IT Raid: ಡಿ ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಣಾ ಸಂಸ್ಥೆಯ ಮೇಲೆ ಐಟಿ ಅಧಿಕಾರಿಗಳ ದಾಳಿ

| Updated By: ಸಾಧು ಶ್ರೀನಾಥ್​

Updated on: Oct 12, 2021 | 1:16 PM

ತಾಜಾ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುತ್ತಿದ್ದ ಜಾಹೀರಾತು ಸಂಸ್ಥೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

IT Raid: ಡಿ ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಣಾ ಸಂಸ್ಥೆಯ ಮೇಲೆ ಐಟಿ ಅಧಿಕಾರಿಗಳ ದಾಳಿ
ಡಿ ಕೆ ಶಿವಕುಮಾರ್
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳ ತಂಡ ಮತ್ತೊಂದು ಸುತ್ತಿನ ಐಟಿ ರೇಡ್​ ನಡೆಸುತ್ತಿದೆ. ತಾಜಾ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುತ್ತಿದ್ದ ಜಾಹೀರಾತು ಸಂಸ್ಥೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನರೇಶ್ ಅರೋರಾ ಮಾಲಿಕತ್ವದ ಡಿಸೈನ್ ಬಾಕ್ಸ್ ಡಿ ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದ ಸಂಸ್ಥೆಯಾಗಿದೆ.

ಡಿಸೈನ್ ಬಾಕ್ಸ್ ಸಂಸ್ಥೆಯು ಖಾಸಗಿಯಾಗಿ ಡಿ‌ಕೆ ಶಿವಕುಮಾರ್ ಅವರ ಚುನಾವಣಾ‌ ಸಮೀಕ್ಷೆ ಜವಾಬ್ದಾರಿ ಹೊತ್ತಿತ್ತು. ಕಳೆದ ತಿಂಗಳು ಸಂಸ್ಥೆಯ ಜೊತೆ ಡಿ ಕೆ ಶಿವಕುಮಾರ್ ಒಪ್ಪಂದ ಕಡಿದುಕೊಂಡಿದ್ದರು. ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಇರುವ ಡಿಸೈನ್ ಬಾಕ್ಸ್ ಕಚೇರಿ ಮೇಲೆ ಇದೀಗ ಐಟಿ ರೇಡ್​ ನಡೆದಿದೆ.

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಾವೇರಿ ಜಂಕ್ಷನ್‌ ಬಳಿಯಿರುವ ಡಿಸೈನ್ ಬಾಕ್ಸ್ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾವೇರಿ ಜಂಕ್ಷನ್‌ ಬಳಿ ಬಹುಮಹಡಿ ಕಟ್ಟಡದ ಎರಡನೇ ಅಂತಸ್ತಿನಲ್ಲಿರುವ ಡಿಸೈನ್ ಬಾಕ್ಸ್ ಕಚೇರಿಯ ಮೇಲೆ ಬೆಳಗ್ಗೆ 6.30ಕ್ಕೆ 2 ಕಾರುಗಳಲ್ಲಿ ಬಂದಿದ್ದ IT ಅಧಿಕಾರಿಗಳು ಆಗಮಿಸಿದ್ದಾರೆ. ಸಂಸ್ಥೆಯು ಖಾತೆ ಹೊಂದಿರುವ ಬ್ಯಾಂಕ್‌ಗೆ ತೆರಳಿ ಒಂದು ತಂಡ ಮಾಹಿತಿ ಸಂಗ್ರಹಿಸಿದೆ. ಬ್ಯಾಂಕ್‌ಗೆ ತೆರಳಿ ಸಂಸ್ಥೆಯ ಖಾತೆ, ವಹಿವಾಟು ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಐಟಿ ಅಧಿಕಾರಿಗಳು JW ಮ್ಯಾರಿಯೇಟ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಡಿಜೈನ್ ಬಾಕ್ಸ್ ಮಾಲಿಕ ನರೇಶ್ ಅರೋರ ಇದ್ದ ಐಶಾರಾಮಿ ಹೋಟೆಲ್ ರೂಮ್ ಪರಿಶೀಲನೆ ನಡೆಸಿದ್ದಾರೆ.

ರಾಜಕೀಯ ನಾಯಕರಿಗೆ ಪೊಲಿಟಿಕಲ್ ಕ್ಯಾಂಪೇನ್ ಸೇರಿ ಸೋಷಿಯಲ್ ಮೀಡಿಯಾ ಕ್ಯಾಂಪೇನ್ ನಡೆಸುವ ಡಿಸೈನ್ ಬಾಕ್ಸ್ ಕಂಪನಿ ಪ್ರಸ್ತುತ ಪಂಜಾಬ್‌ ಕಾಂಗ್ರೆಸ್‌ ಸರ್ಕಾರದ ಪರ ಕ್ಯಾಂಪೇನ್ ನಡೆಸುತ್ತಿದೆ. ಪುದುಚೆರಿ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆಯಲ್ಲಿಯೂ ಡಿಸೈನ್ ಬಾಕ್ಸ್​ ಸಂಸ್ಥೆ ಪೊಲಿಟಿಕಲ್ ಸೋಷಿಯಲ್ ಮೀಡಿಯಾ ಕ್ಯಾಂಪೇನ್ ನಡೆಸಿತ್ತು. ಡಿಸೈನ್ ಬಾಕ್ಸ್​ ಸಂಸ್ಥೆಯು ಬಹುತೇಕ ಕಾಂಗ್ರೆಸ್ ನಾಯಕರಿಗೆ ಕ್ಯಾಂಪೇನ್ ಮಾಡಿತ್ತು ಎಂಬುದು ಗಮನಾರ್ಹ. ಇತ್ತ ಬೆಂಗಳೂರಿನಲ್ಲಿ ನರೇಶ್‌ ಅರೋರಾ ಮಾಲೀಕತ್ವದ ಡಿಸೈನ್ ಬಾಕ್ಸ್​ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿರುವಾಗ ಅತ್ತ ಪಂಜಾಬ್‌ ಮತ್ತು ದೆಹಲಿಯಲ್ಲಿಯೂ ಏಕಕಾಲಕ್ಕೆ ಐಟಿ ದಾಳಿ ನಡೆಸಲಾಗಿದೆ.

Also Read:
ಬಿಟ್ಟೂ ಬಿಡದೆ ರೇಡ್ ನಡೆಸ್ತಿರೊ ಐಟಿ ಅಧಿಕಾರಿಗಳು: ಬಿಎಸ್​​ವೈ ಆಪ್ತನ ಆಪ್ತ ಈಗ ದಾಳಿಗೆ ಗುರಿ! ಹೆಚ್ ​ಡಿ ಕುಮಾರಸ್ವಾಮಿಗೂ ಆಪ್ತ

Also Read:
ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಇಂದು ದೆಹಲಿ ಪ್ರಯಾಣ

Published On - 12:13 pm, Tue, 12 October 21