AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮ್ಮಾವ್ರ ಗಂಡ’ ಚಿತ್ರದ ಹೀರೋಯಿನ್​ ಮದುವೆಗೆ ಇತ್ತು ಮನೆಯವರ ವಿರೋಧ; ಕಣ್ಣೀರು ಹಾಕಿದ ನಟಿ ಭಾಗ್ಯಶ್ರೀ

ಅಷ್ಟಕ್ಕೂ ಭಾಗ್ಯಶ್ರೀ ಅವರು ತಮ್ಮ ಮದುವೆಯ ವಿಷಯವನ್ನು 32 ವರ್ಷಗಳ ಬಳಿಕ ತೆರೆದಿಟ್ಟಿರುವುದು ಯಾಕೆ? ಆ ಪ್ರಶ್ನೆಗೆ ಉತ್ತರ ಇಲ್ಲಿದೆ..

‘ಅಮ್ಮಾವ್ರ ಗಂಡ’ ಚಿತ್ರದ ಹೀರೋಯಿನ್​ ಮದುವೆಗೆ ಇತ್ತು ಮನೆಯವರ ವಿರೋಧ; ಕಣ್ಣೀರು ಹಾಕಿದ ನಟಿ ಭಾಗ್ಯಶ್ರೀ
ನಟಿ ಭಾಗ್ಯಶ್ರೀ
TV9 Web
| Edited By: |

Updated on: Mar 02, 2022 | 8:07 AM

Share

ಭಾರತೀಯ ಚಿತ್ರರಂಗದಲ್ಲಿ ನಟಿ ಭಾಗ್ಯಶ್ರೀ (Bhagyashree) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬಣ್ಣದ ಲೋಕಕ್ಕೆ ಕಾಲಿಡುತ್ತಲೇ ಸೂಪರ್​ ಹಿಟ್​ ಚಿತ್ರ ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಹಿಂದಿಯ ‘ಮೈನೆ ಪ್ಯಾರ್​ ಕಿಯಾ’, ಕನ್ನಡದ ‘ಅಮ್ಮಾವ್ರ ಗಂಡ’ (Ammavra Ganda Movie) ಮುಂತಾದ ಸಿನಿಮಾಗಳಲ್ಲಿ ಭಾಗ್ಯಶ್ರೀ ಅವರ ನಟನೆಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿತ್ತು. 1989ರಲ್ಲಿ ಭಾಗ್ಯಶ್ರೀ ಅಭಿನಯಿಸಿದ ಮೊದಲ ಸಿನಿಮಾ ‘ಮೈನೆ ಪ್ಯಾರ್​ ಕಿಯಾ’ (Maine Pyar Kiya) ಬಿಡುಗಡೆ ಆಯಿತು. ಆ ಸಿನಿಮಾದಲ್ಲಿ ಅವರು ಸಲ್ಮಾನ್​ ಖಾನ್​ಗೆ ಜೋಡಿ ಆಗಿದ್ದರು. ಚಿತ್ರ ಸೂಪರ್​ ಹಿಟ್​ ಆಯಿತು. ಇನ್ನೇನು ಬಾಲಿವುಡ್​ನಲ್ಲಿ ಭಾಗ್ಯಶ್ರೀ ಮಿಂಚಿ ಮೆರೆಯುತ್ತಾರೆ ಎಂದುಕೊಳ್ಳುವಾಗಲೇ ಚಿತ್ರಣ ಬದಲಾಯಿತು. ಆ ಸಿನಿಮಾ ರಿಲೀಸ್​ ಆದ ಮರುವರ್ಷವೇ, ಅಂದರೆ 1990ರಲ್ಲಿ ಭಾಗ್ಯಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟರು! ಉದ್ಯಮಿ ಹಿಮಾಲಯ್​ ದಾಸನಿ ಜೊತೆ ಅವರ ಮದುವೆ ನೆರವೇರಿತು. ಅಚ್ಚರಿ ಎಂದರೆ ಈ ಮದುವೆಗೆ ಭಾಗ್ಯಶ್ರೀ ತಂದೆ-ತಾಯಿಯ ಒಪ್ಪಿಗೆ ಇರಲಿಲ್ಲ. ಜನಪ್ರಿಯ ನಟಿ ಓಡಿ ಹೋಗಿ ಮದುವೆ ಆದರು ಎಂಬ ಗಾಸಿಪ್​ ಆ ಸಮಯದಲ್ಲಿ ಹಬ್ಬಿತ್ತು. ಅದರ ಬಗ್ಗೆ ಈಗ ಭಾಗ್ಯಶ್ರೀ ಮಾತನಾಡಿದ್ದಾರೆ.

