ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission – KPSC) 2016ರಲ್ಲಿ ಅವೈಜ್ಞಾನಿಕವಾಗಿ ಹೊರಡಿಸಿದ್ದ ತಪ್ಪು ಆದೇಶವನ್ನು ಆರು ವರ್ಷ ಕಳೆದರೂ ತಿದ್ದಿಕೊಳ್ಳುವ ಆಸಕ್ತಿ ತೋರುತ್ತಿಲ್ಲ. ಆರ್ಟಿಒ ಬ್ರೇಕ್ ಇನ್ಸ್ಪೆಕ್ಟರ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದ ಕೆಪಿಎಸ್ಸಿ, ‘ಪೆಟ್ರೋಲ್ ವಾಹನದಲ್ಲಿ ಹೆವಿ ಲೈಸೆನ್ಸ್ ಇರಬೇಕು’ ಎಂದು ಸೂಚಿಸಿತ್ತು.
ಪೆಟ್ರೋಲ್ ವಾಹನಗಳ ವಿಭಾಗದಲ್ಲಿ ಬೃಹತ್ ವಾಹನಗಳು ಬರುವುದಿಲ್ಲ ಎನ್ನುವ ಕನಿಷ್ಠ ಜ್ಞಾನವಿಲ್ಲದೆ ಈ ಆದೇಶ ಹೊರಡಿಸಲಾಗಿತ್ತು. ಪೆಟ್ರೋಲ್ ವಾಹನದಲ್ಲಿ ಹೆವಿ ವೆಹಿಕಲ್ ಲೈಸೆಸ್ಸ್ ಇಲ್ಲ ಎನ್ನುವ ಕಾರಣಕ್ಕೆ ಹಲವು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹಿಂದೇಟು ಹಾಕಿದ್ದರು.
ಇದೀಗ ಏಕಾಏಕಿಯಾಗಿ ಕೆಎಸ್ಆರ್ಟಿಸಿಯಲ್ಲಿ ಡೀಸೆಲ್ ವೆಹಿಕಲ್ನಲ್ಲಿ ತರಬೇತಿ ಮುಗಿಸಿರುವವರ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಈ ನೇಮಕಾತಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಪ್ರಭಾವಿಗಳು ಮತ್ತು ಅಧಿಕಾರಿಗಳಿಗೆ ಹತ್ತಿರದವರಿಗೆ ಹುದ್ದೆ ನೀಡುತ್ತಿರುವ ಆರೋಪ ಮಾಡಲಾಗಿದೆ. ಹೀಗಾಗಿ ಆರ್ಟಿಒ ಬ್ರೇಕ್ ಇನ್ಸ್ಪೆಕ್ಟರ್ ಹುದ್ದೆಯ ಆಕಾಂಕ್ಷಿಗಳು ಕೆಪಿಎಸ್ಸಿ ವಿರುದ್ಧ ತಿರುಗಿಬಿದ್ದಿದ್ದಾರೆ.
ನ್ಯಾಯಾಲಯ ಸಹ ಪೆಟ್ರೋಲ್ ವಾಹನಗಳಲ್ಲಿ ಭಾರಿ ವಾಹನ ಇರುವುದಿಲ್ಲ ಎಂದು ತೀರ್ಪು ಕೊಟ್ಟಿದೆ. ಆದರೂ ವಂಚಿತ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಕೆಪಿಎಸ್ಸಿಯ ಈ ನಡೆಯ ಹಿಂದೆ ಹುಟ್ಟಿಕೊಂಡಿದೆ ನೂರೆಂಟು ಅನುಮಾನಗಳು ಹುಟ್ಟಿಕೊಂಡಿವೆ.
Published On - 11:05 am, Tue, 26 July 22