ಗಿಫ್ಟ್ ಪಾಲಿಟಿಕ್ಸ್: ಇಂದು ರಾಜ್ಯದ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಸೀರೆ, ಬೆಳ್ಳಿ ಬಂಗಾರ ವಶಕ್ಕೆ

2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಚೆಕ್ ಪೋಸ್ಟ್​ಗಳಲ್ಲಿ ನಿರ್ಮಿಸಿ, ಪೊಲೀಸರ ಹದ್ದಿನ ಕಣ್ಣು ಇಡಲಾಗಿದೆ. ಈ ಹಿನ್ನಲೆ ರಾಜ್ಯದ ವಿವಿದೆಡೆ ಒಂದೇ ದಿನ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಸೀರೆ, ಬೆಳ್ಳಿ ಬಂಗಾರ ವಶಕ್ಕೆ ಪಡೆಯಲಾಗಿದೆ.

ಗಿಫ್ಟ್ ಪಾಲಿಟಿಕ್ಸ್: ಇಂದು ರಾಜ್ಯದ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಸೀರೆ, ಬೆಳ್ಳಿ ಬಂಗಾರ ವಶಕ್ಕೆ
ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಬಂಗಾರ ವಶ
Follow us
|

Updated on: Mar 26, 2023 | 11:42 AM

ಕೊಪ್ಪಳ: 2023ರ ವಿಧಾನಸಭಾ ಚುನಾವಣೆಗೆ(Karnataka assembly election) ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಚೆಕ್ ಪೋಸ್ಟ್​ಗಳಲ್ಲಿ ನಿರ್ಮಿಸಿ, ಪೊಲೀಸರ ಹದ್ದಿನ ಕಣ್ಣು ಇಡಲಾಗಿದೆ. ಅದರಂತೆ ಇದೀಗ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಬಳಿ ದಾಳಿ ನಡೆಸಿ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷದ 15 ಸಾವಿರ ರೂಪಾಯಿಯ ಜೊತೆ ಬಟ್ಟೆಗಳನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ. ಕೊಪ್ಪಳದಿಂದ ಹೊಸಪೇಟೆಗೆ ಗೌತಮ್ ಜೈನ್ ಹಾಗೂ ಜಿತೇಂದ್ರ ಜೈನ್ ಎನ್ನುವವರು ದಾಖಲೆ ಇಲ್ಲದ ಲಕ್ಷಾಂತರೂ ಹಣವನ್ನ ಸ್ಕೂಟಿಯಲ್ಲಿ ಇಟ್ಟುಕೊಂಡು ತೆರಳುತ್ತಿದ್ದರು. ಈ ವೇಳೆ ಸಿಪಿಐ ಸಂತೋಷ ಹಳ್ಳೂರ್‌ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ. ಕೊಪ್ಪಳದ ನಗರಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಇನ್ನು ಇದೇ ಸಂದರ್ಭದಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಚೆಕ್​ಪೋಸ್ಟ್​​​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಇಳಕಲ್​​ನಿಂದ ಕುಷ್ಟಗಿ ಕಡೆ ಹೋಗುತ್ತಿದ್ದ ಮಹಿಂದ್ರಾ ಸ್ಕಾರ್ಫಿಯೋ ಕಾರ್​ನ್ನ ತಪಾಸಣೆ ಮಾಡಿದ ವೇಳೆ ಹಣ ಪತ್ತೆಯಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗಜೇಂದ್ರಗಡ ಪಟ್ಟಣದ ಚೆಕ್​​ಪೋಸ್ಟ್​​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಸೀಜ್

ಗದಗ: ಗಜೇಂದ್ರಗಡ ಪಟ್ಟಣದ ಚೆಕ್​​ಪೋಸ್ಟ್​​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.40 ಲಕ್ಷ ಹಣವನ್ನ ಸೀಜ್ ಮಾಡಲಾಗಿದೆ. ಕೊಪ್ಪಳದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕಾರನ್ನ ಇಳಕಲ್ ನಾಕಾ ಚೆಕ್ ಪೋಸ್ಟ್​ನಲ್ಲಿ ತಪಾಸಣೆ ಮಾಡಿದ್ದಾಗ ಹಣ ಪತ್ತೆಯಾಗಿದೆ. ಜೊತೆಗೆ 5 ಲಕ್ಷ ಮೌಲ್ಯದ ಸೀರೆ ಹಾಗೂ ಇತರ ವಸ್ತಗಳ ಪತ್ತೆಯಾಗಿದ್ದು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:ದಾಖಲೆಗಳಿಲ್ಲದೆ ಅಕ್ರಮವಾಗಿ ಹಣ ಸಾಗಾಟ: 1.14 ಕೋಟಿ ರೂ. ಹಣ ಜಪ್ತಿ, ಓರ್ವ ವ್ಯಕ್ತಿಯ ಬಂಧನ

ಸೂಕ್ತ ದಾಖಲೆಗಳು ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆಜಿ ಬೆಳ್ಳಿ ಆಭರಣ ವಶ

ಬೆಂಗಳೂರು: ಸೂಕ್ತ ದಾಖಲೆಗಳು ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆ.ಜಿ ಬೆಳ್ಳಿ ಆಭರಣವನ್ನ ಜಪ್ತಿ ಮಾಡಲಾಗಿದೆ. ಎಸ್‌.ಜೆ.ಪಾರ್ಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