Shocking News: ಹೆಂಡತಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈ ಕತ್ತರಿಸಿದ ಗಂಡ!; ಹೀಗೂ ಇರ್ತಾರಾ?

ತನ್ನ ಹೆಂಡತಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ತಪ್ಪಿಗಾಗಿ ಆಕೆಯ ಗಂಡ ಆಕೆ ಮಲಗಿದ್ದಾಗ ಕೈಯನ್ನೇ ಕತ್ತರಿಸಿದ್ದಾನೆ. ಇದಕ್ಕೆ ಕಾರಣವೇನೆಂದು ತಿಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.

Shocking News: ಹೆಂಡತಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈ ಕತ್ತರಿಸಿದ ಗಂಡ!; ಹೀಗೂ ಇರ್ತಾರಾ?
ಗಂಡನಿಂದ ಹಲ್ಲೆಗೊಳಗಾದ ಮಹಿಳೆImage Credit source: Zee News
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 10, 2022 | 1:50 PM

ಸರ್ಕಾರಿ ಕೆಲಸ ಸಿಕ್ಕರೆ ಲೈಫ್ ಸೆಟಲ್ ಆಗುತ್ತದೆ ಎಂಬ ಅಭಿಪ್ರಾಯ ಎಲ್ಲರದು. ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ, ಪಶ್ಚಿಮ ಬಂಗಾಳದ (West Bengal) ವ್ಯಕ್ತಿಯೊಬ್ಬ ತನ್ನ ಹೆಂಡತಿ ಸರ್ಕಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ ಎಂದು ತಿಳಿದು ಕೋಪಗೊಂಡು, ಆಕೆಯ ಬಲಗೈಯನ್ನೇ ಕತ್ತರಿಸಿದ್ದಾನೆ! ಇದಕ್ಕೆ ಕಾರಣವೇನೆಂದು ಗೊತ್ತಾದರೆ ನೀವು ಆಶ್ಚರ್ಯ ಪಡುತ್ತೀರ.

ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಪೂರ್ವ ಬರ್ದವಾನ್​ನ ಮಹಿಳೆ ಸರ್ಕಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರಿಂದ ಬಹಳ ಖುಷಿ ಪಟ್ಟಿದ್ದಳು. ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಸೆಲೆಕ್ಟ್​ ಆಗಲು ಪರೀಕ್ಷೆ ಬರೆದಿದ್ದಳು. ಪೂರ್ವ ಬರ್ದ್ವಾನ್‌ನ ಕೇತುಗ್ರಾಮ್‌ನ ನಿವಾಸಿ ರೇಣು ಖಾತುನ್ ತನ್ನ ಹೊಸ ಉದ್ಯೋಗದಿಂದ ಬಹಳ ಸಂತೋಷಪಟ್ಟಿದ್ದರು. ಆದರೆ, ಆಕೆಯ ಖುಷಿ ಒಂದೇ ದಿನದಲ್ಲಿ ಕೊನೆಯಾಯಿತು. ಆ ರಾತ್ರಿ ಆಕೆ ಮಲಗಿದ್ದಾಗ ಆಕೆಯ ಗಂಡ ಆಕೆಯ ಬಲಗೈಯನ್ನು ಕತ್ತರಿಸಿದ್ದಾನೆ.

ತನ್ನ ಹೆಂಡತಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ತಪ್ಪಿಗಾಗಿ ಆಕೆಯ ಗಂಡ ಆಕೆ ಮಲಗಿದ್ದಾಗ ಕೈಯನ್ನೇ ಕತ್ತರಿಸಿದ್ದಾನೆ. ಈ ರೀತಿ ಮಾಡಿದ ಆರೋಪಿಯನ್ನು ಶೇರ್ ಮೊಹಮ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಆತ ದಿನಸಿ ಅಂಗಡಿ ನಡೆಸುತ್ತಿದ್ದು, ಆತನಿಗೆ ತನ್ನ ಹೆಂಡತಿ ರೇಣು ಖಾತುನ್ ಸರ್ಕಾರಿ ಉದ್ಯೋಗ ಪಡೆದರೆ ತನ್ನನ್ನು ಬಿಟ್ಟು ಹೋಗುತ್ತಾಳೆ ಎಂಬ ಭಯವಿತ್ತು. ಅದರಿಂದಲೇ ಆಕೆಯ ಕೈ ಕತ್ತರಿಸಿದ್ದಾನೆ.

