ACB Raid: ಇಂದೂ ಕೂಡ ಮುಂದುವರೆಯಲಿದೆ ಬಿಬಿಎಂಪಿ ಮೇಲೆ ಎಸಿಬಿ ದಾಳಿ; 10 ತಂಡಗಳಿಂದ ಎಸಿಬಿ ಶೋಧ
ಎಸಿಬಿಯ 10 ತಂಡಗಳಿಂದ ಶೋಧ ಕಾರ್ಯಚರಣೆ ನಡೆಯಲಿದ್ದು, ಕಂದಾಯ, ಇಂಜಿನಿಯರಿಂಗ್, ಟಿಡಿಆರ್ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ಶೋಧ ನಡೆಸಲಿದ್ದಾರೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿ, ವಲಯ ಕಚೇರಿಗಳ ಮೇಲೆ ಎಸಿಬಿ (ACB) ಕಳೆದ ಶುಕ್ರವಾರ (ಫೆ.25) ದಾಳಿ ಮಾಡಿತ್ತು. ಭ್ರಷ್ಟಾಚಾರ ನಿಗ್ರಹ ದಳದ 200ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಂದೂ ಕೂಡ ಬಿಬಿಎಂಪಿ ಮೇಲೆ ಎಸಿಬಿ ದಾಳಿ ಮುಂದುವರಿಯಲಿದೆ. ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಹಲವು ಕಚೇರಿಗಳಲ್ಲಿ ತಲಾಶ್ ಮಾಡಲಿದ್ದಾರೆ. ನಿನ್ನೆ ರಜೆ ಇದ್ದ ಕಾರಣ ಅಕ್ರಮಕ್ಕೆ ಸಂಬಂಧಪಟ್ಟ ಕಡೆ ಎಸಿಬಿ ಅಧಿಕಾರಿಗಳು ಫೀಲ್ಡ್ ವಿಸಿಟ್ ಮಾಡಿದ್ದಾರೆ. ಇಂದು ಎಸಿಬಿಯ 10 ತಂಡಗಳಿಂದ ಶೋಧ ಕಾರ್ಯಚರಣೆ ನಡೆಯಲಿದ್ದು, ಕಂದಾಯ, ಇಂಜಿನಿಯರಿಂಗ್, ಟಿಡಿಆರ್ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ಶೋಧ ನಡೆಸಲಿದ್ದಾರೆ. ಟೆಂಡರ್, ಟಿಡಿಆರ್ ಸೇರಿದಂತೆ ಹಲವು ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಕಳೆದ ಐದಾರು ವರ್ಷದ ಫೈಲ್ಗಳನ್ನ ಎಸಿಬಿ ತಂಡ ಹೊರ ತೆಗೆದಿದ್ದಾರೆ. ರಾಜಕಾಲುವೆ, ಕೆರೆಗಳಿಗೆ ಸಂಬಂಧಿಸಿದ ಫೈಲ್ಗಳು, ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆ ಮಾಡಿದ್ದು, ಇನ್ನೂ ಮೂರು ದಿನಗಳ ಕಾಲ ಎಸಿಬಿ ದಾಳಿ ಮುಂದುವರಿಯುವ ಸಾಧ್ಯತೆ ಇದೆ.
ಕ್ಯಾಷ್‌ಬ್ಯಾಕ್ ಆಫರ್ ಆಸೆ ತೋರಿಸಿ ಹಣ ವಂಚಿಸುತ್ತಿದ್ದ ಆರೋಪಿ ಅರೆಸ್ಟ್
ಕ್ಯಾಷ್‌ಬ್ಯಾಕ್ ಆಫರ್ ತೋರಿಸಿ ಜನರಿಂದ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನ ಈಶಾನ್ನು ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ವಂಚಿಸುತ್ತಿದ್ದ, ಪೇಟಿಂ ಮಾಜಿ ಉದ್ಯೋಗಿ ದೀಪನ್ ಚಕ್ರವರ್ತಿ ಅರೆಸ್ಟ್ ಆಗಿದ್ದಾನೆ. ಎರಡು ಮಾದರಿಯಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಆರೋಪಿ, ತಾನೆ ಇನ್ಸ್ಟಾಲ್ ಮಾಡಿ ಕೊಟ್ಟಿದ್ದ ಅಂಗಡಿ ಬಳಿ ಹೋಗಿ ಪೇಟಿಮ್ ಫಾರ್ ಬಿಜಿನೆಸ್ ಆಪ್ನಲ್ಲಿ ಡೆಪಾಸಿಟ್ ಇಟ್ಟರೆ ಕ್ಯಾಶ್ ಬ್ಯಾಕ್ ಬರುತ್ತೆ ಎಂದು ಹೇಳಿ ಹಣ ಹಾಕಿಸಿ ನಂತರ ತಾನೆ ಅದನ್ನು ವರ್ಗಾವಣೆ ಮಾಡಿಕೊಂಡು ವಂಚಿಸುತಿದ್ದ. ಜೊತೆಗೆ ಕರೆ ಮಾಡಿ ಹಣ ಡೆಪಾಸಿಟ್ ಮಾಡಿಸಿಕೊಂಡು ವಂಚಿಸುತಿದ್ದ ಎನ್ನಲಾಗಿದೆ. ಸದ್ಯ ಅರೋಪಿಯನ್ನ ಈಶಾನ್ಯ ವಿಭಾಗ ಪೊಲೀಸರು ಅರೆಸ್ಟ್ ಮಾಡಿದ್ದು, ಹಿಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಗಲಾಟೆ; ಕುಡಿದ ಮತ್ತಿನಲ್ಲಿ ಕೊಲೆ
ನೆಲಮಂಗಲ: ಕ್ಷುಲ್ಲಕ ಕಾರಣಕ್ಕೆ ಬಾರನಲ್ಲಿ ಗಲಾಟೆ ನಡೆದಿದ್ದು, ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಬಾರ್‌ನಲ್ಲಿ ಘಟನೆ ನಡೆದಿದೆ. ಕ್ಷುಲ್ಲಕ ವಿಚಾರವಾಗಿ ಮದ್ಯದ ಮತ್ತಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ದೊಣ್ಣೆಯಿಂದ ಹೊಡೆದು ಮೋಹನ್ ಅಲಿಯಾಸ್ ಮುಂಗುಸಿಯನ್ನ (46) ಭೀಕರವಾಗಿ ಹತ್ಯೆ ಮಾಡಲಾಗಿದೆ. ಪವನ್, ಕಿಶೋರ್ ಸೇರಿದಂತೆ ಮೂವರಿಂದ ಕೊಲೆ ಮಾಡಲಾಗಿದ್ದು, ಸದ್ಯ ಕಿಶೋರ್‌ನನ್ನು ವಶಕ್ಕೆ ಪಡೆದಿದ್ದು, ಉಳಿದಿಬ್ಬರಿಗಾಗಿ ಬಾಗಲಗುಂಟೆ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ:
Published On - 9:28 am, Wed, 2 March 22