಾಗಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್ ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸೇರಿವೆ. ಸಂಚಿತ ಪಿ.ಆರ್.ಸಿ. 305 ಎಂ.ಟಿ.ಪಿ.ಎ. ಗಾತ್ರವನ್ನು ಹೊಂದಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:31 am, Sat, 3 December 22