ಕರ್ನಾಟಕ ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ವಿಧೇಯಕ-2023 ಮಂಡನೆ, ಯಾವ ವಾಹನಕ್ಕೆ ಎಷ್ಟು ತೆರಿಗೆ?

Karnataka Motor Vehicle Tax Revision Bill: ಕರ್ನಾಟಕ ಮೋಟಾರು ವಾಹನಗಳ ತೆರಿಗೆ (2ನೇ ತಿದ್ದುಪಡಿ) ವಿಧೇಯಕ-2023 ಮಂಡನೆಯಾಗಿದೆ. ಜೀವಿತಾವಧಿ ತೆರಿಗೆ ವಿಧಿಸುವುದನ್ನು ಹಿಂಪಡೆದು ಹಿಂದಿನಂತೆಯೇ ತ್ರೈಮಾಸಿಕ ಅವಧಿಯಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸುವ ವಿಧೇಯಕ ಇದಾಗಿದೆ. ಹಾಗಾದ್ರೆ, ಯಾವ ವಾಹನಕ್ಕೆ ಎಷ್ಟು ತೆರಿಗೆ ಎನ್ನುವ ವಿವರ ಈ ಕೆಳಗಿನಂತಿದೆ.

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ವಿಧೇಯಕ-2023 ಮಂಡನೆ, ಯಾವ ವಾಹನಕ್ಕೆ ಎಷ್ಟು ತೆರಿಗೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 12, 2023 | 9:30 PM

ಬೆಳಗಾವಿ, (ಡಿಸೆಂಬರ್ 12): ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಂದು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ( 2ನೇತಿದ್ದುಪಡಿ) ವಿಧೇಯಕ-2023 (Karnataka Motor Vehicle Tax Revision Bill 2023) ಮಂಡನೆಯಾಗಿದೆ. 2024ರ ಜನವರಿ 1ರಿಂದ ಜಾರಿಗೆ ಅನುಕೂಲವಾಗುವಂತೆ ವಿಧೇಯಕ ಮಂಡನೆ ಮಾಡಲಾಗಿದೆ. ಜೀವಿತಾವಧಿ ತೆರಿಗೆಯಿಂದ ಸರಕು ಸಾಗಣೆ ವಾಹನ ಹಾಗೂ ಕ್ಯಾಬ್ ಮಾಲೀಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಈ ತಿದ್ದುಪಡಿ ವಿಧೇಯಕ ಜಾರಿಗೆ ತರಲಾಗುತ್ತಿದೆ. ಜೀವಿತಾವಧಿ ತೆರಿಗೆ ವಿಧಿಸುವುದನ್ನು ಹಿಂಪಡೆದು ಹಿಂದಿನಂತೆಯೇ ತ್ರೈಮಾಸಿಕ ಅವಧಿಯಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ.

1.5 ಟನ್‌ ತೂಕದಿಂದ 12 ಟನ್‌ ಒಟ್ಟು ತೂಕದ ಸರಕು ಸಾಗಣೆ ವಾಹನಗಳ ಪೂರ್ಣಾವಧಿ ತೆರಿಗೆ, ರಾಜ್ಯದ ಹೊರಗೆ ನೋಂದಣಿಯಾಗಿರುವ ಕ್ಯಾಬ್‌ಗಳ ಪೂರ್ಣಾವಧಿ ತೆರಿಗೆ ವಿಧಿಸಲು ಕಳೆದ ಜುಲೈನಲ್ಲಿ ಈ ವಿಧೇಯಕ ವಿಧಾನ ಮಂಡಲದಲ್ಲಿ ಅಂಗೀಕಾರವಾಗಿತ್ತು. ಆದರೆ ಜೀವಿತಾವಧಿ ತೆರಿಗೆ ಪಾವತಿಯಿಂದ ತಮಗೆ ಹೊರೆಯಾಗುತ್ತದೆ ಎಂದು ವಾಹನ ಮಾಲೀಕರು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ಇರುವ ವಾಹನಗಳಿಗೆ ಹಿಂದಿನಂತೆಯೇ ತ್ರೈಮಾಸಿಕ ಅವಧಿಗೆ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸುವ ಅಂಶ ಈ ತಿದ್ದುಪಡಿ ವಿಧೇಯಕ ಒಳಗೊಂಡಿದೆ.

ಯಾವ ವಾಹನಕ್ಕೆ ಎಷ್ಟು ತೆರಿಗೆ?(ಪ್ರಸ್ತುತ ಇರುವುದು)

  • 1.5 ಟನ್‍ನಿಂದ 2 ಟನ್ ತೂಕದ ಹೊಸ ಸರಕು ಸಾಗಣೆ ವಾಹನಗಳಿಗೆ 20 ಸಾವಿರ ರೂ.
  • 2 ರಿಂದ 3 ಟನ್ ವಾಹನಗಳಿಗೆ 30 ಸಾವಿರ ರೂ.
  • 3 ರಿಂದ 5.5 ಟನ್ ವಾಹನಗಳಿಗೆ 40 ಸಾವಿರ ರೂ.
  • 5.5 ರಿಂದ 7.5 ಟನ್ ತೂಕದ ವಾಹನಗಳಿಗೆ 60 ಸಾವಿರ ರೂ.
  • 7.5 ರಿಂದ 9.5 ಟನ್ ವಾಹನಗಳಿಗೆ 80 ಸಾವಿರ ರೂ.
  • 9.5 ಟನ್‍ನಿಂದ 12 ಟನ್ ತೂಕದ ವಾಹನಗಳಿಗೆ 1 ಲಕ್ಷ ರೂ. ಜೀವಿತಾವಧಿ ತೆರಿಗೆ ನಿಗದಿ
  • 5 ಲಕ್ಷ ರೂ. ಮೀರದ ಹೊಸ ಸಾರ್ವಜನಿಕ ವಾಹನಗಳ ನೋಂದಣಿಗೆ ಅದರ ಬೆಲೆಯ ಶೇ. 13ರಷ್ಟು.
  • 10 ಲಕ್ಷದೊಳಗಿನ ವಾಹನಗಳಿಗೆ ಅದರ ಬೆಲೆಯ ಶೇ.14.
  • 20 ಲಕ್ಷದೊಳಗಿನ ವಾಹನಗಳಿಗೆ ಅದರ ಬೆಲೆಯ ಶೇ. 17
  • 20 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಅದರ ಬೆಲೆಯ ಶೇ.18
  • ವಿದ್ಯುತ್ ಚಾಲಿತ ವಾಹನಗಳಿಗೆ ಅದರ ಬೆಲೆಯ ಶೇ. 4ರಷ್ಟು ತೆರಿಗೆ ನಿಗದಿ.

ಹಿಂದಿನ ತೆರಿಗೆ ಎಷ್ಟಿತ್ತು?

  • 1.5-2 ಟನ್ ವಾಹನ –10,000 ರೂ.
  • 2-3 ಟನ್ ವಾಹನ –15,000 ರೂ.
  • 3-5.5 ಟನ್ ವಾಹನ – 20,000 ರೂ.
  • 5.5-7.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 60,000 ರೂ.)
  • 7.5-9.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 80,000 ರೂ.)
  • 9.5-12 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 1 ಲಕ್ಷ ರೂ.)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