Bangalore News: ರಸ್ತೆ ಸ್ವಚ್ಛಗೊಳಿಸುವ ಹೊಸ 75 ಸ್ವಯಂ ಚಾಲಿತ ಯಂತ್ರಗಳ ಖರೀದಿಗೆ ಮುಂದಾದ ಬಿಬಿಎಂಪಿ

ಮುಖ್ಯ ರಸ್ತೆಗಳನ್ನು ಶುಚಿಗೊಳಿಸುವ ಯಂತ್ರಗಳ ಮತ್ತಷ್ಟು ಖರೀದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈಗಾಗಲೇ 26 ಯಾಂತ್ರೀಕೃತ ಸ್ವಚ್ಛಗೊಳಿಸವ ಯಂತ್ರಗಳನ್ನು ಹೊಂದಿರುವ ಬಿಬಿಎಂಪಿಯು, ಇದೀಗ 75 ಹೊಸ ಯಂತ್ರಗಳ ಖರೀದಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ.

Bangalore News: ರಸ್ತೆ ಸ್ವಚ್ಛಗೊಳಿಸುವ ಹೊಸ 75 ಸ್ವಯಂ ಚಾಲಿತ ಯಂತ್ರಗಳ ಖರೀದಿಗೆ ಮುಂದಾದ ಬಿಬಿಎಂಪಿ
ಯಾಂತ್ರೀಕೃತ ಗುಡಿಸುವ ಯಂತ್ರImage Credit source: deccanherald
Follow us
TV9 Web
| Updated By: Rakesh Nayak Manchi

Updated on:Jul 26, 2022 | 12:54 PM

ಬೆಂಗಳೂರು: ಮುಖ್ಯ ರಸ್ತೆಗಳನ್ನು ಶುಚಿಗೊಳಿಸುವ ಸ್ವಯಂ ಚಾಲಿತ ಯಂತ್ರಗಳ ಮತ್ತಷ್ಟು ಖರೀದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ. ಈಗಾಗಲೇ  26 ಸ್ವಯಂ ಚಾಲಿತ ಸ್ವಚ್ಛಗೊಳಿಸವ ಯಂತ್ರಗಳನ್ನು ಹೊಂದಿರುವ ಬಿಬಿಎಂಪಿಯು, ಇದೀಗ 75 ಹೊಸ ಯಂತ್ರಗಳ ಖರೀದಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆದರೆ ಹೆಚ್ಚಿನ ವೆಚ್ಚ ತಗುಲುವುದರಿಂದ ಪ್ರಸ್ತುತ 26 ವಾಹನಗಳನ್ನು ನಿರ್ವಹಿಸುತ್ತಿರುವ ನಾಗರಿಕ ಸಂಸ್ಥೆಯು ಹೊಸ ಯಂತ್ರಗಳನ್ನು ನಿರ್ವಹಿಸಲು ವಿಧಾನಗಳ ಬಗ್ಗೆ ಇನ್ನೂ ಒಮ್ಮತಕ್ಕೆ ಬರಬೇಕಿದೆ.

ಸೋಮವಾರ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯುಎಂ) ಸೆಲ್‌ನ ಹಿರಿಯ ಅಧಿಕಾರಿಗಳು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಪ್ರಸ್ತಾವನೆ ಬಗ್ಗೆ ಚರ್ಚಿಸಿದರು. ಆದರೆ ಚರ್ಚೆ ವೇಳೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕನಿಷ್ಠ ಅರ್ಧದಷ್ಟು ಯಂತ್ರಗಳನ್ನು ಖರೀದಿಸಲು ಹಾಗೂ ಇನ್ನರ್ಧವನ್ನು ‘ಸೇವಾ ಒಪ್ಪಂದ’ ಮೂಲಕ ಖರೀದಿಸಲು ನಾಗರಿಕ ಸಂಸ್ಥೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಸೇವಾ ಒಪ್ಪಂದದ ಅಡಿಯಲ್ಲಿ ಯಂತ್ರಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ನಾಗರಿಕ ಸಂಸ್ಥೆಯು ಸರಬರಾಜುದಾರರಿಗೆ ಮಾಸಿಕವಾಗಿ ಪಾವತಿಸಲಿದೆ.

75 ಯಂತ್ರಗಳ ಖರೀದಿಗೆ ಬಿಬಿಎಂಪಿಗೆ ಒಟ್ಟು 90 ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ. 15ನೇ ಹಣಕಾಸು ಆಯೋಗದಡಿ 50 ಕೋಟಿ ಅನುದಾನ ಬಂದಿದ್ದು, 15 ಕೋಟಿ ರೂಪಾಯಿ ಶುಭ ಬೆಂಗಳೂರು ಕಾರ್ಯಕ್ರಮದಡಿ ಮತ್ತು ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ಹೆಚ್ಚುವರಿಯಾಗಿ 25 ಕೋಟಿ ರೂ. ಅನುದಾನವನ್ನು ಪಡೆಯಬೇಕಾಗುತ್ತದೆ.

ತಯಾರಿಕೆಯ ಆಧಾರದ ಮೇಲೆ ಪ್ರತಿ ಯಂತ್ರದ ಬೆಲೆ ಸುಮಾರು 1 ಕೋಟಿಯಿಂದ 3 ಕೋಟಿ ರೂ. ಇರಲಿದ್ದು, ವಾಹನಗಳ ನಿರ್ವಹಣೆಗೆ ಕೂಡ ಅಷ್ಟೇ ವೆಚ್ಚವಾಗುತ್ತದೆ. ಪ್ರತಿ ಯಂತ್ರವು ಎಂಟು ಗಂಟೆಗಳ ಪಾಳಿಯಲ್ಲಿ 40 ಕಿಮೀ ವಿಸ್ತಾರವನ್ನು ಗುಡಿಸುವ ನಿರೀಕ್ಷೆ ಹೊಂದಲಾಗಿದೆ.

ಸಿಬಿಡಿ ಪ್ರದೇಶಗಳಲ್ಲಿ ಮತ್ತು ಒಳ ರಸ್ತೆಗಳನ್ನು ಗುಡಿಸಲು ನಾವು ಸ್ವಯಂ ಚಾಲಿತ ಯಂತ್ರಗಳನ್ನು ಬಳಸುತ್ತೇವೆ. ಸುಮಾರು 35 ಯಂತ್ರಗಳನ್ನು ಟ್ರಕ್‌ಗೆ ಅಳವಡಿಸಲಾಗುವುದು ಮತ್ತು ಅವುಗಳನ್ನು ಹೊರ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. ಸದ್ಯ 26 ವಾಹನಗಳಲ್ಲಿ 17 ಸ್ವಯಂ ಚಾಲಿತ ಮತ್ತು ಎಂಟು ಟ್ರಕ್ ಮೌಂಟೆಡ್ ವಾಹನಗಳಾಗಿವೆ. ಇದು ರೈಡ್-ಆನ್ ಸ್ವೀಪರ್ ಎಂಬ ಮತ್ತೊಂದು ಯಂತ್ರವನ್ನು ಸಹ ಹೊಂದಿದ್ದು, ಸಣ್ಣ ಲೇನ್‌ಗಳನ್ನು ಒಳಗೊಂಡಿದೆ. ಈ ಯಂತ್ರಗಳನ್ನು ಎಲ್ಲಾ ಎಂಟು ವಲಯಗಳಿಗೆ ಹಸ್ತಾಂತರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Published On - 11:30 am, Tue, 26 July 22

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