AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟ್ಟೂ ಬಿಡದೆ ರೇಡ್ ನಡೆಸ್ತಿರೊ ಐಟಿ ಅಧಿಕಾರಿಗಳು: ಬಿಎಸ್​​ವೈ ಆಪ್ತನ ಆಪ್ತ ಈಗ ದಾಳಿಗೆ ಗುರಿ! ಹೆಚ್ ​ಡಿ ಕುಮಾರಸ್ವಾಮಿಗೂ ಆಪ್ತ

ಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಟ್ಟೂ ಬಿಡದೆ 32 ಗಂಟೆಗಳಿಂದ ನಿರಂತರವಾಗಿ ರೇಡ್ ನಡೆಸ್ತಿದ್ದಾರೆ. ಮತ್ತೊಬ್ಬ ಕ್ಲಾಸ್ 1 ಕಾಂಟ್ರ್ಯಾಕ್ಟರ್ ಮನೆ ಮೇಲೆ ದಾಳಿ ಮುಂದುವರೆದಿದೆ. ಬಸವೇಶ್ವರ ನಗರದಲ್ಲಿರುವ ಕ್ಲಾಸ್ 1 ಕಂಟ್ರ್ಯಾಕ್ಟರ್ ಸೋಮಶೇಖರ್ ಮನೆ ಮೇಲೆ ಐಟಿ ದಾಳಿ ನಡೆದಿದೆ.

ಬಿಟ್ಟೂ ಬಿಡದೆ ರೇಡ್ ನಡೆಸ್ತಿರೊ ಐಟಿ ಅಧಿಕಾರಿಗಳು: ಬಿಎಸ್​​ವೈ ಆಪ್ತನ ಆಪ್ತ ಈಗ ದಾಳಿಗೆ ಗುರಿ! ಹೆಚ್ ​ಡಿ ಕುಮಾರಸ್ವಾಮಿಗೂ ಆಪ್ತ
ಬಿಟ್ಟೂ ಬಿಡದೆ ರೇಡ್ ನಡೆಸ್ತಿರೊ ಐಟಿ ಅಧಿಕಾರಿಗಳು: ಯಡಿಯೂರಪ್ಪ ಆಪ್ತನ ಆಪ್ತ ಈಗ ದಾಳಿಗೆ ಗುರಿ!
TV9 Web
| Edited By: |

Updated on:Oct 08, 2021 | 1:33 PM

Share

ಬೆಂಗಳೂರು: ಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಟ್ಟೂ ಬಿಡದೆ 32 ಗಂಟೆಗಳಿಂದ ನಿರಂತರವಾಗಿ ರೇಡ್ ನಡೆಸ್ತಿದ್ದಾರೆ. ಮತ್ತೊಬ್ಬ ಕ್ಲಾಸ್ 1 ಕಾಂಟ್ರ್ಯಾಕ್ಟರ್ ಮನೆ ಮೇಲೆ ದಾಳಿ ಮುಂದುವರೆದಿದೆ. ಬಸವೇಶ್ವರ ನಗರದಲ್ಲಿರುವ ಕ್ಲಾಸ್ 1 ಕಂಟ್ರ್ಯಾಕ್ಟರ್ ಸೋಮಶೇಖರ್ ಮನೆ ಮೇಲೆ ಐಟಿ ದಾಳಿ ನಡೆದಿದೆ.

ಎಚ್.ಡಿ. ಕುಮಾರಸ್ವಾಮಿಗೂ ಆಪ್ತನಾದ ಸೋಮಶೇಖರ್ ಮನೆ ಮೇಲೆ ದಾಳಿ: ಸೋಮಶೇಖರ್ ಮನೆಯ ಮೇಲೆ ನಿನ್ನೆಯೇ ದಾಳಿ ನಡೆಸಿದ್ದ ಐಟಿ ತಂಡದಿಂದ ಇಂದೂ ಶೋಧ ಕಾರ್ಯ ಮುಂದುವರಿದಿದೆ. ದಾಖಲಾತಿಗಳು, ಕಡತಗಳಿಗಾಗಿ ಹುಡುಕಾಟ ನಡೆಸ್ತಿದಾರೆ ಐಟಿ ಅಧಿಕಾರಿಗಳು. ಕುತೂಹಲಕಾರಿ ಸಂಗತಿಯೆಂದರೆ ಬಿಎಸ್​ ಯಡಿಯೂರಪ್ಪಅವರ ಆಪ್ತ, ಬಿಎಂಟಿಸಿ ಕಂಡಕ್ಟರ್​ ಎಂಆರ್​ ಉಮೇಶ್ ಗೆ ಆಪ್ತರಾಗಿರುವ ಸೋಮಶೇಖರ್ ಎಂಬುವವರ ಮನೆ ಇದಾಗಿದೆ. ಸೋಮಶೇಖರ್ ಅರಕಲಗೂಡು ಮೂಲದವರು. ಬಿಎಸ್​ ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರಿಗೂ ಸೋಮಶೇಖರ್ ಆಪ್ತನಾಗಿದ್ದ ಎಂಬುದು ಗಮನಾರ್ಹ.

