AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಟೀಸ್ ನೀಡಲು PSI ಮೇಲೆ ಹಲ್ಲೆಗೆ ಯತ್ನ ; ಸಲಿಂಗ ಲೈಂಗಿಕ ಕ್ರಿಯೆಗೆ ವಿರೋಧಸಿದ್ದಕ್ಕೆ ಕೊಲೆ 

ಪ್ರಕರಣ ವೊಂದಕ್ಕೆ ನೋಟೀಸ್ ಕೊಡಲು ಹೋದಾಗ PSI ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೀದರ್​ ಜಿಲ್ಲೆಯ ಕಮಲನಗರ ‌ತಾಲೂಕಿನ‌‌ ತೋರಣಾ ಗ್ರಾಮದಲ್ಲಿ ಮೊನ್ನೆ‌ (ಜೂನ್​​ 8) ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನೋಟೀಸ್ ನೀಡಲು PSI ಮೇಲೆ ಹಲ್ಲೆಗೆ ಯತ್ನ ; ಸಲಿಂಗ ಲೈಂಗಿಕ ಕ್ರಿಯೆಗೆ ವಿರೋಧಸಿದ್ದಕ್ಕೆ ಕೊಲೆ 
ಸಾಂಕೇತಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Jun 10, 2022 | 5:26 PM

Share

ಬೀದರ್​​: ಪ್ರಕರಣ ವೊಂದಕ್ಕೆ ನೋಟೀಸ್ ಕೊಡಲು ಹೋದಾಗ PSI ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೀದರ್​ (Bidar) ಜಿಲ್ಲೆಯ ಕಮಲನಗರ ‌ತಾಲೂಕಿನ‌‌ ತೋರಣಾ ಗ್ರಾಮದಲ್ಲಿ ಮೊನ್ನೆ‌ (ಜೂನ್​​ 8) ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಮಲನಗರ ಪೊಲೀಸ್ ಠಾಣೆಯ‌ ‌PSI ನಂದಿನಿ ಮೂವರು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಣ್ಣಿಗೆ ‌ಕಾರದ‌ ಪುಡಿ ಎರಚಿ PSI ಸೇರಿದಂತೆ ಸಿಬ್ಬಂದಿ ಮೇಲೆ ತೋರಣಾ ಗ್ರಾಮದ ಗುಂಡಪ್ಪ ಗೌಡಾ ಜ್ಯೋತಿ ವನಿತಾ ಎಂಬುವರು ಹಲ್ಲೆಗೆ ಯತ್ನಿಸಿದ್ದಾರೆ. ಕಮಲನಗರ ‌ಪೊಲೀಸ್ ಠಾಣೆಯಲ್ಲಿ ಕಲಂ 323, 324, 353, 307, 504 ಜೊತೆ 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 ಸಲಿಂಗ ಲೈಂಗಿಕ ಕ್ರಿಯೆಗೆ ವಿರೋಧಸಿದ್ದಕ್ಕೆ ಕೊಲೆ 

ಬೆಂಗಳೂರು: ಕುಡಿದ ಮತ್ತಿನಲ್ಲಿ ಪುರುಷನೊಂದಿಗೆ ಸಲಿಂಗ ಲೈಂಗಿಕ ಕ್ರಿಯೆಗೆ ವಿರೋಧಸಿದ್ದಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ರಕ್ಷಿತ್ ಗೌಡ ಬಂಧಿತ ಆರೋಪಿ.  ಆರೋಪಿ ರಕ್ಷಿತ್, ಪ್ರದೀಪ್ ಎಂಬಾತನನ್ನು ಕೊಲೆಗೈದಿದ್ದನು. ಹಲವು ವರ್ಷಗಳಿಂದ ಪ್ರದೀಪ್ ಜೊತೆ ರಕ್ಷಿತ್ ಸಂಪರ್ಕದಲ್ಲಿದ್ದನು.  ಮೇ 30 ರಂದು ಕುಡಿದ ಮತ್ತಿನಲ್ಲಿ ಪ್ರದೀಪನ ಜೊತೆ  ರಕ್ಷಿತ್ ತೆರಳಿದ್ದನು.  ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಜಗಳ ಅತಿರೇಖಕ್ಕೆ ಹೋಗಿ ಮಾರುತಿ ನಗರ ಸ್ವರಾಜ್ ಮಾರ್ಕೆಟ್ ಬಳಿಯ ಮನೆಯೊಂದರಲ್ಲಿ ರಕ್ಷಿತ್ ಗೌಡ, ಪ್ರದೀಪ್​​ಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು.

