ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು (Coronavirus Infection) ತೀವ್ರಗತಿಯಲ್ಲಿ ಹರಡುತ್ತಿದೆ. ರಾಜ್ಯದಲ್ಲಿ ಗುರುವಾರ (ಜ 20) ಒಟ್ಟು 47,754 ಮಂದಿಯಲ್ಲಿ ಸೋಂಕು (Covid-19) ದೃಢಪಟ್ಟಿದ್ದು, 29 ಜನರು ಸಾವನ್ನಪ್ಪಿದ್ದಾರೆ, 22,143 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 2,93,231 ಸಕ್ರಿಯ (Active Cases) ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಶೇ 18.49 ಮತ್ತು ಸೋಂಕಿನಿಂದ ಸಾಯುವವರ ಸರಾಸರಿ ಶೇ 0.06 ಇದೆ. ರಾಜ್ಯದಲ್ಲಿ ಈವರೆಗೆ 33,76,953 ಮಂದಿಯಲ್ಲಿ ಕೊವಿಡ್ ದೃಢಪಟ್ಟಿದ್ದು, 30,45,177 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,515 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರದಲ್ಲಿ 30,540 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 13,195 ಜನರು ಚೇತರಿಸಿಕೊಂಡಿದ್ದಾರೆ. 8 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 15,13,024 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 12,94,831 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 2,01,714 ಸಕ್ರಿಯ ಪ್ರಕರಣಗಳಿವೆ. ಒಟ್ಟು 16,478 ಜನರು ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬಾಗಲಕೋಟೆ 66, ಬಳ್ಳಾರಿ 952, ಬೆಳಗಾವಿ 442, ಬೆಂಗಳೂರು ಗ್ರಾಮಾಂತರ 974, ಬೆಂಗಳೂರು ನಗರ 30,540, ಬೀದರ್ 311, ಚಾಮರಾಜನಗರ 384, ಚಿಕ್ಕಬಳ್ಳಾಪುರ 522, ಚಿಕ್ಕಮಗಳೂರು 387, ಚಿತ್ರದುರ್ಗ 462, ದಕ್ಷಿಣ ಕನ್ನಡ 974, ದಾವಣಗೆರೆ 152, ಧಾರವಾಡ 698, ಗದಗ 289, ಹಾಸನ 1840, ಹಾವೇರಿ 65, ಕಲಬುರ್ಗಿ 658, ಕೊಡಗು 195, ಕೋಲಾರ 511, ಕೊಪ್ಪಳ 348, ಮಂಡ್ಯ 1512, ರಾಯಚೂರು 329, ರಾಮನಗರ 150, ಶಿವಮೊಗ್ಗ 373, ತುಮಕೂರು 1622, ಉಡುಪಿ 767, ಉತ್ತರ ಕನ್ನಡ 611, ವಿಜಯಪುರ 188, ಯಾದಗಿರಿ 80.
ಇಂದಿನ 20/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/radPFMQ8SU @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/4E9g5ZfgZZ
— K’taka Health Dept (@DHFWKA) January 20, 2022
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 8, ಕಲಬುರ್ಗಿ, ಮೈಸೂರು, 5, ಬೀದರ್, ತುಮಕೂರು 2, ಕೊಪ್ಪಳ, ದಕ್ಷಿಣ ಕನ್ನಡ, ಮಂಡ್ಯ, ರಾಯಚೂರು, ಉತ್ತರ ಕನ್ನಡ, ಬಾಗಲಕೋಟೆ, ಗದಗ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕೊವಿಡ್ 2ನೇ ಅಲೆಗಿಂತ 3ನೇ ಅಲೆಯಲ್ಲಿ ಮರಣ ಪ್ರಮಾಣ ಗಣನೀಯವಾಗಿ ಕಡಿಮೆ: ಆರೋಗ್ಯ ಸಚಿವಾಲಯ
ಇದನ್ನೂ ಓದಿ: ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ಹೊಸ ಕೊವಿಡ್ ಮಾರ್ಗಸೂಚಿಯ ತೀರ್ಮಾನ: ಆರ್ ಅಶೋಕ್
Published On - 7:23 pm, Thu, 20 January 22