ಬೆಳಗಾವಿ ಜಿಲ್ಲೆಯಲ್ಲೂ ಐಟಿ ಇಲಾಖೆ ಅಧಿಕಾರಿಗಳ ರೇಡ್

ಬೆಳಗಾವಿ ಜಿಲ್ಲೆಯಲ್ಲೂ ಐಟಿ ಇಲಾಖೆ ಅಧಿಕಾರಿಗಳ ರೇಡ್ ನಡೆದಿದೆ. ಉದ್ಯಮಿ, ಗುತ್ತಿಗೆದಾರ ಜಯಶೀಲ ಶೆಟ್ಟಿ ಮನೆ ಮೇಲೆ ರೇಡ್ ಆಗಿದೆ. ಬೆಳಗಾವಿ ಜಿಲ್ಲೆ ಗೋಕಾಕ್​​ ತಾಲೂಕಿನ ಘಟಪ್ರಭಾ ಗ್ರಾಮದ ಜಯಶೀಲ ಶೆಟ್ಟಿ ಮನೆಯಲ್ಲಿ ಶೋಧ ಆರಂಭವಾಗಿದೆ. ಗೋವಾ, ಬೆಳಗಾವಿಯ 16 ಅಧಿಕಾರಿಗಳ ತಂಡ ಬೆಳಗ್ಗೆಯಿಂದ ದಾಖಲಾತಿ ಪರಿಶೀಲನೆ ನಡೆಸುತ್ತಿದೆ.

ಕೇಂದ್ರದ ಮಿನಿಸ್ಟಿರಿ ಆಫ್ ಫಿನಾನ್ಸ್ ದಾಳಿಯನ್ನು ನೇರವಾಗಿ ಮಾನಿಟರ್ ಮಾಡ್ತಿದೆ:

ಇನ್ನು, ರಾಜ್ಯದಲ್ಲಿ ನಡೆಯುತ್ತಿರೊ ಐಟಿ ದಾಳಿ ಈ ಹಿಂದೆ ನಡೆದಿರೊ ದಾಳಿಗಳಿಗಿಂತ ಭಿನ್ನವಾಗಿದೆ ಎನ್ನಲಾಗಿದೆ. ಇದು ಸಂಪೂರ್ಣವಾಗಿ ಸೆಂಟ್ರಲೈಜಡ್ ( centralised) ದಾಳಿಯಾಗಿ ನಡೆಯುತ್ತಿದೆ. ಹೆಸರಿಗೆ ಬೆಂಗಳೂರು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ದಾಳಿ ನಡೆಯುತ್ತಿರೊ ಪ್ರತಿಯೊಂದು ತಂಡವನ್ನೂ ಲೀಡ್ ಮಾಡ್ತಿರೋದು ದೆಹಲಿ ಅಫೀಸರ್ಸ್.

ಇಲ್ಲಿಂದ ದಾಳಿ ವಿವರಗಳು ಸಂಪೂರ್ಣ ನೇರವಾಗಿ ದೆಹಲಿಗೆ ರವಾನೆಯಾಗುತ್ತಿದೆ. ಮಿನಿಸ್ಟರಿ ಆಫ್ ಫಿನಾನ್ಸ್ ಗೆ ಐಟಿ ಅಧಿಕಾರಿಗಳು ವರದಿ ನೀಡ್ತಿದಾರೆ. ಅಂದರೆ ಮಿನಿಸ್ಟಿರಿ ಆಫ್ ಫಿನಾನ್ಸ್ ಈ ದಾಳಿಯನ್ನು ನೇರವಾಗಿ ಮಾನಿಟರ್ ಮಾಡ್ತಿದೆ. ದಾಳಿ ಅಂತ್ಯದ ಬಳಿಕ ಮಿನಿಸ್ಟರಿ ಆಫ್ ಫಿನಾನ್ಸ್ ದೆಹಲಿ ಕೇಂದ್ರ ಕಚೇರಿಯಿಂದಲೇ ಪತ್ರಿಕ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಇಂದು ದೆಹಲಿ ಪ್ರಯಾಣ

ಇದನ್ನೂ ಓದಿ: ಐಟಿ ದಾಳಿ ಹಿನ್ನೆಲೆ ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ

Vijayendra ಆಪ್ತ, ಗೆಳೆಯ Aravind ಮನೆ ಮೇಲೆ IT ದಾಳಿ! Bengaluruನ Vasanthanagarದಲ್ಲಿ ವಾಸವಿರುವ Aravind

Published On - 1:25 pm, Fri, 8 October 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