ಇದನ್ನು ಓದಿ: ಹೆಂಡತಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈ ಕತ್ತರಿಸಿದ ಗಂಡ!; ಹೀಗೂ ಇರ್ತಾರಾ?

ಮಂಡ್ಯ ಮೂಲದ ಮೃತ ಪ್ರದೀಪ್​​, ಕೊರೊನಾ ಕಾಲದಲ್ಲಿ ಖಾಸಗಿ ಕಂಪನಿ ಕೆಲಸ ಬಿಟ್ಟಿದ್ದನು. ನಂತರ ಫ್ಯಾಮಿಲಿಯಿಂದ ದೂರಾಗಿ ಕಳೆದ ಒಂದು ವರ್ಷದಿಂದ ಪ್ರತ್ಯೇಕ ಮನೆ ಮಾಡಿಕೊಂಡು ವಾಸ ಮಾಡುತಿದ್ದನು.‘ ಸದ್ಯ ಈತನ ಕೊಲೆಯ ಕಾರಣ ತಿಳಿದು ಕುಟುಂಬಸ್ಥರು ಶಾಕ್ ಆಗಿದ್ದಾರೆ. ಕೊಲೆ ಆರೋಪಿ  ರಕ್ಷಿತ್ ಗೌಡ ಆಟೊ ಚಾಲಕನಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಮ್ಯೂಚಲ್ ಫ್ರೆಂಡ್ ಮುಖಾಂತರ ಪ್ರದೀಪ್​​ನ ಪರಿಚಯವಾಗಿತ್ತು.  ಸದ್ಯ ಆರೋಪಿಯನ್ನು ಬಂಧಿಸಿದ ಮಡಿವಾಳ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕಸಾಯಿಖಾನೆ ನೆಲಸಮ

ಬಾಗಲಕೋಟೆ: ಜಿಲ್ಲೆಯ ಇಳಕಲ್‌ನಲ್ಲಿ ಅಕ್ರಮವಾಗಿ ಇದ್ದ  2 ಕಸಾಯಿಖಾನೆಗಳನ್ನು ನಗರಸಭೆ ಜೆಸಿಬಿಯಿಂದ ನೆಲಸಮ ಮಾಡಿವೆ. ಹಿಂದೂ ಜಾಗರಣಾ ವೇದಿಕೆ ದೂರಿನ ಮೇರೆಗೆ ಕಸಾಯಿಖಾನೆ ನೆಲಸಮ ಮಾಡಲಾಗಿದೆ. ಕಸಾಯಿಖಾನೆಯಲ್ಲಿ ಗೋವುಗಳ ಹತ್ಯೆ ಬಗ್ಗೆ ಸಂಘಟನೆ ದೂರು ನೀಡಿತ್ತು.

ವಿಜಯ ಮಹಾಂತೇಶ್ವರ ಗದ್ದುಗೆ ರಸ್ತೆಯ ಬಲಭಾಗದಲ್ಲಿ ಅಕ್ರಮವಾಗಿದ್ದ ಎರಡು ಕಸಾಯಿಖಾನೆಗಳು ನೆಲಸಮ ಮಾಡಲಾಗಿದೆ.ಕಸಾಯಿಖಾನೆ ಸಂಬಂಧಿಸಿದ ರಬ್ಬಾನಿ ಮಹಮದ್ ಯೂಸುಫ್ ಬೇಪಾರಿ,ಇನಾಯತ್ ಮಹಮ್ಮದ್ ಯೂನುಸ್ ಬೇಪಾರಿ,ಜಿಲಾನಿ ಮೊಹಮ್ಮದ ಯೂಸುಫ್ ಬೇಪಾರಿ ಎಂಬ ಮೂವರನ್ನು ಇಳಕಲ್ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಲಿ ಸೆರೆ ಆಯ್ತು ಭಗ್ನ ಪ್ರೇಮಿಯ ಡೆಡ್ಲಿ ಅಟ್ಯಾಕ್

ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆ: ಐವರು ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿದ ಸಿಐಡಿ

ಹಾಸನ:  ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಸಿಐಡಿ ಹಾಸನ ಜಿಲ್ಲಾ ಸೆಷನ್ಸ್ ಕೋರ್ಟ್​ಗೆ ಹಾಜರುಪಡಿಸಿದೆ.  ಪ್ರಮುಖ ಆರೋಪಿ ಪೂರ್ಣಚಂದ್ರನನ್ನು ನಿನ್ನೆ (ಜೂನ್​ 9) ರಂದು ಬಂಧಿಸಲಾಗಿತ್ತು. ಜೂನ್ 1ರಂದು ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆಯಾಗಿತ್ತು. ಪ್ರಕರಣವನ್ನು ಸರ್ಕಾರ ಸಿಐಡಿ ವಹಿಸಿತ್ತು.

