ಬೆಂಗಳೂರು: ನಾಪತ್ತೆ ಆಗಿದ್ದ ಜೆಡಿಎಸ್ ಮಾಜಿ ಕಾರ್ಪೋರೆಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ ವಾರಣಾಸಿಯಲ್ಲಿ ಪತ್ತೆಯಾಗಿದ್ದಾರೆ. ವಾರಣಾಸಿಯಲ್ಲಿ ಲೋಹಿತ್ ನನ್ನು ಪೊಲೀಸರು ಪತ್ತೆಹಚ್ಚಿ ಹಿಡಿದುಕೊಂಡಿದ್ದಾರೆ. ನಂದಗುಡಿ ಇನ್ಸಪೇಕ್ಟರ್ ರಂಗಸ್ವಾಮಿ ನೇತೃತ್ವದ ತಂಡದಿಂದ ಪತ್ತೆ ಮಾಡಲಾಗಿದೆ. ಕಾರು ನಂದಗುಡಿ ಬಳಿ ಬಿಟ್ಟು ನಿಗೂಡವಾಗಿ ನಾಪತ್ತೆಯಾಗಿದ್ದ ಲೋಹಿತ್ ಇದೀಗ ಸಿಕ್ಕಿದ್ದಾರೆ. ಮಾರ್ಚ್ 29 ರಂದು ಕಾರು ಪಂಕ್ಷರ್ ಆಗಿ ರಕ್ತದ ಕಲೆ ಇದ್ದಹಾಗೆ ಪತ್ತೆಯಾಗಿತ್ತು. ಯಾರು ಕಿಡಿಗೇಡಿಗಳು ಕಿಡ್ನ್ಯಾಪ್ ಮಾಡಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಕಾರು ಬಿಟ್ಟು ಸ್ವಯಂ ಪ್ರೇರಿತವಾಗಿ ತೆರಳಿದ್ದ ಲೋಹಿತ್, ಚಪ್ಪಲಿ ಬೆಲ್ಟ್ ದೇವಸ್ಥಾನದ ಬಳಿ ಬಿಟ್ಟು ವಾರಣಾಸಿಗೆ ಹೋಗಿದ್ದರು. ಲೋಹಿತ್ ನಾಪತ್ತೆ ಹಿನ್ನೆಲೆ ತನಿಖೆ ನಡೆಸಲಾಗಿದ್ದು, ಇಂದು ಮಧ್ಯಾಹ್ನ ವಾರಣಾಸಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಇಂದು ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿಗೆ ಕರೆತರುವ ಸಾಧ್ಯತೆ ಇದೆ ತಿಳಿದುಬಂದಿದೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣದ ತನಿಖೆ ಎಟಿಸಿ ಹೆಗಲಿಗೆ
ಇತ್ತ ಬೆಂಗಳೂರಿನಲ್ಲಿ ಒಟ್ಟು 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ತಿಳಿದುಬಂದಿದೆ. 10ಕ್ಕೂ ಅಧಿಕ ಇಮೇಲ್‌ಗಳಿಂದ ಬೆದರಿಕೆ ಬಂದಿದೆ. Proxy server ಬಳಸಿ ದುಷ್ಕರ್ಮಿಗಳು ಮೇಲ್ ಮಾಡಿದ್ದಾರೆ. 8- 10 Proxy server ಬಳಸಿರುವುದರಿಂದ ಹಲವಾರು ಲೇಯರ್‌ಗಳಿವೆ. ಒಂದು ಲೇಯರ್ ಪತ್ತೆ ಮಾಡಿದ್ರೆ, ಅದು ಇನ್ನೊಂದು ಲೇಯರ್‌ಗೆ ಕನೆಕ್ಟ್ ಆಗತ್ತೆ. ಇಮೇಲ್ ಮೂಲ ಪತ್ತೆ ಹಚ್ಚಲು ಗೂಗಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಐಟಿ ಆ್ಯಕ್ಟ್, 66F ಅಡಿ ಪ್ರಕರಣ ದಾಖಲಾಗಿರೋದ್ರಿಂದ ಪ್ರಕರಣಕ್ಕೆ ಗಂಭೀರತೆ ಇದೆ. ತನಿಖೆ ನಡೆಸ್ತಿರುವ ಪೊಲೀಸರಿಗೆ ಎಟಿಸಿಯಿಂದಲೂ ಸಾಥ್ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣದ ತನಿಖೆ ಎಟಿಸಿ ಹೆಗಲಿಗೆ ನೀಡಲಾಗಿದೆ. ಆ್ಯಂಟಿ ಟೆರರಿಸಂ ಸೆಲ್ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಕಸದ ರಾಶಿ ಕುಸಿದು ಇಬ್ಬರು ಸಾವು
ಸುಲ್ತಾನಪುರ ಬಳಿ ಕಸದ ರಾಶಿ ಕುಸಿದು ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. JSW ಡಂಪಿಂಗ್ ಯಾರ್ಡ್ನಲ್ಲಿ ದುರ್ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರದಲ್ಲಿ ಘಟನೆ ನಡೆದಿದೆ. ಕಬ್ಬಿಣ ಆಯುವ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಚಾರಣಾಧೀನ ಕೈದಿ ಜತಿನ್ ಕುಮಾರ್ ಆತ್ಮಹತ್ಯೆಗೆ ಯತ್ನ
ಕೋರ್ಟ್ನ 5ನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಚಾರಣಾಧೀನ ಕೈದಿ ಜತಿನ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 2020ರಲ್ಲಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನ್ನ ಮಕ್ಕಳನ್ನೇ ಹತ್ಯೆಗೈದ ಆರೋಪ ಜತಿನ್ ಮೇಲಿತ್ತು. ಹುಳಿಮಾವು ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ವಿಚಾರಣೆ ಹಿನ್ನೆಲೆ ಇಂದು ಕೋರ್ಟ್ಗೆ ಕರೆತರಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡು ಜತಿನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಾಯಾಳು ಆರೋಪಿ ಜತಿನ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: JDS ಮಾಜಿ ಕಾರ್ಪೊರೇಟರ್ ಪತಿ ನಿಗೂಢ ನಾಪತ್ತೆ; ವಾರ ಕಳೆದರೂ, ಎಷ್ಟೇ ತನಿಖೆ ನಡೆಸಿದರೂ ಸಿಕ್ತಿಲ್ಲ ಯಾವುದೇ ಸುಳಿವು
ಇದನ್ನೂ ಓದಿ: ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ ನಿಗೂಡವಾಗಿ ನಾಪತ್ತೆ; ಕಾರಿನ ಬಳಿ ಪತ್ತೆಯಾದ ರಕ್ತದ ಕಲೆ
Published On - 4:43 pm, Wed, 13 April 22