ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸುತ್ತೇವೆ. ನಾಳೆ ಮಧ್ಯಾಹ್ನ 2 ಗಂಟೆ ವೇಳೆಗೆ ಸ್ಪಷ್ಟ ಮಾಹಿತಿ ಸಿಗುತ್ತದೆ. ಅಮೆರಿಕದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಹೀಗಾಗಿ ಅಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಸಾವುಗಳು ಕೂಡ ಹೆಚ್ಚಾಗಿವೆ. ಆದರೆ ರಾಜ್ಯದಲ್ಲಿ ಅಂತಹ ಯಾವುದೇ ಘಟನೆ ನಡೆಯಬಾರದು. ಬ್ಯುಸಿನೆಸ್ ಒಂದೇ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನಿಸಲ್ಲ. ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಗೊಂದಲ ಇಲ್ಲ. ಕೆಲವರು ಸಲಹೆಗಳನ್ನು ನೀಡುತ್ತಿದ್ದಾರೆ, ಅದು ಮುಖ್ಯವಲ್ಲ. ತಜ್ಞರು, ಕೇಂದ್ರ ಸರ್ಕಾರ, WHO ಗೈಡ್‌ಲೈನ್ಸ್ ಪಾಲಿಸ್ತೇವೆ. ಅದರ ಜತೆಗೆ ನಾಯಕರ ಸಲಹೆಗಳ ಬಗ್ಗೆ ಚರ್ಚಿಸುತ್ತೇವೆ. ತಜ್ಞರ ಸಲಹೆ ಬಿಟ್ಟು ನಾವು ಏನೂ ಮಾಡಿಲ್ಲ. ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ತಾರೆ. ಯಾವುದೇ ಪಕ್ಷದವರಾದರೂ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
45-50 ಲಕ್ಷ ರೈತ ಕುಟುಂಬಗಳ ಮನೆ ಬಾಗಿಲಿಗೆ ದಾಖಲೆ
ಕರ್ನಾಟಕ ರಾಜ್ಯದಲ್ಲಿ ಸುಮಾರು 45-50 ಲಕ್ಷ ರೈತ ಕುಟುಂಬಗಳಿಗೆ ದಾಖಲೆ ಪಡೆಯವುದಕ್ಕೆ ಸಮಸ್ಯೆಯಾಗ್ತಿತ್ತು. ಹೀಗಾಗಿ ಈ ವರ್ಷದಿಂದ ರೈತರ ಮನೆ ಬಾಗಿಲಿಗೆ ದಾಖಲೆ ನೀಡಲಾಗುತ್ತಿದೆ. ಕಂದಾಯ ಇಲಾಖೆ ಎಲ್ಲ ದಾಖಲೆ ಮನೆ ಬಾಗಿಲಿಗೆ ತಲುಪುತ್ತೆ. ಒಂದೇ ದಿನದಲ್ಲಿ ದಾಖಲೆ ತಲುಪುವಂತೆ ಕ್ರಮಕೈಗೊಳ್ಳುತ್ತೇವೆ. ಕೆಲವರಿಗೆ ದಾಖಲೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಎಲ್ಲರಿಗೂ ಮಾಹಿತಿ ತಿಳಿಯಲು ದಾಖಲೆ ನೀಡುತ್ತೇವೆ. ರೈತರಿಗೆ ನಾವು ಮಾಹಿತಿ ಹಕ್ಕು ನೀಡುತ್ತೇವೆ. ಇದಕ್ಕೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ನಾನು, ಸಿಎಂ ಸ್ವತಃ ತೆರಳಿ ರೈತರ ಮನೆ ಬಾಗಿಲಿಗೆ ನೀಡುತ್ತೇವೆ. ದಾಖಲೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.
ಇನಾಮು ಭೂಮಿ ನೋಂದಣಿಗೆ ಮತ್ತೊಮ್ಮೆ ಅವಕಾಶ
ಇನಾಮು ಭೂಮಿ ನೋಂದಣಿಗೆ ಮತ್ತೊಮ್ಮೆ ಅವಕಾಶವಿದೆ. ರಾಜ್ಯದ ಬಡ ರೈತರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸುತ್ತಿದ್ದೇವೆ. ರಾಜ್ಯದ 5 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೆ ಕಾರ್ಯ ಮಾಡುತ್ತೇವೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ಸರ್ವೆ ಮಾಡುತ್ತೇವೆ. ಬ್ರಿಟಿಷರ ಕಾಲದಲ್ಲಿ ಆದ ಬಳಿಕ ಸರ್ವೆ ಕಾರ್ಯ ನಡೆದಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭೂಮಿ ಸರ್ವೆ ಮಾಡಲು ನಿರ್ಧಾರ ಮಾಡಲಾಗಿದೆ. ಎಲ್ಲ ಭೂಮಿ ಸರ್ವೆ ಮಾಡಿ ಡಿಜಿಟಲ್ ರೂಪದಲ್ಲಿ ದಾಖಲೆ ಮಾಡುತ್ತೇವೆ. ಡಿಜಿಟಲ್ ರೂಪದಲ್ಲಿ ದಾಖಲೆ ಇಡಲು ಯೋಜನೆ ಇದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಕೆಲ ಸಮುದಾಯಗಳು ಇತ್ತೀಚೆಗೆ ನೆಲೆ ಕಂಡುಕೊಳ್ಳುತ್ತಿವೆ. ಅಂತಹ ಸಮುದಾಯಗಳಿದ್ದ ಕಡೆ ಗ್ರಾಮ ಮಾಡುತ್ತೇವೆ. ಗ್ರಾಮ ಮಾಡಿದರೆ ಅವರಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೆ ಅವು ತಾಂಡಗಳೇ ಉಳಿದುಬಿಡುತ್ತವೆ. ಹೀಗಾಗಿ ಗೆಜೆಟ್ ಮಾಡಿ ಕಂದಾಯ ಗ್ರಾಮ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ; ಬಿಜೆಪಿಯ ಎನ್ಆರ್ ರಮೇಶ್ ವಿರುದ್ಧ ಎಫ್ಐಆರ್ ದಾಖಲು