ಅಷ್ಟಕ್ಕೂ ಭಾಗ್ಯಶ್ರೀ ಅವರು ತಮ್ಮ ಮದುವೆಯ ವಿಷಯವನ್ನು 32 ವರ್ಷಗಳ ಬಳಿಕ ತೆರೆದಿಟ್ಟಿರುವುದು ಯಾಕೆ? ಅದಕ್ಕೂ ಕಾರಣ ಇದೆ. ‘ಸ್ಟಾರ್​ ಪ್ಲಸ್​’ ವಾಹಿನಿಯಲ್ಲಿ ಹೊಸ ಶೋ ‘ಸ್ಮಾರ್ಟ್​ ಜೋಡಿ’ ಆರಂಭ ಆಗಿದೆ. ಇದರಲ್ಲಿ ಸೆಲೆಬ್ರಿಟಿ ದಂಪತಿಗಳು ಜೋಡಿಯಾಗಿ ಭಾಗವಹಿಸುತ್ತಾರೆ. ಭಾಗ್ಯಶ್ರೀ ಮತ್ತು ಅವರ ಪತಿ ಹಿಮಾಲಯ್​ ದಾಸನಿ ಅವರು ಕೂಡ ಇದರಲ್ಲಿ ಪಾಲ್ಗೊಂಡಿದ್ದಾರೆ. ಅವರಿಬ್ಬರ ಮದುವೆ ದೃಶ್ಯವನ್ನು ಈ ಶೋನ ವೇದಿಕೆಯಲ್ಲಿ ರಿ-ಕ್ರಿಯೇಟ್​ ಮಾಡಲಾಗಿದೆ. ಈ ವೇಳೆ ಹಳೇ ಘಟನೆಯನ್ನು ನೆನಪಿಸಿಕೊಂಡು ಭಾಗ್ಯಶ್ರೀ ಕಣ್ಣೀರು ಹಾಕಿದ್ದಾರೆ.

‘ನನ್ನ ಮದುವೆಗೆ ನಮ್ಮ ಕುಟುಂಬದ ಯಾರೊಬ್ಬರೂ ಬಂದಿರಲಿಲ್ಲ. ಇವರನ್ನು ಮದುವೆ ಆಗುತ್ತೇನೆ ಎಂದು ಅಪ್ಪ-ಅಮ್ಮನ ಬಳಿ ಹೇಳಿದಾಗ ಅವರು ಒಪ್ಪಿಕೊಂಡಿರಲಿಲ್ಲ. ಮಕ್ಕಳ ಬಗ್ಗೆ ಪೋಷಕರಿಗೆ ಕನಸು ಇರುತ್ತದೆ. ಆದರೆ, ಮಕ್ಕಳಿಗೂ ಕನಸುಗಳು ಇರುತ್ತವೆ. ಆ ಕನಸನ್ನು ನನಸು ಮಾಡಿಕೊಳ್ಳಲು ಮಕ್ಕಳಿಗೆ ಅವಕಾಶ ನೀಡಬೇಕು. ಭಾಗ್ಯಶ್ರೀ ಓಡಿಹೋಗಿ ಮದುವೆ ಮಾಡಿಕೊಂಡರು ಅಂತ ಜನರು ಮತ್ತು ಮಾಧ್ಯಮಗಳು ಹೇಳಿದಾಗ ನನಗೆ ತುಂಬ ಸಿಟ್ಟು ಬರುತ್ತದೆ. ಯಾಕೆಂದರೆ ನಾನು ಓಡಿಹೋಗಿ ಮದುವೆ ಆಗಿರಲಿಲ್ಲ’ ಎಂದು ಭಾಗ್ಯಶ್ರೀ ಹೇಳಿದ್ದಾರೆ.

ಇಷ್ಟೆಲ್ಲ ಕಷ್ಟಪಟ್ಟು ಮದುವೆ ಆಗಿದ್ದ ಭಾಗ್ಯಶ್ರೀ ಮತ್ತು ಹಿಮಾಲಯ್​ ದಾಸನಿ ಅವರು ನಂತರದ ವರ್ಷಗಳಲ್ಲಿ ಬೇರೆ-ಬೇರೆಯಾಗಿ ವಾಸಿಸಿದ್ದರು! ಒಂದೂವರೆ ವರ್ಷಗಳ ಕಾಲ ಅವರ ಜೀವನದಲ್ಲಿ ಬಿರುಕು ಉಂಟಾಗಿತ್ತು. ಆ ಕುರಿತು ಈ ಹಿಂದಿನ ಕೆಲವು ಸಂದರ್ಶನಗಳಲ್ಲಿ ಭಾಗ್ಯಶ್ರೀ ಹೇಳಿಕೊಂಡಿದ್ದುಂಟು. ನಂತರ ಇಬ್ಬರಲ್ಲೂ ಹೊಂದಾಣಿಕೆ ಮೂಡಿ, ಮತ್ತೆ ಸುಖ ಸಂಸಾರವನ್ನು ಮುಂದುವರಿಸಿದರು. ಇಂದು ಭಾಗ್ಯಶ್ರೀ ಮಕ್ಕಳಾದ ಅಭಿಮನ್ಯು ದಾಸನಿ ಹಾಗೂ ಆವಂತಿಕಾ ದಾಸನಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಾಯಿ ರೀತಿಯೇ ಆವಂತಿಕಾ ಕೂಡ ಸುಂದರವಾಗಿದ್ದಾರೆ. ಆವಂತಿಕಾ ಫೋಟೋ ಕಂಡು ಅಮ್ಮನ ಜೊತೆ ಅವರನ್ನು ಹೋಲಿಸಲಾಗುತ್ತಿದೆ. ಆ ಬಗ್ಗೆ ಆವಂತಿಕಾಗೆ ಬೇಸರ ಇದೆ.

ಇದನ್ನೂ ಓದಿ:

ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ

‘ನಿಮ್ಮನ್ನು ಮುಟ್ಟಬಹುದಾ?’: ಸಲ್ಮಾನ್​ ಖಾನ್​​ ಭೇಟಿ ಮಾಡಿದ ಮೊದಲ ದಿನವೇ ನಟಿಯ ವಿಚಿತ್ರ ಬೇಡಿಕೆ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್