ಚಾರ್ಜ್ ತೆಗೆದುಕೊಳ್ಳದ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಒಂದು ವಾರ ಗಡುವು ನೀಡಿದ ಡಿಜಿ ಐಜಿಪಿ ಅಲೋಕ್ ಮೋಹನ್
ವರ್ಗಾವಣೆ ಆದೇಶ ಹೊರಡಿಸಿದರೂ 40ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ಗಳು ಜಾರ್ಜ್ ತೆಗೆದುಕೊಂಡಿಲ್ಲ. ಇದಕ್ಕೆ ಕಾರಣ ಕೇಳಿ ಜಾರ್ಜ್ ತೆಗೆದುಕೊಳ್ಳಲು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಐಜಿಪಿ) ಅಲೋಕ್ ಮೋಹನ್ ಒಂದು ವಾರದ ಗಡುವು ನೀಡಿದ್ದಾರೆ. ಅಮಾನತು ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಡಿಜಿ ಡಿಜಿಪಿ ಅಲೋಕ್ ಮೋಹನ್
ಬೆಂಗಳೂರು, ಡಿ.12: ವರ್ಗಾವಣೆ ಆದೇಶ ಹೊರಡಿಸಿದರೂ ಜಾರ್ಜ್ ತೆಗೆದುಕೊಳ್ಳದ 40ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG IGP) ಅಲೋಕ್ ಮೋಹನ್ (Alok Mohan) ಅವರು ಒಂದು ವಾರದ ಗಡುವು ನೀಡಿದ್ದಾರೆ.
ವರ್ಗಾವಣೆ ಆದೇಶ ಹೊರಡಿಸಿ ನಾಲ್ಕರಿಂದ ಐದು ತಿಂಗಳಾದರೂ ಚಾರ್ಜ್ ತೆಗೆದುಕೊಳ್ಳದ ಹಿನ್ನೆಲೆ 44 ಇನ್ಸ್ಪೆಕ್ಟರ್ಗಳಿಗೆ ಜಾರ್ಜ್ ತೆಗೆದುಕೊಳ್ಳಲು ಒಂದು ವಾರದ ಗಡುವ ನೀಡಿ ಆದೇಶಿಸಿದ ಡಿಜಿ ಐಜಿಪಿ, ಚಾರ್ಜ್ ತೆಗೆದುಕೊಳ್ಳದೇ ಇರಲು ಸೂಕ್ತ ಕಾರಣ ನೀಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ಸಮಂಜಸವಲ್ಲದ ಕಾರಣ ನೀಡಿದರೆ ಅಂತಹ ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Tue, 12 December 23