ಇದನ್ನೂ ಓದಿ
Image
Viral Video: ಆ್ಯಂಬುಲೆನ್ಸ್​ ಇಲ್ಲದೆ 4 ವರ್ಷದ ಮಗಳ ಹೆಣವನ್ನು ಹೊತ್ತು ಬಸ್​ನಲ್ಲಿ ಹೋದ ತಂದೆ!
Image
Trending: ಬೆರಳುಗಳಲ್ಲಿ 12 ಇಂಚಿನ ಉಗುರುಗಳು! ಈಕೆಯ ದೈನಂದಿನ ಚಟುವಟಿಕೆಗಳು ಹೇಗಿದೆ ಗೊತ್ತಾ?
Image
Crime News: ಕುಡುಕ ಪತಿಯ ಕಾಟ ತಾಳಲಾರದೆ ಕತ್ತು ಹಿಚುಕಿ ಪತ್ನಿಯಿಂದಲೇ ಪತಿಯ ಕೊಲೆ!
Image
Viral Video: ಬೋರ್​ವೆಲ್​ಗೆ ಬಿದ್ದ 18 ತಿಂಗಳ ಮಗುವನ್ನು ಕಾಪಾಡಿದ ಸೈನಿಕರು; ವಿಡಿಯೋ ವೈರಲ್

ಇದನ್ನೂ ಓದಿ: Shocking News: ಪಬ್​ಜಿ ಆಡಬೇಡ ಎಂದ ಅಮ್ಮನನ್ನು ಕೊಂದ ಬಾಲಕ; ರೂಂ ಫ್ರೆಷನರ್​​ ಹಾಕಿ 2 ದಿನ ಶವ ಮುಚ್ಚಿಟ್ಟ!

ಆಕೆ ಶನಿವಾರ ರಾತ್ರಿ ಕೇತುಗ್ರಾಮ್‌ನ ಚಿನಿಶ್‌ಪುರದಲ್ಲಿರುವ ತಮ್ಮ ಮನೆಯಲ್ಲಿ ಮಲಗಿದ್ದಳು. ಆ ವೇಳೆ ಆರೋಪಿ ಶೇರ್ ಮೊಹಮ್ಮದ್ ಶೇಖ್ ತನ್ನ ಸ್ನೇಹಿತರೊಂದಿಗೆ ಮನೆಗೆ ನುಗ್ಗಿದ್ದ ಎನ್ನಲಾಗಿದೆ. ರೇಣು ತಡರಾತ್ರಿ ರೂಮಿನಲ್ಲಿ ಮಲಗಿದ್ದಳು. ಆ ಸಮಯದಲ್ಲಿ, ಅವಳ ಮುಖವನ್ನು ದಿಂಬಿನಿಂದ ಮುಚ್ಚಿದ ಆಕೆಯ ಗಂಡ ಬಲಗೈಯನ್ನು ಹರಿತವಾದ ಆಯುಧದದಿಂದ ಕೊಯ್ದಿದ್ದಾನೆ ಎನ್ನಲಾಗಿದೆ. ಕೊನೆಗೆ ಆಕೆಯ ಗಂಡನೇ ಆಕೆಯನ್ನು ಕತ್ವಾ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದ. ನಂತರ ಆ ಮಹಿಳೆಯನ್ನು ದುರ್ಗಾಪುರದ ನರ್ಸಿಂಗ್ ಹೋಂಗೆ ಸ್ಥಳಾಂತರಿಸಲಾಯಿತು.

ಅಲ್ಲಿ ವೈದ್ಯರು ಆಕೆಯ ತುಂಡಾದ ಕೈಯನ್ನು ಮತ್ತೆ ಸೇರಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಆದರೆ, ಆ ಕೈಯನ್ನು ಮತ್ತೆ ಜೋಡಿಸುವುದು ಸುಲಭವಲ್ಲ ಎನ್ನಲಾಗಿದೆ. ಬಲಗೈ ತುಂಡಾದರೆ ಆಕೆಗೆ ಸರ್ಕಾರಿ ನರ್ಸ್​ ಕೆಲಸ ಸಿಗುವುದಿಲ್ಲ ಎಂದು ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ. ರೇಣುಗೆ ಸರ್ಕಾರಿ ನೌಕರಿ ಸಿಗುತ್ತಿದ್ದಂತೆ ಆಕೆ ನಿನ್ನನ್ನು ಬಿಟ್ಟು ಹೋಗುತ್ತಾಳೆ ಎಂದು ಆತನ ಸ್ನೇಹಿತರು ರೇಣುವಿನ ಗಂಡನ ತಲೆಯಲ್ಲಿ ತುಂಬಿದ್ದರು. ತನ್ನ ಹೆಂಡತಿ ತನ್ನನ್ನು ತೊರೆಯುತ್ತಾಳೆಂಬ ಕಾರಣಕ್ಕೆ ಆಕೆಯ ಕೈ ಕತ್ತರಿಸಲಾಗಿದೆ ಎಂದು ಆಕೆಯ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ರೇಣು ತನ್ನ ಎಡಗೈನಲ್ಲಿ ಬರೆಯುವುದು, ತನ್ನ ಕೆಲಸ ಮಾಡಿಕೊಳ್ಳುವುದನ್ನು ಕಲಿಯುತ್ತಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:48 pm, Fri, 10 June 22

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