ಹೊಸ ವರ್ಷಕ್ಕೆ ಮುನ್ನವೇ 37 ಐಪಿಎಸ್ಗಳ ವರ್ಗಾವಣೆ, 46 IAS ಅಧಿಕಾರಿಗಳಿಗೆ ಬಡ್ತಿ: ಸರ್ಕಾರ ಆದೇಶ
ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ 37 ಐಪಿಎಸ್ ಅಧಿಕಾರಿಗಳು ಮತ್ತು 46 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಆ ಮೂಲಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಕೆಲ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಾತಿನಿಧಿಕ ಚಿತ್ರ
Follow us on
ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ 37 ಐಪಿಎಸ್ (IPS officers) ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರೆ, 46 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಲಾಗಿದೆ. ಆ ಮೂಲಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಕೆಲ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದರೆ, ಕೇಂದ್ರ ಸೇವೆಯಲ್ಲಿರುವ, ಅಧ್ಯಯನ ರಜೆಯಲ್ಲಿರುವ ಅಧಿಕಾರಿಗಳು, ಕೆಲ ದಿನಗಳ ಹಿಂದಷ್ಟೇ ಸ್ಥಳ ನಿಯೋಜಿಸಲ್ಪಟ್ಟ ಅಧಿಕಾರಿಗಳು ಸೇರಿದಂತೆ 46 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
37 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕಮಲ್ ಪಂತ್: ನೇಮಕಾತಿ ವಿಭಾಗದ ಡಿಜಿಪಿ
ಅಲೋಕ್ ಕುಮಾರ್: ರಸ್ತೆ ಸುರಕ್ಷತಾ ವಿಭಾಗದ ವಿಶೇಷ ಆಯುಕ್ತ
ಸೀಮಂತ್ ಕುಮಾರ್ ಸಿಂಗ್: ಎಡಿಜಿಪಿ, ಬಿಎಂಟಿಎಫ್
ಹರಿಶೇಖರನ್: ಎಡಿಜಿಪಿ, ಹೋಂಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್
ನಂಜುಂಡಸ್ವಾಮಿ: ಅಗ್ನಿಶಾಮಕ ಮತ್ತು ತುರ್ತು ಸೇವೆ ಎಡಿಜಿಪಿ
ಚಂದ್ರಗುಪ್ತಾ: ಬೆಂಗಳೂರು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ
ತ್ಯಾಗರಾಜನ್: ಪೂರ್ವ ವಲಯ ಐಜಿಪಿ
ಅಮಿತ್ ಸಿಂಗ್: ಪಶ್ಚಿಮ ವಲಯ ಐಜಿಪಿ
ರವಿಕುಮಾರ್: ಇಂಟಲಿಜೆನ್ಸ್ ಡಿಐಜಿ
ಶಾಂತನು ಸಿನ್ಹಾ: ಪೊಲೀಸ್ ಉಪ ಮಹಾನಿರೀಕ್ಷಕರು
ದಿವ್ಯಾ ವಿ.ಗೋಪಿನಾಥ್: ಪೊಲೀಸ್ ಉಪ ಮಹಾನಿರೀಕ್ಷಕರು ಮತ್ತು ನಿರ್ದೇಶಕರು, ವಿಧಿವಿಜ್ಞಾನ ಪ್ರಯೋಗಾಲಯ
ಸುಧೀರ್ ಕುಮಾರ್ ರೆಡ್ಡಿ: ಪೊಲೀಸ್ ಜನರಲ್, ಅರಣ್ಯ ಕೋಶ, ಅಪರಾಧ ತನಿಖಾ ಇಲಾಖೆ