ಬೆಂಗಳೂರಿನಲ್ಲಿ ಮತ್ತೆ ಮಹಿಳೆ ಮೇಲೆ ಆ್ಯಸಿಡ್ ದಾಳಿ! ಮದುವೆಯಾಗಲು ಒಪ್ಪದಿದ್ದಕ್ಕೆ ಕೃತ್ಯ ಎಸಗಿದ ಆರೋಪಿ
ಬೆಂಗಳೂರಿನ ಸಾರಕ್ಕಿ ಬಳಿ ಘಟನೆ ನಡೆದಿದ್ದು, ಪರಿಚಯಸ್ಥನಿಂದಲೇ ಈ ಕೃತ್ಯ ನಡೆದಿದೆ. ಸದ್ಯ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ (Acid) ದಾಳಿ ನಡೆದ ಪ್ರಕರಣ ಮಾಸುವ ಮುನ್ನಾ ನಗರದಲ್ಲಿ ಇಂದು (ಜೂನ್ 10) ಮತ್ತೆ ಮಹಿಳೆಯೊಬ್ಬರ (woman) ಮೇಲೆ ಆ್ಯಸಿಡ್ ದಾಳಿ ನಡೆದಿದೆ. ಬೆಂಗಳೂರಿನ ಸಾರಕ್ಕಿ ಬಳಿ ಘಟನೆ ನಡೆದಿದ್ದು, ಪರಿಚಯಸ್ಥನಿಂದಲೇ ಈ ಕೃತ್ಯ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ಎಸಿಪಿ ಶಿವಕುಮಾರ್, ಡಿಸಿಪಿ ಹರೀಶ್ ಪಾಂಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೇ ಪೊಲೀಸರು ಅರೋಪಿಯನ್ನು ವಶಕ್ಕೆ ಪಡೆದಿದ್ಧಾರೆ.
ಅಹ್ಮದ್ ಎಂಬಾತ ಆ್ಯಸಿಡ್ ದಾಳಿ ನಡೆಸಿರುವ ಆರೋಪಿ. ಈತ ವಿವಾಹಿತ ಮಹಿಳೆಯನ್ನ ಪ್ರೀತಿಸುತ್ತಿದ್ದ. ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ. ಈ ವೇಳೆ ಮದುವೆಯಾಗಲು ಒಪ್ಪದಿದ್ದಾಗ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಆ್ಯಸಿಡ್ ದಾಳಿಯಿಂದ ಮಹಿಳೆ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಗಾಯಾಳು ಮಹಿಳೆಯನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾಳಿಗೆ ಒಳಗಾದ ಮಹಿಳೆಗೆ ಮದುವೆ ಆಗಿ ಮಗು ಇದೆ. ಹೀಗಿದ್ದರೂ ಅರೋಪಿ ಮಹಿಳೆಯ ಪ್ರೀತಿಸುತ್ತಿದ್ದ. ಜೊತೆಗೆ ಮದುವೆ ಆಗುವಂತೆ ಪೀಡಿಸುತ್ತಿದ್ದ. ಅರೋಪಿ ಮತ್ತು ನೊಂದ ಮಹಿಳೆ ಇಬ್ಬರೂ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಗೋರಿಪಾಳ್ಯದ ನಿವಾಸಿಯಾಗಿರುವ ಅರೋಪಿ ಅಹ್ಮದ್, ಮಹಿಳೆ ಕೆಎಸ್ ಲೇಔಟ್ನಿಂದ ಜೆಪಿ ನಗರ ಕಡೆಗೆ ತೆರಳುತಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rishabh Pant: ರಿಷಭ್ ಪಂತ್ ಸೋಲಿಗೆ ದೂರಿದ್ದು ಬೌಲರ್ಗಳನ್ನಲ್ಲ: ಪಂದ್ಯದ ಬಳಿಕ ಏನಂದ್ರು ನೋಡಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಆಗಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಆ್ಯಸಿಡ್ ಹಾಕಿದ ಆರೋಪಿಗೆ ಕಠಿಣ ಶಿಕ್ಷೆ ಆಗುತ್ತದೆ. ಈಗಾಗಲೇ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು.
