Kerala Floods ಜೀವ ಉಳಿಯಿತು, ಆದರೆ ಎಲ್ಲವನ್ನೂ ಕಳೆದುಕೊಂಡೆವು: ಕೇರಳ ಪ್ರವಾಹ ಸಂತ್ರಸ್ತರ ಅಳಲು
ಭಾರೀ ಮಳೆಯಿಂದಾಗಿ ಕೇರಳದಲ್ಲಿ ಸರಣಿ ಭೂಕುಸಿತಗಳು ಸಂಭವಿಸಿದ ಒಂದು ದಿನದ ನಂತರ, ಕೋಟ್ಟಯಂ ಮತ್ತು ಇಡುಕ್ಕಿ ಜಿಲ್ಲೆಗಳ ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಾಸಿಸುವ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ಕೂಟ್ಟಿಕ್ಕಲ್: ಭಾನುವಾರ ಬೆಳಿಗ್ಗೆ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಕುಗ್ರಾಮದಲ್ಲಿ ಮಳೆಯಿಂದ ಕೂಡಿದ ರಸ್ತೆಗಳಲ್ಲಿ ಓರ್ವ ವಯಸ್ಸಾದ ಮಹಿಳೆಯರು ಅತ್ತಿತ್ತ ಓಡುತ್ತಿದ್ದರು. “ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ.ನನ್ನ ಜೀವನದಲ್ಲಿರುವ ಎಲ್ಲವನ್ನೂ … ನಾನು ಎಲ್ಲಿಗೆ ಹೋಗಬೇಕು? … ಯಾರು ನನಗೆ ಆಶ್ರಯ ನೀಡುತ್ತಾರೆ?” ಎಂದು ಮಹಿಳೆಯೊಬ್ಬರು ಅಳುತ್ತಾ ಕೇಳುತ್ತಿದ್ದರು. ಶನಿವಾರ ಗ್ರಾಮದಲ್ಲಿ ಸುರಿದ ಅನಿರೀಕ್ಷಿತ ಧಾರಾಕಾರ ಮಳೆಗೆ ಎಲ್ಲವೂ ಕೊಚ್ಚಿ ಹೋಗಿದ್ದು ಅನೇಕ ಕುಟುಂಬಗಳು ನಿರಾಶ್ರಿತವಾಗಿವೆ. ಇದು ಕೇರಳದ ಕೋಟ್ಟಯಂ ಜಿಲ್ಲೆಯ ಕೂಟ್ಟಿಕ್ಕಲ್ (Koottickal) ಗ್ರಾಮದ ಪರಿಸ್ಥಿತಿ. “ನಮ್ಮ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ ಅವರಿಗೆ” ‘ಕೂರ’ ‘(ಗುಡಿಸಲು) ನಿರ್ಮಿಸಲು ನನಗೆ ಎರಡು ಸೆಂಟ್ಸ್ ಭೂಮಿಯನ್ನು ಕೊಡಿ ಎಂದು ಬೇಡಿಕೊಂಡೆ. ನನಗೆ ಹೋಗಲು ಬೇರೆ ಜಾಗವಿಲ್ಲ. ನನ್ನ ಹೆಣ್ಣುಮಕ್ಕಳ ಮನೆಗಳು ಕೂಡ ಮುಳುಗಿಹೋಗಿವೆ. ಈಗ ನಾನು ಚರ್ಚ್‌ಗೆ ಹೋಗುತ್ತಿದ್ದೇನೆ ನನಗೆ ಅಲ್ಲಿ ಜಾಗ ಸಿಗುತ್ತದೆಯೇ ಎಂದು ನೋಡಿ “ಎಂದು ಆ ಮಹಿಳೆ ಅಲ್ಲಿ ನೆರೆದಿದ್ದ ಪತ್ರಕರ್ತರಿಗೆ ಹೇಳಿದರು. ಇದು ನಿನ್ನೆ ಭಾರೀ ಮಳೆಯಿಂದ ಉಂಟಾದ ಭೂಕುಸಿತಗಳಿಂದಾಗಿ ತೀವ್ರ ನಾಶನಷ್ಟ ಅನುಭವಿಸಿದ ಕೇರಳದ ಕೋಟ್ಟಯಂ ಜಿಲ್ಲೆಯ ಕೂಟ್ಟಿಕಲ್‌ನಲ್ಲಿರುವ ಅನೇಕ ಹತಾಶ ಕುಟುಂಬಗಳ ಕಥೆ.
