ಹಿಜಾಬ್ ವಿವಾದ ಹಿನ್ನೆಲೆ: ಜಮ್ಮು- ಕಾಶ್ಮೀರದ ವಿದ್ಯಾರ್ಥಿಗಳ ಬಳಿ ಮಾಹಿತಿ ಕೇಳಿದ ಆಂತರಿಕ ಭದ್ರತಾ ದಳ

| Updated By: ganapathi bhat

Updated on: Feb 15, 2022 | 3:10 PM

ರಾಜ್ಯದಲ್ಲಿರುವ ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿಗಳು, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳಿಗೆ ಮಾಹಿತಿ ಕೇಳಿ ಐಎಸ್​ಡಿ ಸೂಚಿಸಿದೆ. ಹಿಜಾಬ್ ಪರ/ ವಿರೋಧ, ಪ್ರಚೋದನಕಾರಿ ಪೋಸ್ಟ್ ಹಾಕದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ಕೊಡಲಾಗಿದೆ.

ಹಿಜಾಬ್ ವಿವಾದ ಹಿನ್ನೆಲೆ: ಜಮ್ಮು- ಕಾಶ್ಮೀರದ ವಿದ್ಯಾರ್ಥಿಗಳ ಬಳಿ ಮಾಹಿತಿ ಕೇಳಿದ ಆಂತರಿಕ ಭದ್ರತಾ ದಳ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದ ಹೆಚ್ಚಾಗುತ್ತಿರುವ ಹಿನ್ನೆಲೆ ಜಮ್ಮು- ಕಾಶ್ಮೀರದ ವಿದ್ಯಾರ್ಥಿಗಳ ಬಳಿ ಆಂತರಿಕ ಭದ್ರತಾ ದಳ (ISD) ಮಾಹಿತಿ ಕೇಳಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಐಎಸ್‌ಡಿ ಮಾಹಿತಿ ಕೇಳಿದೆ. ರಾಜ್ಯದಲ್ಲಿರುವ ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿಗಳು, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳಿಗೆ ಮಾಹಿತಿ ಕೇಳಿ ಐಎಸ್​ಡಿ ಸೂಚಿಸಿದೆ. ಹಿಜಾಬ್ ಪರ/ ವಿರೋಧ, ಪ್ರಚೋದನಕಾರಿ ಪೋಸ್ಟ್ ಹಾಕದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ಕೊಡಲಾಗಿದೆ.

ಹಾಸನ ಜಿಲ್ಲೆ ಬೇಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲ್ಲವೆಂದು ಪಟ್ಟು ಹಿಡಿದ ಘಟನೆ ನಡೆದಿದೆ. ಪಟ್ಟು ಬಿಡದೆ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡಿದ್ದಾರೆ. ಮತ್ತೊಂದೆಡೆ, ಹಿಜಾಬ್ ತೆಗೆಯಿರಿ ಎಂದು ಹೇಳುವುದಕ್ಕೆ ಅಧಿಕಾರವಿಲ್ಲ. ನಮ್ಮನ್ನು ಹೆತ್ತ ತಂದೆ-ತಾಯಿಗೂ ಅಧಿಕಾರ ಇರಲ್ಲ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಇವರು ಏಕೆ ಹೇಳ್ತಾರೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ವಿದ್ಯಾರ್ಥಿನಿ ಪ್ರಶ್ನೆ ಮಾಡಿದ್ದಾರೆ. ಎಷ್ಟೇ ಮನವಿ ಮಾಡಿದರೂ ವಿದ್ಯಾರ್ಥಿಗಳು ಕೇಳದ ಹಿನ್ನೆಲೆ ಅನಿವಾರ್ಯವಾಗಿ ಇಂದಾವರ ಪ್ರೌಢಶಾಲೆಗೆ ರಜೆ ನೀಡಿದ್ದೇವೆ ಎಂದು ಚಿಕ್ಕಮಗಳೂರು ಡಿಡಿಪಿಐ ತಿಳಿಸಿದ್ದಾರೆ.