ಬೆಳಿಗ್ಗೆ ಆ್ಯಸಿಡ್ ಖರೀದಿಸಿದ್ದ ಆರೋಪಿ: ಇಂದು ಬೆಳಿಗ್ಗೆ ಇಬ್ಬರು ಕೆಲಸಕ್ಕೆ ಫ್ಯಾಕ್ಟರಿಗೆ ಹೋಗಿದ್ದರು. ಫ್ಯಾಕ್ಟರಿಗೆ ಹೋಗುವಾಗ ಅರೋಪಿ ಅಂಗಡಿಯಲ್ಲಿ ಆ್ಯಸಿಡ್ ಖರೀದಿಸಿದ್ದರು. ಅಂಗಡಿಯಲ್ಲಿ ಬಾತ್ ರೂಮ್ ತೊಳೆಯಲು ಆ್ಯಸಿಡ್ ಬೇಕು ಎಂದಿದ್ದಾನೆ. ಬಳಿಕ ಫ್ಯಾಕ್ಟರಿಗೆ ಬಂದ ಮೇಲೆ ಮಾತನಾಡಬೇಕು ಎಂದು ಹೇಳಿ ಹೊರಗೆ ಬಂದಿದ್ದಾರೆ. ಫ್ಯಾಕ್ಟರಿಯಲ್ಲಿ ಕೆಲಸ ಶುರು ಮಾಡುವ ಮೊದಲೇ ಹೊರಗೆ ಬಂದಿದ್ದಾರೆ. ದಾರಿಯಲ್ಲಿ ಬರುವಾಗಲೂ ಅರೋಪಿ ಮಾತನಾಡುತಿದ್ದ. ಮದುವೆ ಬಗ್ಗೆ ಮಾತನಾಡಿದ್ದಾನೆ.
ಬೆಳಗ್ಗೆ ಒಂಬತ್ತು ಮೂವತ್ತರ ಸಮಯಕ್ಕೆ ಇಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕೊನೆಯದಾಗಿ ಹೇಳು ನನ್ನ ಮದುವೆ ಅಗುತ್ತೀಯಾ ಇಲ್ಲಾ ಎಂದು ಕೇಳಿದ್ದಾನೆ. ಅದರೆ ಮದುವೆಗೆ ಮಹಿಳೆ ಒಪ್ಪಿಲ್ಲ. ಕೊನೆಗೆ ಮಹಿಳೆಗೆ ಆ್ಯಸಿಡ್ ಹಾಕಿ ಅಲ್ಲಿಂದ ಎಸ್ಕೇಪ್ ಅಗಿದ್ದ.
ಈ ಹಿಂದೆ ಮಹಿಳೆ ಮನೆಯರ ಬಳಿಯೂ ಬಂದು ಮದುವೆ ಮಾಡಿಕೊಡಲು ಕೇಳಿದ್ದ. ಇಬ್ಬರು ಕಳೆದ ಎರಡು, ಮೂವರು ವರ್ಷಗಳಿಂದ ಸಂಪರ್ಕದಲ್ಲಿ ಇದ್ದಾರೆ. ಹೀಗಾಗಿ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದ. ಆದರೆ ಮದುವೆಗೆ ಮಹಿಳೆ ಮನೆಯವರು ಒಪ್ಪಿರಲಿಲ್ಲ. ಈಗಾಗಲೇ ಮಹಿಳೆಗೆ ಮದುವೆ ಅಗಿ ಡೈವರ್ಸ್ ಸಹ ಅಗಿದೆ. ಮಕ್ಕಳು ದೊಡ್ಡವರು ಇದ್ದಾರೆ. ಮಗಳೆ ಇನ್ನು ಎರಡು ಮೂರು ವರ್ಷಕ್ಕೆ ಮದುವೆಗೆ ಬರುತ್ತಾಳೆ. ಒಂದು ಸಾರಿ ಮಗಳ ಮದುವೆ ಅಗಲಿ. ನಂತರ ನೋಡೋಣ ಎಂದು ಮನೆಯವರು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Fri, 10 June 22