ಇಂದು ಬೆಳಿಗ್ಗೆ ವಿಪರೀತ ಮಳೆಯು ಸ್ವಲ್ಪ ಕಡಿಮೆಯಾದಾಗ ಈ ಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸ್ಥಳಾಂತರಗೊಂಡಿದ್ದು ನಿರಾಶ್ರಿತರ ಶಿಬಿರ ಸೇರಿದ್ದಾರೆ. ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಇಂತಹ ತೀವ್ರ ಮಳೆಯನ್ನು ನೋಡುತ್ತಿದ್ದೇವೆ ಎಂದು ಹಲವಾರು ಹಿರಿಜೀವಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
#KeralaRains Helo ops from #INSGaruda, #Kochi Southern Naval Command, being conducted for providing relief material to landslide affected areas in Koottickal, Kottayam.@SpokespersonMoD @DefenceMinIndia @DDNewslive @airnewsalerts @ndmaindia @HQ_IDS_India @adgpi @IAF_MCC https://t.co/EDg5BbATqp pic.twitter.com/65HByJOBXq
— SpokespersonNavy (@indiannavy) October 17, 2021
ಸ್ಥಳೀಯ ಅಂಗಡಿ ಮಾಲೀಕರು ಹೊಸ ಕಾರನ್ನು ತೋರಿಸಿದ್ದು ಅವರ ಕಾರು ಧ್ವಂಸಗೊಂಡಿದೆ. ಅದರ ಹಿಂದಿನ ಚಕ್ರಗಳು ಮನೆಯ ಆವರಣ ಗೋಡೆಯಲ್ಲಿ ನೇತಾಡುತ್ತಿತ್ತು. ಅದು ಮನೆಯ ಮುಂದೆ ನಿಲ್ಲಿಸಿದ ನನ್ನ ಹೊಸ ಕಾರು. ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಪ್ರವಾಹದ ನೀರು ಮನೆಯ ಕಾಂಪೌಂಡ್ ಒಳಗೆ ನುಗ್ಗಿದಾಗ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಹೆಂಡತಿ ಮತ್ತು ಮಕ್ಕಳು ನೆರೆಯವರ ಮನೆಗೆ ಓಡಿದರು ಎಂದು ಮಧ್ಯವಯಸ್ಕರೊಬ್ಬರು ಹೇಳಿದ್ದಾರೆ. ಇದನ್ನು ಹೇಳುವಾಗ ಭಾವುಕರಾದ ಆ ವ್ಯಕ್ತಿ ತಾನು ಧರಿಸಿರುವ ಈ ಮುಂಡು (ಧೋತಿ) ಕೂಡಾ ಪಕ್ಕದ ಮನೆಯವರು ಕೊಟ್ಟಿದ್ದು ಅಂದರು.
ಕೇವಲ ಪ್ರಾಣ ರಕ್ಷಣೆ ಆಗಿದೆ ಉಳಿದೆಲ್ಲವೂ ಕಳೆದುಹೋಯಿತು.2018 ರ ಪ್ರವಾಹದಲ್ಲಿ ಕೂಡ ಇಂತಹ ಭೀಕರ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂದು ಅವರುಹೇಳಿದರು.
ಇಡುಕ್ಕಿ ಜಿಲ್ಲೆಯ ಗುಡ್ಡಗಾಡು ಕುಗ್ರಾಮವಾದ ಕೊಕ್ಕಾಯಾರ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಇಲ್ಲಿ ನಿರಂತರ ಮಳೆಯಿಂದಾಗಿ ಶನಿವಾರ ಭೂಕುಸಿತವುಂಟಾಗಿ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಆಘಾತಕ್ಕೊಳಗಾದ ರಾಜಮ್ಮ ಎಂಬ ಮಹಿಳೆ ಬೆಟ್ಟದ ತಪ್ಪಲಿನಲ್ಲಿ ತನ್ನ ಮನೆಯ ಬಳಿ ಕೆಲವು ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮಕ್ಕಳು ಸೇರಿದಂತೆ ನಾಲ್ವರು ಸದಸ್ಯರ ಕುಟುಂಬವು ಕಣ್ಣ ಮುಂದೆ ಪ್ರವಾಹದ ನೀರಿನಿಂದ ಕೊಚ್ಚಿಹೋಗಿದೆ ಎಂದು ನಂಬಲಾಗುತ್ತಿಲ್ಲ ಎಂದಿದ್ದಾರೆ.
