ಕೆಜಿಎಫ್‌ ತಹಶೀಲ್ದಾರ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ; ತಹಶೀಲ್ದಾರ್​ಗೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್​

| Updated By: ವಿವೇಕ ಬಿರಾದಾರ

Updated on: Jun 10, 2022 | 2:56 PM

ಆರ್​ಟಿಸಿಯಲ್ಲಿ ಜಮೀನು ಖರೀದಿಸಿದವರ ಹೆಸರು ನಮೂದಿಸದ ಹಿನ್ನೆಲೆಯಲ್ಲಿ ಕೆಜಿಎಫ್‌ ತಹಶೀಲ್ದಾರ್  ಸುಜಾತಾರಾಮ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.

ಕೆಜಿಎಫ್‌ ತಹಶೀಲ್ದಾರ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ; ತಹಶೀಲ್ದಾರ್​ಗೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್​
ಕರ್ನಾಟಕ್​ ಹೈಕೋರ್ಟ್​
Follow us on

ಬೆಂಗಳೂರು: ಆರ್​ಟಿಸಿಯಲ್ಲಿ (RTC) ಜಮೀನು ಖರೀದಿಸಿದವರ ಹೆಸರು ನಮೂದಿಸದ ಹಿನ್ನೆಲೆಯಲ್ಲಿ ಕೆಜಿಎಫ್‌ (KGF) ತಹಶೀಲ್ದಾರ್  ಸುಜಾತಾರಾಮ್ (Sujataram) ​ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್  ತಹಶೀಲ್ದಾರ್  ಸುಜಾತಾರಾಮ್​​ರನ್ನು ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶ ಪಾಲಿಸದಿದ್ದರೆ ಜೈಲಿಗೆ ಹೋಗಲು ಸಿದ್ಧರಾಗಿ. ಜೈಲಿನಲ್ಲಿ ಅವರಿಗೆ ಕೋರ್ಟ್ ಘನತೆಯ ಅರಿವಾಗಲಿ. ಪೊಲೀಸರನ್ನು ಕರೆಸಿ ಈಗಲೇ ಜೈಲಿಗೆ ಕಳುಹಿಸುತ್ತೇವೆ ಎಂದು ಖಡಕ ಸೂಚನೆ ನೀಡಿದೆ.

ಇದನ್ನು ಓದಿ: ಕ್ಯಾನ್ಸರ್​​ ವಿರುದ್ಧ ಹೋರಾಡುತ್ತಿರುವ ಮಹಾರಾಷ್ಟ್ರದ ಬಿಜೆಪಿ ಶಾಸಕಿ ಸ್ಟ್ರೆಚರ್​​ನಲ್ಲೇ ಬಂದು ಮತ ಚಲಾವಣೆ

ನ್ಯಾಯಾಲಯ ಸೂಚನೆ ನೀಡಿದ ಬೆನ್ನಲೆ  ಹೈಕೋರ್ಟ್​ಗೆ ತಹಶೀಲ್ದಾರ್  ಸುಜಾತಾರಾಮ್ ಬೇಷರತ್ ಕ್ಷಮೆಯಾಚಿಸಿದ್ದಾರೆ. ತಹಸೀಲ್ದಾರ್ ಸುಜಾತಾರಾಮ್​ ಒಂದು ಅವಕಾಶ ನೀಡಲು ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ. ಆಗ ಹೈಕೋಟರ್​​ 24 ಗಂಟೆಗಳಲ್ಲಿ ಕಂದಾಯ ದಾಖಲೆ ಸರಿಪಡಿಸಲು ಸೂಚನೆ ನೀಡಿದೆ.  ಜೂ.13ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಪ್ರಕರಣದ ಹಿನ್ನಲೆ

ಮುಳಬಾಗಿಲಿನ ಅಂಗೊಂಡಹಳ್ಳಿ ಗ್ರಾಮದ ಸೊಣ್ಣೇಗೌಡ ಮತ್ತು ಕುಟುಂಬಸ್ಥರು ಕೆಜಿಎಫ್ ನಲ್ಲಿ 1975ರಲ್ಲೇ ಜಮೀನು ಖರೀದಿಸಿದ್ದರು. ಜಮೀನು ಖರೀದಿಸಿದ್ದರೂ ಪಹಣಿ ಸೇರಿ ಕಂದಾಯ ದಾಖಲೆಗಳಲ್ಲಿ ಇವರ ಹೆಸರು ನಮೂದು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ಸೊಣ್ಣೇಗೌಡ ಮತ್ತಿತರರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಹೈಕೋರ್ಟ್​ಗೆ ತಹಸಿಲ್ದಾರ ಸುಜಾತಾರಾಮ್​  ಅವರಿಗೆ ಕಂದಾಯ ದಾಖಲೆಗಳನ್ನು ಸರಿ ಪಡಿಸುವಂತೆ ಸೂಚನೆ ನೀಡಿತ್ತು. ಹೈಕೋರ್ಟ್​ ಸೂಚನೆ ಮೇರೆಗು ಕೂಡ ಕಂದಾಯ ದಾಖಲೆಗಳನ್ನು  ತಹಸಿಲ್ದಾರ್ ಸರಿಪಡಿಸಿರಲಿಲ್ಲ. ಈ ಸಂಬಂಧ ಸೊಣ್ಣೇಗೌಡ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿದ್ದರು. ನ್ಯಾಯಾಲಯ ಸರ್ಜಿ ವಿಚಾರಣೆ ನಡೆಸಿ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 2:42 pm, Fri, 10 June 22