ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಯೋಜನೆ ರಾಜ್ಯದ ಎಲ್ಲ ಕಂಡಕ್ಟರ್-ಡ್ರೈವರುಗಳ ಜೇಬು ಖಾಲಿ ಮಾಡುತ್ತಿದೆ: ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ ಲೆಕ್ಕಾಚಾರ ಇಲ್ಲಿದೆ

|

Updated on: Jun 01, 2023 | 4:58 PM

ಮಹಿಳಾ ಪ್ರಯಾಣಿಕರ ಪರ್ಸ್​​ ತುಂಬಿಸುವ ಭರದಲ್ಲಿ ಕಂಡಕ್ಟರ್-ಡ್ರೈವರುಗಳ ಜೇಬು ಖಾಲಿ ಮಾಡುತ್ತಿರುವ ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಯೋಜನೆ!

ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಯೋಜನೆ ರಾಜ್ಯದ ಎಲ್ಲ ಕಂಡಕ್ಟರ್-ಡ್ರೈವರುಗಳ ಜೇಬು ಖಾಲಿ ಮಾಡುತ್ತಿದೆ: ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ ಲೆಕ್ಕಾಚಾರ ಇಲ್ಲಿದೆ
ಮಹಿಳಾ ಪ್ರಯಾಣಿಕರ ಪರ್ಸ್​​ ತುಂಬಿಸುವ ಭರದಲ್ಲಿ ಕಂಡಕ್ಟರ್-ಡ್ರೈವರುಗಳ ಜೇಬು ಖಾಲಿ
Follow us on

ಬೆಂಗಳೂರು: ನೂತನ ಕಾಂಗ್ರೆಸ್​ ಸರ್ಕಾರ (Karnataka Congress) ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿ ಘೋಷಣೆ (Guarantee Scheme) ಮಾಡಿದ್ದರ ಹಿನ್ನೆಲೆಯಲ್ಲಿ ಡ್ರೈವರ್ ಮತ್ತು ಕಂಡಕ್ಟರುಗಳು (Bus Conductor, Driver) ಕಂಗಾಲಾಗಿದ್ದಾರೆ. ಪ್ರಯಾಣಿಕರ ಮಧ್ಯೆ ಸಿಲುಕಿ ಹೈರಾಣಗೊಂಡಿದ್ದಾರೆ. ಬಿಲ್ಕುಲ್ ಟಿಕೆಟ್​​ ತಗೊಳ್ಳುವುದಿಲ್ಲ ಎಂದು ಬಹುತೇಕ ಎಲ್ಲ ಮಹಿಳಾ ಪ್ರಯಾಣಿಕರು ಬಿಗಿಪಟ್ಟು ಹಿಡಿದಿರುವುದೇ ಈ ಆತಂಕದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಕಂಡಕ್ಟರ್ ಗಳ ಜೇಬಿಗೆ ನೇರವಾಗಿ ಕತ್ತರಿ ಬೀಳುತ್ತಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮದ ಕಂಡಕ್ಟರ್ ಡ್ರೈವರ್ ಗಳಿಗೆ ಸಾವಿರ ರುಪಾಯಿ ಕಲೆಕ್ಷನ್ ಮಾಡಿದರೆ ಕಮಿಷನ್​​ ರೂಪದಲ್ಲಿ ಅವರುಗಳಿಗೆ (ಡ್ರೈವರ್ ಮತ್ತು ಕಂಡಕ್ಟರ್) ಇಪ್ಪತ್ತು, ಮೂವತ್ತು ರುಪಾಯಿ ಮತ್ತು ಹತ್ತು‌ ಸಾವಿರಕ್ಕೆ ಇನ್ನೂರು ಮುನ್ನೂರು ರುಪಾಯಿ ಆದಾಯ ಬರುತ್ತಿತ್ತು. ಸಾಮಾನ್ಯ ಕೆಎಸ್ಆರ್ಟಿಸಿ ಬಸ್ ನಲ್ಲಿ 15 ರಿಂದ 20 ಸಾವಿರ ರುಪಾಯಿ ಕಲೆಕ್ಷನ್ ಆಗುತ್ತದೆ. ಇದರಿಂದ ಒಬ್ಬ ಡ್ರೈವರ್ ಕಂಡಕ್ಟರ್ ಗೆ ಪ್ರತಿದಿನ 900 ರಿಂದ 1000 ರುಪಾಯಿ ಕಮೀಷನ್ ಸಿಗುತ್ತಿತ್ತು. ಈಗ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಕಂಡಕ್ಟರ್ ಡ್ರೈವರ್ ಗಳಿಗೆ ಸಿಗುತ್ತಿದ್ದ ಇನ್ಸೆಟಿವ್ ಗೆ ನೇರ ಕತ್ತರಿ ಬಿದ್ದಿದೆ.

