ಬೆಂಗಳೂರಿನಲ್ಲಿ GST ಅಧಿಕಾರಿಗಳ ದಾಳಿ: 3 ಕೋಟಿ ಮೌಲ್ಯದ ಕುಕ್ಕರ್, ಗಡಿಯಾರ ಜಪ್ತಿ

|

Updated on: Mar 26, 2023 | 2:46 PM

ಯಲಹಂಕ ಬಳಿಯ ಇಂಟರ್​ನ್ಯಾಷನಲ್​ ಶಾಲೆ ಹಿಂಬದಿ ಗೋದಾಮಿನ ಮೇಲೆ ದಾಳಿ ಮಾಡಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನೇಂದ್ರ ಕುಮಾರ್​ಗೆ ಸೇರಿದ 3 ಕೋಟಿ ಮೌಲ್ಯದ ಕುಕ್ಕರ್, ಗಡಿಯಾರ ಜಪ್ತಿ ಮಾಡಲಾಗಿದೆ.

ಬೆಂಗಳೂರಿನಲ್ಲಿ GST ಅಧಿಕಾರಿಗಳ ದಾಳಿ: 3 ಕೋಟಿ ಮೌಲ್ಯದ ಕುಕ್ಕರ್, ಗಡಿಯಾರ ಜಪ್ತಿ
ಜಪ್ತಿ ಮಾಡಲಾದ ವಸ್ತುಗಳು
Follow us on

ಬೆಂಗಳೂರು: ಚುನಾವಣೆ ಹೊತ್ತಲ್ಲಿ(Karnataka Assembly Elections 2023) GST ಅಧಿಕಾರಿಗಳು ದಾಳಿ ನಡೆಸಿದ್ದು ಬೆಂಗಳೂರಿನಲ್ಲಿ 3 ಕೋಟಿ ಮೌಲ್ಯದ ಕುಕ್ಕರ್, ಗಡಿಯಾರ ಜಪ್ತಿ ಮಾಡಿದ್ದಾರೆ. ಯಲಹಂಕ ಬಳಿಯ ಇಂಟರ್​ನ್ಯಾಷನಲ್​ ಶಾಲೆ ಹಿಂಬದಿ ಗೋದಾಮಿನ ಮೇಲೆ ದಾಳಿ ಮಾಡಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನೇಂದ್ರ ಕುಮಾರ್​ಗೆ ಸೇರಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮತದಾರರಿಗೆ ಹಂಚಲು ಕುಕ್ಕರ್, ಗಡಿಯಾರಗಳು ಸಂಗ್ರಹಿಸಿಟಲಾಗಿತ್ತು.

ಅಕ್ರಮವಾಗಿ ಸಾಗಿಸ್ತಿದ್ದ 10 ಕೆಜಿ ಬೆಳ್ಳಿ ಆಭರಣ ವಶ

ಇನ್ನು ಮತ್ತೊಂದೆಡೆ ಬೆಂಗಳೂರಿನ ಎಸ್‌.ಜೆ.ಪಾರ್ಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಕೆಜಿ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಚುನಾವಣೆ ಸಮೀಪವಾಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದು ನಗರದಾದ್ಯಂತ ಬ್ಯಾರಿಕೇಡ್ ಹಾಕಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೈಕ್, ಕಾರು, ಆಟೋ, ಲಾರಿ ಸೇರಿದಂತೆ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ನಗರದಿಂದ ಹೊರ ಹೋಗುವ, ಒಳ ಬರುವ ಪ್ರಮುಖ ರಸ್ತೆಗಳಲ್ಲಿ, ಜಂಕ್ಷನ್, ಸರ್ಕಲ್ ಗಳಲ್ಲಿ ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ.  ಚುನಾವಣೆ ಹಿನ್ನೆಲೆ ಅಕ್ರಮವಾಗಿ ಹಣ, ಮದ್ಯ, ಗಿಫ್ಟ್ ಗಳು, ಸೇರಿದಂತೆ ಅನುಮಾನಾಸ್ಪದ ವಸ್ತುಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ಎರಡು ಲಕ್ಷಕ್ಕೂ ಅಧಿಕ ನಗದು ಸಾಗಾಟ ಮಾಡುವಂತಿಲ್ಲ. ಎರಡು ಲೀಟರ್ ಗೂ‌ ಹೆಚ್ಚು ಮದ್ಯ ಸಾಗಾಟ ಮಾಡುವಂತಿಲ್ಲ. ಒಂದು ವೇಳೆ ದೊಡ್ಡ ಮೊತ್ತದ ಹಣ, ವಸ್ತುಗಳು ಸಾಗಾಟ ಮಾಡಿದ್ರೆ ಸೂಕ್ತ ದಾಖಲೆ ನೀಡಬೇಕು. ಸದ್ಯ ನಗರದೆಲ್ಲೆಡೆ  ಪೊಲೀಸರ ತಪಾಸಣೆ ಮುಂದುವರೆದಿದೆ.

ಇದನ್ನೂ ಓದಿ:ಗಿಫ್ಟ್ ಪಾಲಿಟಿಕ್ಸ್: ಇಂದು ರಾಜ್ಯದ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಸೀರೆ, ಬೆಳ್ಳಿ ಬಂಗಾರ ವಶಕ್ಕೆ

ಕೊಪ್ಪಳದಲ್ಲಿ ಕಂತೆ ಕಂತೆ ಹಣ ಪತ್ತೆ

2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್​ಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ದಾಳಿ ನಡೆಸಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ 15 ಸಾವಿರ ಹಣವನ್ನು ಸೀಜ್ ಮಾಡಿದ್ದಾರೆ. ಹಣದ ಜೊತೆ ಬಟ್ಟೆಗಳನ್ನು ಸಹ ಸೀಜ್ ಮಾಡಲಾಗಿದೆ. ಸ್ಕೂಟಿಯಲ್ಲಿ ಕೊಪ್ಪಳದಿಂದ ಹೊಸಪೇಟೆಗೆ ತೆರಳುತ್ತಿದ್ದ ವ್ಯಕ್ತಿಗಳಿಂದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಗೌತಮ್ ಜೈನ್ ಹಾಗೂ ಜಿತೇಂದ್ರ ಜೈನ್ ಎನ್ನುವವ ಬಳಿ ದಾಖಲೆ ಇಲ್ಲದ ಲಕ್ಷಾಂತರೂ ಹಣ ಇತ್ತು. ಇದನ್ನು ಸಿಪಿಐ ಸಂತೋಷ ಹಳ್ಳೂರ್‌ ನೇತೃತ್ವದಲ್ಲಿ ಸೀಜ್ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:46 pm, Sun, 26 March 23