Kerala Floods: ಕರ್ನಾಟಕ ಬಿಜೆಪಿಯಿಂದ ಕೇರಳಕ್ಕೆ ಅಗತ್ಯ ವಸ್ತುಗಳ ರವಾನೆ

| Updated By: ganapathi bhat

Updated on: Oct 22, 2021 | 2:31 PM

ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಚೇರಿಯಿಂದ ಕೇರಳಕ್ಕೆ 5 ವಾಹನಗಳಲ್ಲಿ ಅಗತ್ಯ ವಸ್ತುಗಳು ರವಾನೆ ಆಗಿದೆ. ಕುಡಿಯುವ ನೀರು, ಹೊದಿಕೆ, ಟೂತ್ ಪೇಸ್ಟ್, ಬ್ರಶ್, ಬಟ್ಟೆ ಲಾರಿಗಳ ಮೂಲಕ ರವಾನೆ ಮಾಡಲಾಗಿದೆ.

Kerala Floods: ಕರ್ನಾಟಕ ಬಿಜೆಪಿಯಿಂದ ಕೇರಳಕ್ಕೆ ಅಗತ್ಯ ವಸ್ತುಗಳ ರವಾನೆ
ಕೇರಳದಲ್ಲಿ ಪ್ರವಾಹ ಪರಿಸ್ಥಿತಿ
Follow us on

ಬೆಂಗಳೂರು: ಕೇರಳದಲ್ಲಿ ಭಾರಿ ಮಳೆಯಿಂದ ಅಪಾರ ಹಾನಿ ಆಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿಯಿಂದ ಕೇರಳಕ್ಕೆ ಅಗತ್ಯ ವಸ್ತುಗಳ ರವಾನೆ ಮಾಡಲಾಗಿದೆ. ಕುಡಿಯುವ ನೀರು, ಹೊದಿಕೆ ಸೇರಿ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲಾಗಿದೆ. 5 ಲಾರಿಗಳಲ್ಲಿ ಕೇರಳಕ್ಕೆ ಅಗತ್ಯ ವಸ್ತುಗಳ ರವಾನೆ ಮಾಡಲಾಗಿದೆ. ಕೇರಳದಲ್ಲಿ ಜಲಪ್ರವಾಹ ಉಂಟಾಗಿದೆ. ಈ ಕಾರಣದಿಂದ ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಚೇರಿಯಿಂದ ಕೇರಳಕ್ಕೆ 5 ವಾಹನಗಳಲ್ಲಿ ಅಗತ್ಯ ವಸ್ತುಗಳು ರವಾನೆ ಆಗಿದೆ. ಕುಡಿಯುವ ನೀರು, ಹೊದಿಕೆ, ಟೂತ್ ಪೇಸ್ಟ್, ಬ್ರಶ್, ಬಟ್ಟೆ ಲಾರಿಗಳ ಮೂಲಕ ರವಾನೆ ಮಾಡಲಾಗಿದೆ. ಸಚಿವ ಡಾ. ಅಶ್ವಥ್ ನಾರಾಯಣ ಐದು ವಾಹನಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಕೇರಳದಲ್ಲಿ ಮಳೆ (Kerala Rain)ಯಿಂದಾದ ಅವಾಂತರಗಳಿಂದ ಈಗಾಗಲೇ ಸುಮಾರು 42 ಮಂದಿ ಮೃತಪಟ್ಟಿದ್ದು, 6 ಜನ ಕಾಣೆಯಾಗಿದ್ದಾರೆ. ಜನ ಮೃತರಾಗಿದ್ದಾರೆ. ಆದರೆ ಸದ್ಯಕ್ಕಂತೂ ಅಲ್ಲಿ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಭಾರತೀಯ ಹವಾಮಾನ ಇಲಾಖೆ (India Meteorological Department) ಅಕ್ಟೋಬರ್​ 25ರವರೆಗೂ ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್​ ಮತ್ತು ಯೆಲ್ಲೋ ಅಲರ್ಟ್​​ ಘೋಷಿಸಿದೆ. ಅದರಲ್ಲಿ ಕೊಟ್ಟಾಯಂ, ಇಡುಕ್ಕಿ, ಪಲಕ್ಕಾಡ್​​, ಮಲಪ್ಪುರಂ, ಕೊಯಿಕ್ಕೊಡ್​, ವಯಾನಾಡ್​ ಮತ್ತು ಕಣ್ಣೂರು, ಪಥನಂತಿಟ್ಟ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಹೇರಲಾಗಿದ್ದು, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ  ಹಳದಿ ಎಚ್ಚರಿಕೆ ನೀಡಲಾಗಿದೆ. ಆರೆಂಜ್​ ಅಲರ್ಟ್​ ಎಂದರೆ 6 ಸಿಎಂನಿಂದ 20 ಸಿಎಂನವರೆಗೆ ಮಳೆಯಾಗಬಹುದು ಎಂಬ ಎಚ್ಚರಿಕೆಯಾಗಿದೆ. ಹಾಗೇ ಹಳದಿ ಅಲರ್ಟ್​ ಎಂದರೆ 6ಸಿಎಂನಿಂದ 11 ಸಿಎಂವರೆಗೆ ಮಳೆಯಾಗಬಹುದು ಎಂಬ ಮುನ್ಸೂಚನೆಯಾಗಿದೆ.

ಸದ್ಯ ಕೇರಳದಲ್ಲಿ ನೈಋತ್ಯ ಮಾನ್ಸೂನ್​ ಸಕ್ರಿಯವಾಗಿದೆ. ಹೀಗಾಗಿ ಕೇರಳದ ಬಹುತೇಕ ಪ್ರದೇಶಗಳಲ್ಲಿ ಮತ್ತು ಲಕ್ಷದ್ವೀಪದ ವಿವಿಧ ಕಡೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಇಂದು ಕೇರಳದ ಕರಾವಳಿ ತೀರದಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ಇರಬಹುದಾದ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ.  ಇಂದಿನಿಂದ ಅಕ್ಟೋಬರ್​ 25ರವರೆಗೂ ಕೂಡ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕರೈಕಲ್​​ಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.  ಇದರೊಂದಿಗೆ ಅಕ್ಟೋಬರ್​ 22-24ರ ಅವಧಿಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್​, ಗಿಲ್ಗಿಟ್​-ಬಲ್ಚಿಸ್ತಾನ್​, ಮುಜಾಫರಾಬಾದ್​, ಹಿಮಾಚಲಪ್ರದೇಶ ಮತ್ತು ಪಂಜಾಬ್​ಗಳಲ್ಲಿ ಗುಡುಗು-ಮಿಂಚು-ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದೂ ವರದಿ ನೀಡಿದೆ.

ಇದನ್ನೂ ಓದಿ: Video: ಕೇರಳ ಮಳೆಯ ಭೀಕರತೆ; ನೋಡನೋಡುತ್ತಿದ್ದಂತೆ ನದಿಗೆ ಕುಸಿದುಬಿತ್ತು ಇಡೀ ಮನೆ

ಇದನ್ನೂ ಓದಿ: Kerala Floods ಜೀವ ಉಳಿಯಿತು, ಆದರೆ ಎಲ್ಲವನ್ನೂ ಕಳೆದುಕೊಂಡೆವು: ಕೇರಳ ಪ್ರವಾಹ ಸಂತ್ರಸ್ತರ ಅಳಲು