AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹಣ ನೀಡದಕ್ಕೆ ಹೆತ್ತಮ್ಮನ ಕೆನ್ನೆಗೆ ಹೊಡೆದ ಪುತ್ರ! ತಾಯಿ ಸ್ಥಳದಲ್ಲೇ ಕೊನೆಯುಸಿರು

ಕುಡಿಯಲು ಹಣ ನೀಡುವಂತೆ ತಾಯಿ ಬಳಿ ಮಗ ಗಲಾಟೆ ಮಾಡಿದ್ದ. ಹಣ ನೀಡದ ಕೋಪಕ್ಕೆ ತಾಯಿಯ ಕೆನ್ನೆಗೆ ಮಗ ಅಂಬರೀಶ್ ಹೊಡೆದಿದ್ದಾನೆ. ತೀವ್ರ ಸ್ವರೂಪದ ಏಟು ಬಿದ್ದ ಕಾರಣ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಹಣ ನೀಡದಕ್ಕೆ ಹೆತ್ತಮ್ಮನ ಕೆನ್ನೆಗೆ ಹೊಡೆದ ಪುತ್ರ! ತಾಯಿ ಸ್ಥಳದಲ್ಲೇ ಕೊನೆಯುಸಿರು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 26, 2022 | 11:57 AM

Share

ಬೆಂಗಳೂರು: ನಗರದಲ್ಲಿ ಮಗನಿಂದಲೇ ತಾಯಿಯ (Mother) ಕೊಲೆ (Murder) ನಡೆದಿದೆ. ರಾತ್ರಿ ಮಾರತಹಳ್ಳಿ ಸಮೀಪದ ದೇವರ ಬಿಸನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಯಮುನಮ್ಮ (70) ಕೊಲೆಯಾದ ದುರ್ದೈವಿ. ಕುಡಿದ ಅಮಲಿನಲ್ಲಿ ಜಗಳ ತೆಗೆದು ಮಗ ಅಂಬರೀಶ್ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿದ್ದಾನೆ. ಕುಡಿಯಲು ಹಣ ನೀಡುವಂತೆ ತಾಯಿ ಬಳಿ ಮಗ ಗಲಾಟೆ ಮಾಡಿದ್ದ. ಹಣ ನೀಡದ ಕೋಪಕ್ಕೆ ತಾಯಿಯ ಕೆನ್ನೆಗೆ ಮಗ ಅಂಬರೀಶ್ ಹೊಡೆದಿದ್ದಾನೆ. ತೀವ್ರ ಸ್ವರೂಪದ ಏಟು ಬಿದ್ದ ಕಾರಣ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕಿ ಸಾವು: ಆಟವಾಡುವಾಗ ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಎಸ್ಟೇಟ್​ನಲ್ಲಿ ಸಂಭವಿಸಿದೆ. ಏಳು ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ  ಕೊನೆಯುಸಿರೆಳೆದಿದ್ದಾಳೆ. ಗೀತಾ-ಶೇಷಪ್ಪ ದಂಪತಿ ಪುತ್ರಿ ಪ್ರಾರ್ಥನಾ ಮೃತ ಮಗು. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ಕದ್ದಿದ್ದ ಆರೋಪಿ ಬಂಧನ: ನಾಗಮಂಗಲ ಟೌನ್​ನಲ್ಲಿ ಆಟೋ ಕದ್ದಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಯದ್ ರಫೀಕ್ ಬಂಧಿತ ಆರೋಪಿ‌. ಆಟೋ ಕದ್ದಿದ್ದ ಬಗ್ಗೆ ಮಂಡ್ಯದ ನಾಗಮಂಗಲ ಟೌನ್​ನಲ್ಲಿ ದೂರು ದಾಖಲಾಗಿತ್ತು. ನಗರದಲ್ಲಿ ರಾತ್ರಿ ಗಸ್ತು ವೇಳೆ ಆರೋಪಿ‌ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು, ಈ ಬಗ್ಗೆ ಪ್ರಶ್ನೆ ಮಾಡಿದಾಗ ಕದ್ದ ವಾಹನದ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಪೆಟ್ರೋಲ್ ದುಡ್ಡು ‌ನೀಡದೆ ಕಾರು ಸಮೇತ ಚಾಲಕ ಪರಾರಿ: ಮಂಡ್ಯ: ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ದುಡ್ಡು ‌ನೀಡದೆ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಮಳವಳ್ಳಿ ತಾಲೂಕಿನ ಮಾಗನೂರಿನ ಇಂಡಿಯನ್ ಪೆಟ್ರೋಲ್ ಬಂಕ್​ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. 2,100 ರೂ ನೀಡದೆ ಎಸ್ಕೇಪ್ ಆಗಿದ್ದಾನೆ. ಕಾರು ಚಾಲಕನ‌ ವಂಚನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಫೂಟೇಜ್ ಸಮೇತ ಕಾರು ಚಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ

Russia War On Ukraine: ಬೆಂಗಳೂರಿನ ಈ ಜ್ಯೋತಿಷ್ಯ ಪತ್ರಿಕೆಯಲ್ಲಿ 2 ತಿಂಗಳಿಗೂ ಮೊದಲೇ ರಷ್ಯಾ ಸೇನಾ ದಾಳಿ ಸುಳಿವು

Ukraine Crisis: ಪುಟಿನ್ ನಡೆಯ ವಿರುದ್ಧ ತಿರುಗಿಬಿದ್ದ ಜಗತ್ತಿನ ಜನರು; ವಿಶ್ವದೆಲ್ಲೆಡೆ ಪ್ರತಿಭಟನೆ- ಫೋಟೋಗಳು ಇಲ್ಲಿವೆ

Published On - 11:46 am, Sat, 26 February 22

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್