ಉಡುಪಿಯಲ್ಲಿ ಹಿಜಾಬ್ ಗಾಗಿ ಪೋಷಕರ ಹೋರಾಟ ನಡೆದಿದೆ. ಸಂಯುಕ್ತ ಉರ್ದು ಪ್ರೌಢ ಶಾಲೆ ಬಳಿ ಪೋಷಕರ ಅಸಮಾಧಾನ ಕೇಳಿಬಂದಿದೆ. ಕಾಪು ತಾಲೂಕು ಮಲ್ಲಾರು ಗ್ರಾಮದ ಪಕೀರ್ಣಕಟ್ಟೆಯಲ್ಲಿ ಪೂರ್ವಭಾವಿ ಪರೀಕ್ಷೆ ನಂತರ ಪೋಷಕರ ಸಭೆ ನಡೆಸಲಾಗಿದೆ. ಜಿಲ್ಲಾ ಮೀಸಲುಪಡೆ ಪೊಲೀಸ್ ವಾಹನ ನಿಯೋಜನೆ ಮಾಡಲಾಗಿದೆ. ಶಾಲಾ ಆವರಣದಿಂದ ಸಾರ್ವಜನಿಕರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಪರಿಸ್ಥಿತಿ ಶಾಂತವಾದ ಬಳಿಕ ತಹಶೀಲ್ದಾರ್ ಡಿಡಿಪಿಐ ಶಾಲೆಯಿಂದ ವಾಪಸ್ ಆಗಿದ್ದಾರೆ.

ಹಿಜಾಬ್‌ಗೆ ಅನುಮತಿ ನೀಡದ ಹಿನ್ನೆಲೆ 10 ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗಿದ್ದಾರೆ. ಪರೀಕ್ಷೆ ಬರೆಯದೆ ವಾಪಸಾಗಿದ್ದಾರೆ. ಸರ್ಕಾರಿ ಪ್ರೌಢಶಾಲೆಯ 10 ವಿದ್ಯಾರ್ಥಿನಿಯರು ಹಿಂತಿರುಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿರುವ ಶಾಲೆಯಲ್ಲಿ ಘಟನೆ ನಡೆದಿದೆ.

ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿ ವಾಪಸಾದ ವಿಚಾರಕ್ಕೆ ಇದೇನು ದೊಡ್ಡ ಸಂಗತಿಯಲ್ಲ ಎಂದು ಡಿಡಿಪಿಐ ರಮೇಶ್ ಹೇಳಿದ್ದಾರೆ. ಹೈಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಹೀಗಾಗಿ ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ. ಶಾಲೆಯಲ್ಲಿದ್ದ 83 ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪೈಕಿ 36 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಉಳಿದವರು ಶಾಲೆಗೆ ಗೈರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಎಲ್ಲರೂ ಸೇರಿ ಈ ಸಮಸ್ಯೆಯನ್ನು ತಿಳಿಗೊಳಿಸಬೇಕು ಎಂದು ಶಿವಮೊಗ್ಗ ಡಿಡಿಪಿಐ ರಮೇಶ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಕ್ಕಳ ಮೇಲಿರುವ ಕಾಳಜಿಯಿಂದ ಹಾಗೆ ಹೇಳಿದ್ದು; ಹಿಜಾಬ್ ಹೇಳಿಕೆ ಕುರಿತು ಕ್ಷಮೆ ಕೇಳಿದ ಜಮೀರ್ ಅಹ್ಮದ್

ಇದನ್ನೂ ಓದಿ: ಬಿಹಾರದಲ್ಲಿ ಹಿಜಾಬ್ ಸಮಸ್ಯೆಯಲ್ಲ,ನಾವು ರಾಜ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ: ನಿತೀಶ್ ಕುಮಾರ್

Published On - 2:42 pm, Tue, 15 February 22