AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆದಾಟು ಪಾದಯಾತ್ರೆ ನಾಳೆಯಿಂದ ಆರಂಭ; ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಅನುಮತಿ

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ​ಪಾದಯಾತ್ರೆ ನಡೆಸಲಿದೆ. ನಾಳೆಯಿಂದ 2ನೇ ಹಂತದ ಪಾದಯಾತ್ರೆ ಆರಂಭ ಆಗಲಿದೆ. ಹೀಗಾಗಿ, ಪಾದಯಾತ್ರೆ ಆರಂಭವಾಗುವ ಸ್ಥಳಕ್ಕೆ ಭೇಟಿ ನೀಡಿ ಡಿ.ಕೆ. ಶಿವಕುಮಾರ್ ವೀಕ್ಷಣೆ ನಡೆಸಿದ್ದಾರೆ. ಕನಕಪುರ ಸರ್ಕಲ್ ಬಳಿ ವೇದಿಕೆ ಸಿದ್ಧತೆ ವೀಕ್ಷಿಸಿದ್ದಾರೆ.

ಮೇಕೆದಾಟು ಪಾದಯಾತ್ರೆ ನಾಳೆಯಿಂದ ಆರಂಭ; ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಅನುಮತಿ
ಕಾಂಗ್ರೆಸ್ (ಪ್ರಾತಿನಿಧಿಕ ಚಿತ್ರ)
TV9 Web
| Updated By: ganapathi bhat|

Updated on:Feb 26, 2022 | 6:17 PM

Share

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ​ಪಾದಯಾತ್ರೆ ನಾಳೆಯಿಂದ (ಫೆಬ್ರವರಿ 27) ಆರಂಭ ಆಗಲಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಅನುಮತಿ ನೀಡಲಾಗಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಅನುಮತಿ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯಕ್ರಮಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ, ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಕೊವಿಡ್ ನಿಯಮ ಪಾಲಿಸುವಂತೆ ಹೇಳಿ ಷರತ್ತು ಬದ್ಧ ಅನುಮತಿ ನೀಡಲಾಗಿದೆ.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ​ಪಾದಯಾತ್ರೆ ನಡೆಸಲಿದೆ. ನಾಳೆಯಿಂದ 2ನೇ ಹಂತದ ಪಾದಯಾತ್ರೆ ಆರಂಭ ಆಗಲಿದೆ. ಹೀಗಾಗಿ, ಪಾದಯಾತ್ರೆ ಆರಂಭವಾಗುವ ಸ್ಥಳಕ್ಕೆ ಭೇಟಿ ನೀಡಿ ಡಿ.ಕೆ. ಶಿವಕುಮಾರ್ ವೀಕ್ಷಣೆ ನಡೆಸಿದ್ದಾರೆ. ಕನಕಪುರ ಸರ್ಕಲ್ ಬಳಿ ವೇದಿಕೆ ಸಿದ್ಧತೆ ವೀಕ್ಷಿಸಿದ್ದಾರೆ.

ಜನರಿಗೋಸ್ಕರ ಈ ಪಾದಯಾತ್ರೆ ಮಾಡುತ್ತಿದ್ದೇವೆ. ಎಲ್ಲರಿಗೂ ಕೂಡ ಅಹ್ವಾನ ಮಾಡಿದ್ದೇವೆ. ಯಾರು ಬೇಕಾದರೂ ಈ ಪಾದಯಾತ್ರೆಯಲ್ಲಿ‌ ಪಾಲ್ಗೊಳ್ಳಬಹುದು. ಇತಿಹಾಸ ಪುಟಕ್ಕೆ ಸೇರುವ ಒಂದು ಅವಕಾಶ ಇದು. ನಾವು ಯಾರು ಎಷ್ಟು ದಿನ ಬದುಕಿರುತ್ತೇವೆ ಎಂಬುದು ಮುಖ್ಯವಲ್ಲ. ಬದುಕಿದ್ದಾಗ ಏನು ಮಾಡಿದ್ದೇವೆ ಎಂಬುದು ಮುಖ್ಯ. ನಾಳೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಆರಂಭಗೊಳ್ಳಲಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಬರುತ್ತಾರೆ. ಕಾರ್ಯಕ್ರಮದ ಉದ್ಘಾಟನೆ ಅವರೇ ನೆರವೇರಿಸಲಿದ್ದಾರೆ. ಶಾಸಕರು, ಮಾಜಿ ಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಸಚಿವ ಮುನಿರತ್ನ ಕೋಲಾರದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್​ನವರಿಗೆ ಯಾವುದೋ ಒಂದು ರೀತಿಯಲ್ಲಿ ಪ್ರಚಾರ ಪಡೆಯಬೇಕು. ಅಧಿವೇಶನ ವೇಳೆ ಕಲಾಪ ನಡೆಯಲು ಬಿಡದೇ ಧರಣಿ ನಡೆಸಿ ಕಾಲ ಕಳೆದಿದ್ದಾರೆ. ಮೇಕೆದಾಟು ಅವಶ್ಯಕತೆ ಇದ್ದಿದ್ರೆ ವಿಧಾನಸಭೆಯಲ್ಲಿ ಚರ್ಚೆ ಮಾಡಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸರ್ಕಾರದ ಗಮನ ಸೆಳೆಯಬಹುದಿತ್ತು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ಹರ್ಷ ಸಾವಿಗೂ ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ: ಸಿದ್ದರಾಮಯ್ಯ

ಇತ್ತ ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹರ್ಷ ಸಾವಿಗೂ ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ. ಹರ್ಷ ಸಾವಿನ ಬಳಿಕ ನಡೆದ ಗಲಭೆಗೆ ಈಶ್ವರಪ್ಪನೇ ಕಾರಣ. ಸಚಿವ ಕೆ.ಎಸ್​. ಈಶ್ವರಪ್ಪ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಅರ್ಧಕ್ಕೆ ನಿಂತಿದ್ದ ಮೇಕೆದಾಟು ಪಾದಯಾತ್ರೆ ನಾಳೆಯಿಂದ ಆರಂಭ; ಪಾದಯಾತ್ರೆಯಲ್ಲಿ ಭಾಗಿಯಾಗಲು ಡಿಕೆ ಶಿವಕುಮಾರ್ ಮನವಿ

ಇದನ್ನೂ ಓದಿ: ಮೇಕೆದಾಟು 2.0ಗೆ ಕಾಂಗ್ರೆಸ್ ಸಜ್ಜು, ಟಕ್ಕರ್ ಕೊಡಲು ಕೇಸರಿ ಪಡೆ ಡಿಫರೆಂಟ್ ಪ್ಲ್ಯಾನ್!

Published On - 6:13 pm, Sat, 26 February 22