AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಸತತ ನಾಲ್ಕು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಪೆಟ್ರೋಲ್​, ಡೀಸೆಲ್​ ಬೆಲೆ ಇಂದು ಸ್ಥಿರ

Petrol Rate Today: ಕಳೆದ ದಿನಗಳಿಂದ ನಿರಂತರವಾಗಿ ಏರುತ್ತಲೇ ಇದ್ದ ಇಂಧನ ಬೆಲೆಯಿಂದ ಲೀಟರ್​ ಪೆಟ್ರೋಲ್​ ಬೆಲೆಯೊಂದೇ ಅಲ್ಲ, ಪ್ರಮುಖ ನಗರಗಳಲ್ಲಿ ಲೀಟರ್​ ಡೀಸೆಲ್​ ದರವೂ 100ರ ಗಡಿ ದಾಟಿ ಮುನ್ನುಗ್ಗಿದೆ.

Petrol Price Today: ಸತತ ನಾಲ್ಕು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಪೆಟ್ರೋಲ್​, ಡೀಸೆಲ್​ ಬೆಲೆ ಇಂದು ಸ್ಥಿರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 18, 2021 | 8:01 AM

Share

Petrol Diesel Price Today | ದೆಹಲಿ: ಸತತ ನಾಲ್ಕು ದಿಗಳಿಂದ ನಿರಂತರವಾಗಿ ಏರುತ್ತಲೇ ಇದ್ದ ಪೆಟ್ರೋಲ್​, ಡೀಸೆಲ್​ ಬೆಲೆ ಇಂದು ಸ್ಥಿರತೆ ಕಾಯ್ದುಕೊಂಡಿದೆ. ಇಂದು (ಅಕ್ಟೋಬರ್​ 18, ಸೋಮವಾರ) ಇಂಧನ ಬೆಲೆಯಲ್ಲಿ ​ (Fuel Price) ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕಳೆದ ದಿನಗಳಲ್ಲಿ ಸತತವಾಗಿ ಏರುತ್ತಲೇ ಇದ್ದ ಇಂಧನ ಬೆಲೆಯಿಂದ ಲೀಟರ್​ ಪೆಟ್ರೋಲ್​ ಬೆಲೆಯೊಂದೇ ಅಲ್ಲ, ಪ್ರಮುಖ ನಗರಗಳಲ್ಲಿ ಲೀಟರ್​ ಡೀಸೆಲ್​ ದರವೂ (Diesel Price) 100ರ ಗಡಿ ದಾಟಿ ಮುನ್ನುಗ್ಗಿದೆ. ಪ್ರಮುಖ ನಗರಗಳಲ್ಲಿ ಪೆಟ್ರೋಲ್ (Petrol Price)​, ಡೀಸೆಲ್​ ದರ ಎಷ್ಟಿದೆ? ಈ ಕುರಿತಾದ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಇಂದು ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಯಾವುದೇ ಏರಿಳಿತಗಳಿಲ್ಲ. ನಿನ್ನೆ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳ ಮಾಡಲಾಯಿತು.ಅದರ ನಂತರ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 105.84 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.57 ರೂಪಾಯಿಗೆ ಏರಿಕೆ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರವನ್ನು ನಿನ್ನೆ ಸುಮಾರು 37 ಪೈಸೆ ಹೆಚ್ಚಳ ಮಾಡಲಾಗಿದೆ. ಆ ನಂತರ ಲೀಟರ್​ ಪೆಟ್ರೋಲ್​ ದರ 111.77 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 102.52 ರೂಪಾಯಿ ಇದೆ.

ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ದರ 110.09 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 103.08 ರೂಪಾಯಿ ಇದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 103.01 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.92 ರೂಪಾಯಿ ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 106.43 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.68 ರೂಪಾಯಿ ಇದೆ.

ಇನ್ನು, ಬೆಂಗಳೂರಿನಲ್ಲಿ ನಿನ್ನೆ ದರ ಏರಿಕೆಯ ಬಳಿಕ ಲೀಟರ್ ಡೀಸೆಲ್ ದರವೂ ಸಹ 100ರ ಗಡಿ ದಾಟಿ ಮುನ್ನುಗ್ಗಿದೆ. ಲೀಟರ್ ಪೆಟ್ರೋಲ್ ದರ 109.53 ರೂಪಾಯಿಗೆ ಏರಿಕೆ ಆಗಿದ್ದರೆ, ಲೀಟರ್ ಡೀಸೆಲ್ ದರ 100.37 ರೂಪಾಯಿ ಆಗಿದೆ. ನಿರಂತರವಾಗಿ ಏರಿಕೆ ಕಾಣುತ್ತ ಗರಿಷ್ಠ ಮಟ್ಟ ತಲುಪಿದ ಇಂಧನ ದರ ಕಂಡು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 7:52 am, Mon, 18 October 21

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