ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿದ್ದ ಸಿಬ್ಬಂದಿಗೆ ಶಾಕ್ ಕೊಟ್ಟ ಕಮಲ್‌ ಪಂತ್, 1817 ಸಿಬ್ಬಂದಿ ವರ್ಗಾವಣೆ

| Updated By: ಆಯೇಷಾ ಬಾನು

Updated on: Aug 05, 2021 | 7:38 AM

Kamal Pant: ನಗರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಕ್ರಮ ಚಟುವಟಿಕೆಗಳ ಜೊತೆ ಅಧಿಕಾರಿಗಳ ಮೇಲೆ ಕಮಿಷನರ್ ನಿಗಾ ಇಟ್ಟಿದ್ದು ಬೆಂಗಳೂರಿನ ಠಾಣೆಗಳ ಆಡಳಿತ ಮಾರ್ಪಾಡು ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿದ್ದ ಸಿಬ್ಬಂದಿಗೆ ಶಾಕ್ ಕೊಟ್ಟ ಕಮಲ್‌ ಪಂತ್, 1817 ಸಿಬ್ಬಂದಿ ವರ್ಗಾವಣೆ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
Follow us on

ಬೆಂಗಳೂರು: ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಕಮಲ್‌ ಪಂತ್ ಶಾಕ್ ಕೊಟ್ಟಿದ್ದಾರೆ. ಒಂದೇ ಕಡೆಯಿದ್ದು ಹಿಡಿತ ಸಾಧಿಸಿದ್ದವರಿಗೆ ಎತ್ತಂಗಡಿ ಮಾಡಿದ್ದಾರೆ. ಸುಮಾರು 1,817 ಸಿಬ್ಬಂದಿ ವರ್ಗಾವಣೆ ಮಾಡಿ ಕಮಲ್‌ ಪಂತ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಕ್ರಮ ಚಟುವಟಿಕೆಗಳ ಜೊತೆ ಅಧಿಕಾರಿಗಳ ಮೇಲೆ ಕಮಿಷನರ್ ನಿಗಾ ಇಟ್ಟಿದ್ದು ಬೆಂಗಳೂರಿನ ಠಾಣೆಗಳ ಆಡಳಿತ ಮಾರ್ಪಾಡು ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್‌ ಪಂತ್ ಇಂತಹ ನಿರ್ಧಾರ ಮಾಡಿದ್ದು ಒಂದೇ ಠಾಣೆಯಲ್ಲಿ ಹಲವು ವರ್ಷಗಳಿಂದ ಇರುವ ಸಿಬ್ಬಂದಿಯ ಮಾಹಿತಿ ಪಡೆದಿದ್ದಾರೆ. ಎಷ್ಟು ವರ್ಷದಿಂದಿದ್ದಾರೆ, ಅವರ ಕಾರ್ಯವೈಖರಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ.

7-8 ವರ್ಷದಿಂದ ಒಂದೇ ಠಾಣೆಯಲ್ಲಿದ್ದುಕೊಂಡು ಠಾಣೆಯಲ್ಲಿರುವ ಇತರ ಸಿಬ್ಬಂದಿ ಮೇಲೆ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಹಿಡಿತ ಸಾಧಿಸಿರುವ ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಂಕಿಅಂಶಗಳ ಆಧಾರದಲ್ಲಿ ಸಿಬ್ಬಂದಿಗೆ ವರ್ಗಾವಣೆಯ ಬಿಸಿ ಮುಟ್ಟಿಸಿದ್ದಾರೆ. 127 ಪಿಎಸ್‌ಐ, 130 ಎಎಸ್‌ಐ, 999 ಸಿಹೆಚ್‌ಸಿ, 561 ಸಿಪಿಸಿ ಸೇರಿ ಒಟ್ಟು 1817 ಸಿಬ್ಬಂದಿಯ ವರ್ಗಾವಣೆ ಮಾಡಿ ಕಮಲ್‌ ಪಂತ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ತೀವ್ರ ಸಂಕಷ್ಟದ ನಡುವೆಯೂ ಬಿಗ್​ ಬಾಸ್​ ಓಟಿಟಿಗೆ ಬರ್ತಾರಾ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ?