ದ್ವಿತೀಯ ಪಿಯು ಪರೀಕ್ಷೆ ವೇಳೆಯೇ JEE ಮುಖ್ಯ ಪರೀಕ್ಷೆ! ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕ ವಿದ್ಯಾರ್ಥಿಗಳು

ಪದವಿ ಪೂರ್ವ ಶಿಕ್ಷಣ ಮಂಡಳಿ 2022ನೇ ಸಾಲಿನ ಪಿಯು ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 16 ರಿಂದ ಮೇ 06 ರವರೆಗೆ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಈ ನಡುವೆಯೇ ಜೆಇಇ ಮುಖ್ಯ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟವಾಗಿದೆ.

ದ್ವಿತೀಯ ಪಿಯು ಪರೀಕ್ಷೆ ವೇಳೆಯೇ JEE ಮುಖ್ಯ ಪರೀಕ್ಷೆ! ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕ ವಿದ್ಯಾರ್ಥಿಗಳು
ಸಾಂದರ್ಭಿಕ ಚಿತ್ರ
Edited By:

Updated on: Mar 02, 2022 | 10:53 AM

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಜಂಟಿ ಪ್ರವೇಶ ಪರೀಕ್ಷೆ (JEE) ದಿನಾಂಕವನ್ನು ಪ್ರಕಟಿಸಿದ ಬೆನ್ನಲ್ಲೆ ಕರ್ನಾಟಕದ ಪಿಯು ವಿದ್ಯಾರ್ಥಿಗಳು (PU Studnets) ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ 16ರಿಂದ 21 ರವರೆಗೆ ಜಿಇಇ ಪರೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿತವಾಗಿದೆ. ದ್ವಿತೀಯ ಪಿಯು ಪರೀಕ್ಷೆಗಳ ಸಂದರ್ಭದಲ್ಲೇ ಜಿಇಇ ಮುಖ್ಯ ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ.

ಈಗಾಗಲೇ ಪದವಿ ಪೂರ್ವ ಶಿಕ್ಷಣ ಮಂಡಳಿ 2022ನೇ ಸಾಲಿನ ಪಿಯು ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 16 ರಿಂದ ಮೇ 06 ರವರೆಗೆ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಈ ನಡುವೆಯೇ ಜೆಇಇ ಮುಖ್ಯ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟವಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್ಟಿಎ (NTA) ನಿನ್ನೆ ವೇಳಾಪಟ್ಟಿ ಪ್ರಕಟಿಸಿದೆ. ಜೆಇಇ ಮೇನ್ ಪರೀಕ್ಷೆಗಳು ಏಪ್ರಿಲ್ 16ರಿಂದ 21ರವರೆಗೆ ಮತ್ತು ಎರಡನೇ ಹಂತದ ಪರೀಕ್ಷೆಗಳು ಮೇ 24 ರಿಂದ 29ರವರೆಗೂ ನಡೆಯಲಿದೆ.

ಐಐಟಿಗಳಿಗೆ ಪ್ರವೇಶ ಕಲ್ಪಿಸಲು ಜೆಇಇ ಪರೀಕ್ಷೆ ನಡೆಸಲಾಗುವುದು. ಒಂದೇ ಸಮಯಕ್ಕೆ 2 ಪರೀಕ್ಷೆ ನಡೆಯುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಗೊಂದಲ ಶುರುವಾಗಿದೆ. ಏಪ್ರಿಲ್ 16ರಂದು ಗಣಿತ, 20ರಂದು ಭೌತವಿಜ್ಞಾನ, 21ರಂದು ಫ್ರೆಂಚ್ ಭಾಷಾ ಪರೀಕ್ಷೆಗಳು ನಡೆಯಲಿವೆ.

2022ರ ಜೆಇಇ ಮುಖ್ಯ ಪರೀಕ್ಷೆಗೆ ಮಾರ್ಚ್​ ಒಂದರಿಂದ ಆನ್​ಲೈನ್​ ಅರ್ಜಿಗಳು ಲಭ್ಯವಿದ್ದು, ಅರ್ಜಿಗಳನ್ನ ಸಲ್ಲಿಸಲು ಮಾರ್ಚ್ 31ರ ವರೆಗೆ ಅವಕಾಶ ನೀಡಲಾಗಿದೆ. ಪರೀಕ್ಷೆ ಕನ್ನಡ, ಅಸ್ಸಾಮಿ, ಬೆಂಗಾಲಿ, ಮಲೆಯಾಳಂ, ಮರಾಠಿ, ಹಿಂದಿ, ಉರ್ದು ಸೇರಿದಂತೆ ಹಲವು ಭಾಷೆಗಳಲ್ಲಿ ನಡೆಯುತ್ತದೆ.

ಇದನ್ನೂ ಓದಿ

‘ಅಮ್ಮಾವ್ರ ಗಂಡ’ ಚಿತ್ರದ ಹೀರೋಯಿನ್​ ಮದುವೆಗೆ ಇತ್ತು ಮನೆಯವರ ವಿರೋಧ; ಕಣ್ಣೀರು ಹಾಕಿದ ನಟಿ ಭಾಗ್ಯಶ್ರೀ

ನವೀನ್ ಮೃತದೇಹ ಸ್ವಗ್ರಾಮಕ್ಕೆ ತರುವಂತೆ ಸಿಎಂಗೆ ಮನವಿ ಮಾಡಿದ ತಂದೆ ಶೇಖರ್‌ಗೌಡ

Published On - 10:49 am, Wed, 2 March 22