ಅಕ್ರಮ ಗೋಮಾಂಸ ಸಾಗಾಟ ಪತ್ತೆ

ದಕ್ಷಿಣ ಕನ್ನಡ: ಟೂರಿಸ್ಟ್ ವಾಹನದಲ್ಲಿ ಮಹಿಳೆಯರನ್ನು ಮುಂದಿಟ್ಟುಕೊಂಡು ಕುಂದಾಪುರದ ಕಂಡ್ಲೂರು ನಿಂದ ಭಟ್ಕಳದ ಕಡೆಗೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 300 ಕೆಜಿಗೂ ಅಧಿಕ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದುಷ್ಕರ್ಮಿಗಳು ಅಕ್ರಮ ದಂಧೆಗೆ ಮಹಿಳೆಯರನ್ನು ಬಳಸಿತ್ತಿದ್ದಾರೆ. ಪೊಲೀಸರು ಹಿಂದೂ ಸಂಘಟನೆಗಳ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ.  ಬೈಂದೂರು ಒತ್ತಿನಣೆ ಬಳಿ ಪೊಲೀಸರಿಂದ ನಡೆದಿರುವ ಮಿಂಚಿನ ಕಾರ್ಯಾಚರಣೆ.  ವಾಹನ ಚಾಲಕ ಮೊಹಮ್ಮದ ಅಲ್ತಾಫ್ ಮತ್ತು ಆತನ ಪತ್ನಿ ನಿಕತ್ ಜೊತೆಗೆ ಆಶಿಯಾ ಜರಿನಾ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗೋಮಾಂಸವನ್ನು ಭಟ್ಕಳದ ಮುಜಾಫರ್ ಫಕ್ರು ಎಂಬಾತನಿಗೆ ನೀಡಲು ಕೊಂಡು ಹೋಗುತ್ತಿದ್ದರು. ಮಹಿಳೆಯರನ್ನು ಬಾಡಿಗೆ ವಾಹನದಲ್ಲಿ ಕೊಂಡು ಹೋಗುವ ಸೋಗಿನಲ್ಲಿ ದಂಧೆ ನಡೆಸಲಾಗುತ್ತಿದೆ. ಅಲ್ತಾಫ್  ದನಗಳನ್ನು ಕದ್ದು ತಂದು ಮಾಂಸ ಮಾಡಿ ಭಟ್ಕಳಕ್ಕೆ ಸಾಗಿಸುತ್ತಿದ್ದನು. ಬೈಂದೂರು ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಯಿ ಮಡಿಲು ಸೇರಿದ ಮಾರಾಟವಾಗಿದ್ದ ಮಗು

ದಾವಣಗೆರೆ: ಮಾರಾಟವಾಗಿದ್ದ ಮಗುವನ್ನು ದಾವಣಗೆರೆ  ಮಹಿಳಾ ಠಾಣೆಯ ಪೊಲೀಸರು 24 ಗಂಟೆಯಲ್ಲಿ ಪತ್ತೆ ಹಚ್ಚಿ ತಾಯಿಯಗೆ ಒಪ್ಪಿಸಿದ್ದಾರೆ. ಹಣದ ಆಸೆಗೆ 60 ಸಾವಿರಕ್ಕೆ ಮಗುವನ್ನು ದಾವಣಗೆರೆ ನಗರದ ನಾಗಮ್ಮಕೇಶವಮೂರ್ತಿ ಬಡಾವಣೆಯ ನಿವಾಸಿ ಬಸಪ್ಪ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನವಲೆ ಗ್ರಾಮದ ಹಾಲಪ್ಪ, ಬೀಮವ್ವ ಎಂಬ ದಂಪತಿಗೆ ಮಾರಾಟ ಮಾಡಿದ್ದನು. ಮಗುವಿನ ತಾತನೇ ಮಗುವನ್ನು ಮಾರಾಟ ಮಾಡಿದ್ದನು. ಮಗಳಾದ ಸುಜಾತಾಳ ಎರಡನೇ ಗಂಡು ಮಗುವನ್ನು ಬಸಪ್ಪ ಮಾರಾಟ ಮಾಡಿದ್ದನು. ಮಗುವಿನ ತಾತಾ, ಮಗು ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿ ಎಗ್ ರೈಸ್ ಪರಶುರಾಮನನ್ನ ಪೊಲೀಸರು ವಶಕ್ಕೆ ಪಡೆದ್ದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮ್ಮುಖದಲ್ಲಿ  ಪೊಲೀಸರು ತಾಯಿಗೆ ಹಸ್ತಾಂತರ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:26 pm, Fri, 10 June 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