ಕೆಎಸ್ಆರ್ಟಿಸಿ- NWKRTC ಹಾಗೂ KKRTC – ಡ್ರೈವರ್ ಮತ್ತು ಕಂಡಕ್ಟರ್ ಗೆ ಸಾವಿರಕ್ಕೆ – 20 ರುಪಾಯಿ ಮತ್ತು ಹತ್ತು ಸಾವಿರಕ್ಕೆ – 200 ರುಪಾಯಿ (ಡ್ರೈವರ್ ಮತ್ತು ಕಂಡಕ್ಟರ್) ನೂರು ರುಪಾಯಿ ಕಲೆಕ್ಷನ್ ಗೆ ಒಂದು 1 % ಪ್ರತಿದಿನ ಆಯಾ ನಿಗಮಗಳಿಂದ ಕೊಡಲಾಗುತ್ತದೆ. ಮಿನಿಮಮ್- 12 ರಿಂದ 15 ಸಾವಿರ ರುಪಾಯಿ ಕಲೆಕ್ಷನ್ ಆಗುತ್ತದೆ ( ಬೆಂಗಳೂರು ಟೂ ಕನಕಪುರ) ಇನ್ನು ಹೊರ ರಾಜ್ಯಗಳಿಗೆ ಹೋಗುವ ನಾರ್ಮಲ್ ಬಸ್ – 25 ರಿಂದ 30 ಸಾವಿರ ( ರಜೆ ಮತ್ತು ಹಬ್ಬದ ಸಂದರ್ಭದಲ್ಲಿ) ಎಸಿ ಬಸ್ಸುಗಳು ಐರಾವತ, ಎಸಿ ಸ್ಲೀಪರ್, ಅಂಬಾರಿ- ಡ್ರೀಮ್ ಕ್ಲಾಸ್ ಹಾಗೂ ರಾಜಹಂಸ ( 50 ರಿಂದ 70-90 ಸಾವಿರ ರುಪಾಯಿ ವರೆಗೆ ಕಲೆಕ್ಷನ್ ಆಗುತ್ತದೆ) ಹಬ್ಬದ ಸಂದರ್ಭದಲ್ಲಿ ಒಂದು ಲಕ್ಷ ರುಪಾಯಿ ಕಲೆಕ್ಷನ್ ದಾಟುತ್ತದೆ. ಬಿಎಂಟಿಸಿಯ 10 ರಿಂದ 15 ಕಿಮೀ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ಬಸ್ ಗಳಲ್ಲಿ 2500 ರಿಂದ 3000 ಸಾವಿರ (ಕಂಡಕ್ಟರ್ ಡ್ರೈವರ್ ಗೆ 70 ರುಪಾಯಿ ಇನ್ಸೆಟಿವ್ ಬರುತ್ತದೆ).

ಮೆಜೆಸ್ಟಿಕ್ ಟು ಬನಶಂಕರಿ, ಮೆಜೆಸ್ಟಿಕ್ ಟು ಶ್ರೀನಗರ ಹಾಗೂ ಹಲಸೂರು ನಿಂದ ಮೆಜೆಸ್ಟಿಕ್, ಕೆಂಗೇರಿ ಟು ಎಲೆಕ್ಟ್ರಾನಿಕ್ ಸಿಟಿ (30 ಕಿಮೀ 6 ರಿಂದ 7 ಸಾವಿರ ರುಪಾಯಿ ಕಲೆಕ್ಷನ್ ಆಗುತ್ತದೆ) ಕಂಡಕ್ಟರ್ ಡ್ರೈವರ್ ಗೆ ಸೇರಿ- 120 ರುಪಾಯಿ ಇನ್ಸೆಟಿವ್ ಸಿಗುತ್ತದೆ. ಯಲಹಂಕ ಟು ಕೆಂಗೇರಿ 9 ರಿಂದ 10 ಸಾವಿರ ರುಪಾಯಿ ಕಲೆಕ್ಷನ್ ಆದರೆ ಕಂಡಕ್ಟರ್, ಡ್ರೈವರ್ ಸೇರಿ – 250 ರಿಂದ 300 ರುಪಾಯಿ ಗಳಿಸಬಹುದು.