ಬೆಟ್ಟದ ತುದಿಯಿಂದ ಸಣ್ಣ ನೀರು ಬರುತ್ತಿರುವುದನ್ನು ಕಂಡಾಗ ಕುಟುಂಬವನ್ನು ಸ್ಥಳದಿಂದ ದೂರ ಹೋಗುವಂತೆ ಸಲಹೆ ನೀಡಿದ್ದರು. “ಆದರೆ, ಅವರು ತಮ್ಮ ಕೆಲಸವನ್ನು ಮುಂದುವರಿಸಿದರು. ಇದ್ದಕ್ಕಿದ್ದಂತೆ ಅವರು ನಿಂತಿದ್ದ ಬೆಟ್ಟದ ಒಂದು ಭಾಗವು ಗುಹೆಯಂತಾಗಿ ಬೃಹತ್ ಬಂಡೆಗಳು ಉರುಳಲು ಪ್ರಾರಂಭಿಸಿದವು, ಜೊತೆಗೆ ನೀರಿನ ಪ್ರವಾಹವು ಹೆಚ್ಚಾಯಿತು.. ನನಗೆ ಬೇರೇನೂ ನೆನಪಿಲ್ಲ ಎಂದು ಕಣ್ಣೀರಿಡುತ್ತಾ ಆ ಮಹಿಳೆ ಹೇಳಿದರು.
ಮಧ್ಯವಯಸ್ಕ ಜಾರ್ಜ್, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಶನಿವಾರ ರಾತ್ರಿ 11 ಗಂಟೆಯವರೆಗೆ ಗ್ರಾಮದಲ್ಲಿ ಎಲ್ಲವೂ ಚೆನ್ನಾಗಿತ್ತು ಎಂದು ಹೇಳಿದರು.
“ಆದರೆ, ಅದರ ನಂತರ ಪರಿಸ್ಥಿತಿ ಹದಗೆಟ್ಟಿತು. ಸುಮಾರು 10 ದೊಡ್ಡ ಸೇತುವೆಗಳು ಮತ್ತು ಅದೇ ಸಂಖ್ಯೆಯ ಮರದ ಸೇತುವೆಗಳು ಕೊಚ್ಚಿಹೋಗಿವೆ ಮತ್ತು ಗ್ರಾಮವು ಶೀಘ್ರದಲ್ಲೇ ಪ್ರತ್ಯೇಕಿಸಲ್ಪಟ್ಟಿತು ಎಂದು ಅವರು ಹೇಳಿದರು.
ಸೇನೆ, ಎನ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳ ಸ್ಥಳೀಯರೊಂದಿಗೆ ಭಾನುವಾರ ಬೆಳಿಗ್ಗೆ ರಕ್ಷಣಾ ಕಾರ್ಯಗಳನ್ನು ಆರಂಭಿಸಿದ್ದು, ಶನಿವಾರದಿಂದ ಭಾರೀ ಮಳೆಯಿಂದಾಗಿ ಹಲವಾರು ಭೂಕುಸಿತಗಳಿಂದಾಗಿ ಹತ್ತಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
ಭಾನುವಾರ ಬೆಳಿಗ್ಗೆ ರಕ್ಷಣಾ ಸಿಬ್ಬಂದಿಗಳು ನಾಲ್ಕು ಮೃತದೇಹಗಳನ್ನು ಕೂಟ್ಟಿಕಲ್ ಪಂಚಾಯತ್‌ನಿಂದ ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕುಸಿತ: ಸಾವಿನ ಸಂಖ್ಯೆ 18ಕ್ಕೆ ಏರಿಕೆ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಸರಣಿ ಭೂಕುಸಿತಗಳು ಸಂಭವಿಸಿದ ಒಂದು ದಿನದ ನಂತರ, ಕೋಟ್ಟಯಂ ಮತ್ತು ಇಡುಕ್ಕಿ ಜಿಲ್ಲೆಗಳ ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಾಸಿಸುವ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ ಮತ್ತು ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಇಲ್ಲಿಯವರೆಗೆ, ಸಾವಿನ ಸಂಖ್ಯೆ 18 ಕ್ಕೆ ತಲುಪಿದೆ ಎಂದು ಪಿಟಿಐ ವರದಿ ಮಾಡಿದೆ.
ಶನಿವಾರ ಭೂಕುಸಿತದ ಅವಶೇಷಗಳಿಂದ 15 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇದು ಕೊಟ್ಟಾಯಂನ ಕೂಟ್ಟಿಕಲ್‌ನ 12 ಮೃತದೇಹಗಳು, ಪೀರುಮೇಡುನಿಂದ ಒಂದು ಮೃತದೇಹ ಮತ್ತು ಇಡುಕ್ಕಿ ಜಿಲ್ಲೆಯ ಕಂಜಾರ್‌ನಲ್ಲಿ ನಿನ್ನೆ ಪತ್ತೆಯಾದ ಎರಡು ಮೃತದೇಹಗಳನ್ನು ಒಳಗೊಂಡಿದೆ ಎಂದು ಕಂದಾಯ ಸಚಿವ ಕೆ ರಾಜನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Kerala floods ಕೇರಳದಲ್ಲಿ ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ಎಲ್ಲ ರೀತಿಯ ಸಹಾಯ ಮಾಡಲು ಕೇಂದ್ರ ಸಿದ್ಧ: ಅಮಿತ್ ಶಾ ಭರವಸೆ