ಬೆಂಗಳೂರು: ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಮೇಕೆದಾಟು ಪಾದಯಾತ್ರೆ (Mekedatu Padayathra) ನಾಳೆಯಿಂದ (ಫೆ.7) ಆರಂಭವಾಗಲಿದೆ. ಮಾರ್ಚ್ 3ಕ್ಕೆ ಪಾದಯಾತ್ರೆ ಅಂತ್ಯವಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಮೇಕೆದಾಟು ಸಮಾರೋಪ ಸಮಾರಂಭ ನಡೆಯುವ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನವನ್ನು ಇಂದು ಡಿಕೆಶಿ ವೀಕ್ಷಣೆ ಮಾಡಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ (DK Shivakumar), ಜನರ ಆರೋಗ್ಯ ಮತ್ತು ಕೋರ್ಟ್ ಆದೇಶದ ಮೇರೆಗೆ ಮೊದಲ ಹಂತದ ಪಾದಯಾತ್ರೆ ನಿಲ್ಲಸಿದ್ದೇವು. ಈಗ ಮತ್ತೆ ಎರಡನೇ ಹಂತದ ಪಾದಯಾತ್ರೆ ಪ್ರಾರಂಭ ಮಾಡುತ್ತಿದ್ದೇವೆ ಅಂತ ತಿಳಿಸಿದರು.
ಇದು ಪಕ್ಷಾತೀತವಾದ ಹೋರಾಟ. ನಾಳೆ 9 ಕ್ಕೆ ಚಾಮುಂಡೇಶ್ವರಿ ಪೂಜೆ ಮಾಡಿ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಹಲವು ಸ್ವಾಮೀಜಿಗಳು ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. 3ನೇ ತಾರೀಖು ಬಸವನಗುಡಿಯಲ್ಲಿ ಬೃಹತ್ ಸಮಾರಂಭ ಇರಲಿದೆ. ಟಾಫ್ರಿಕ್ ಸಮಸ್ಯೆ ಪರಿಹಾರಕ್ಕೆ ಮೆಟ್ರೋ ಉಪಯೋಗ ಮಾಡುತ್ತೇವೆ. ಸಮಾವೇಶಕ್ಕೆ ಬರುವ ಹಾಗೇ ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ಎಷ್ಟು ಸಾಧ್ಯವೋ ಅಷ್ಟು ಮೆಟ್ರೋ ಉಪಯೋಗ ಮಾಡಿ ಬಸವನಗುಡಿ ಕಾರ್ಯಕ್ರಮಕ್ಕೆ ಬನ್ನಿ ಅಂತ ಡಿಕೆಶಿ ಮನವಿ ಮಾಡಿದ್ದಾರೆ.
ಎಲ್ಲಾ ನಾಗರಿಕರಿಗೆ ಮನವಿ ಮಾಡುತ್ತೀವಿ. ನಿಮ್ಮ ನೀರು, ಇದೊಂದು ಇತಿಹಾಸ. ನಿಮಗಾಗಿ ನೀರಿಗಾಗಿ ಈ ಪಾದಯಾತ್ರೆಗೆ ಬನ್ನಿ. ರಿಜಿಸ್ಟರ್ ಮಾಡಿಕೊಂಡರೆ ಸರ್ಟಿಫಿಕೇಟ್ ಕೊಡುತ್ತೀವಿ. ರಿಜಿಸ್ಟರ್ ಮಾಡಿಕೊಳ್ಳಿ ಪಾದಯಾತ್ರೆಗೆ ಬನ್ನಿ ಎಂದರು.
ಭಾರತದ ವಿದೇಶಾಂಗ ನೀತಿ ಬಗ್ಗೆ ಪ್ರಶ್ನೆ ಮಾಡಿದ ಕಾಂಗ್ರೆಸ್:
ಭಾರತದ ವಿದೇಶಾಂಗ ನೀತಿ ಸಂಪೂರ್ಣ ಹದಗೆಟ್ಟಿದೆ ಅಂತ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕಿಡಿ ಕಾರಿದ್ದಾರೆ. ಭಾರತ ನಿನ್ನೆ ಸ್ಪಷ್ಟನಾದ ನಿಲುವು ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಗೈರಾಗಿದ್ದು ಸರಿಯಲ್ಲ. ನಮ್ಮದು ಶಾಂತಿಯುತ ದೇಶ. ಅ ವಿಚಾರವನ್ನು ಭಾರತ ಪ್ರಸ್ತಾಪ ಮಾಡಬೇಕಿತ್ತು. ತನ್ನ ನಿಲುವನ್ನು ವಿಶ್ವಸಂಸ್ಥೆಯಲ್ಲಿ ಬಹಿರಂಗವಾಗಿ ಹೇಳಬೇಕಿತ್ತು ಅಂತ ಹೇಳಿದರು.
ಇದನ್ನೂ ಓದಿ
ಪತಿಯ ಫೇಸ್‌ಬುಕ್ ಖಾತೆಯಲ್ಲಿ ಪತ್ನಿಯ ಆರ್ಐಪಿ ಪೋಸ್ಟ್; ಮನೆಯಲ್ಲಿದ್ದ ಹೆಂಡತಿ ನಿಗೂಡವಾಗಿ ನಾಪತ್ತೆ
Published On - 2:46 pm, Sat, 26 February 22