ಇನ್ನು ಒಬ್ಬರಿಗೆ ಅನುಕೂಲ ಮಾಡಿದ್ರೆ ಮತ್ತೊಬ್ಬರಿಗೆ ತೊಂದರೆ ಆಗುವಂತದ್ದು ಇದು. ಡ್ರೈವರ್ ಕಂ ಕಂಡಕ್ಟರ್ ಗಳಿಗೆ ಸಂಬಳ ಬರುವುದು ಹೆಚ್ಚಾಗಿ ಇನ್ಸೆಟಿವ್ ರೂಪದಲ್ಲಿ. ಈಗ ಅದಕ್ಕೂ ಕತ್ತರಿ ಬಿದ್ದರೆ ಕಂಡಕ್ಟರ್-ಡ್ರೈವರ್ ಗಳಿಗೆ ತೊಂದರೆ ಆಗುತ್ತದೆ. ನಿಮ್ಮ ಪಾಲಿಸಿ ಜಾರಿಗೆ ತರಲು ಡ್ರೈವರ್ ಕಂಡಕ್ಟರ್ ಜೇಬು ಕಳೆದುಕೊಳ್ಳಬೇಕಾಗುತ್ತದೆ. ಮಹಿಳೆಯರ ಪರ್ಸ್​​ನಲ್ಲಿ ಹಣ ತುಂಬಲು ಈ ಸ್ಕೀ ಜಾರಿಗೆ ತಂದಿದ್ದೀರಿ. ಈ ಯೋಜನೆ ಜಾರಿ ಮಾಡಲು ಹೇಗೂ 2 ರಿಂದ ‌3 ಸಾವಿರ ಕೋಟಿ ರುಪಾಯಿ ಬೇಕು. ಇದರ ಜೊತೆಯಲ್ಲಿ ನೂರು, ಇನ್ನೂರು ಕೋಟಿ ಯಾಕೆ ನಮಗೇ ಅಂತಾ ಮೀಸಲು ನೀಡಬಾರದು? ಅದನ್ನು ನೀಡುವುದರಿಂದ ಕಂಡಕ್ಟರ್, ಡ್ರೈವರ್ ಗಳಿಗೆ ಇ‌ನ್ಸೆಟಿವ್ ನೀಡಲು ಆಗುತ್ತದೆ. ಕಂಡಕ್ಟರ್, ಡ್ರೈವರ್ ಗಳು ಇನ್ಸೆಟಿವ್ ಹಣಕ್ಕೆ ಹೊಂದಿಕೊಂಡಿದ್ದಾರೆ. ಮೈಸೂರು ಮಾರ್ಗದಲ್ಲಿ ಇವತ್ತು ಡ್ಯೂಟಿ ಮಾಡಿದ್ರೆ ಇಷ್ಟು ಇನ್ಸೆಟಿವ್ ಬರ್ತಿತ್ತು. ಮಂಗಳೂರು ಮಾರ್ಗದಲ್ಲಿ ಡ್ಯೂಟಿ ಮಾಡಿದ್ರೆ ಇಷ್ಟು ಇನ್ಸೆಟಿವ್ ಬರ್ತಿತ್ತು ಅಂತ ಪ್ಲಾನ್ ಮಾಡಿಕೊಳ್ಳುತ್ತಿದ್ರು ಆಯಾ ಕಂಡಕ್ಟರ್ ಮತ್ತು ಡ್ರೈವರುಗಳು ಅವತ್ತಿಗೆ ಅವತ್ತು ;ಲೆಕ್ಕಾಚಾರದ ಜೀವನ ನಡೆಸುತ್ತಿದ್ದರು. ಆದರೆ ಈಗೇನಾಗಿದೆ ನೋಡಿ ಎಂದು ಇದೇ ಕಂಡಕ್ಟರ್, ಡ್ರೈವರ್ ಗಳು ಆಕ್ರೋಶದ ದನಿಯಲ್ಲಿ ತಮ್ಮ ಹವಾಲನ್ನು ಮಂಡಿಸಿದ್ದಾರೆ.

ಅದೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮಾಡೋದ್ರಿಂದ ಕಂಡಕ್ಟರ್, ಡ್ರೈವರ್ ಗಳಿಗೆ ತುಂಬಾ ಕಡಿಮೆ ಪ್ರಮಾಣದಲ್ಲಿ ಇನ್ಸೆಟಿವ್ ದೊರೆಯುತ್ತದೆ. ಒಬ್ಬರ ಕಣ್ಣು ಒರೆಸಲು ಮತ್ತೊಬ್ಬರ ಕಣ್ಣಿನಲ್ಲಿ ನೀರು ತರಿಸಬೇಡಿ. ಇಷ್ಟೊಂದು ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಲು ಮುಂದಾಗಿದ್ದೀರಾ ಇದು ದೊಡ್ಡದ್ದಲ್ಲ. ಹೆಣ್ಣು ಮಕ್ಕಳಿಗೆ ಟಿಕೆಟ್ ಕೊಡಲಿ ಬಿಡಲಿ ಅವನು ಡ್ಯೂಟಿ ‌ಮಾಡಲೇಬೇಕು. ಬಸ್ ನಿಲ್ಲಿಸಲೇಬೇಕು. ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೇಬೇಕಲ್ಲವಾ? ಸರ್ಕಾರ ಮತ್ತೊಂದು ರೀತಿಯ ಸಮಸ್ಯೆ ಶುರು ಮಾಡಬಾರದು. ನಾವು ಕೆಲಸ ಮಾಡುವ ಜನ ಎಂದು ಟಿವಿ9 ಜೊತೆ ಮಾತನಾಡುತ್ತಾ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ (AITUC Chief HV Ananth Subbarao) ಹೇಳಿದ್ದಾರೆ.