ಭಾರತದಲ್ಲಿ ಇಂದು ದಾಖಲಾದ ಕೊರೊನಾ ಕೇಸ್​ಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು; ಪಾಸಿಟಿವಿಟಿ ರೇಟ್ ಶೇ.​ 16ಕ್ಕೆ ಏರಿಕೆ, ಚೇತರಿಕೆ ಪ್ರಮಾಣದಲ್ಲಿ ಇಳಿಕೆ

ಕೇರಳದಲ್ಲಿ ಕೊರೊನಾ ವಿಪರೀತ ಹೆಚ್ಚಳವಾಗುತ್ತಿದ್ದು, ಅಲ್ಲೀಗ ಪಾಸಿಟಿವಿಟಿ ರೇಟ್​ ಶೇ.37ರಷ್ಟಿದೆ. ಅದರಲ್ಲೂ ಮುಂದಿನ ಮೂರು ವಾರಗಳು ಕೇರಳದ ಪಾಲಿಗೆ ಅತ್ಯಂತ ಕಠಿಣ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಹೇಳಿದ್ದಾರೆ.

ಭಾರತದಲ್ಲಿ ಇಂದು ದಾಖಲಾದ ಕೊರೊನಾ ಕೇಸ್​ಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು; ಪಾಸಿಟಿವಿಟಿ ರೇಟ್ ಶೇ.​ 16ಕ್ಕೆ ಏರಿಕೆ, ಚೇತರಿಕೆ ಪ್ರಮಾಣದಲ್ಲಿ ಇಳಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jan 20, 2022 | 9:56 AM

ಭಾರತದಲ್ಲಿಂದು ದಾಖಲಾದ ಕೊವಿಡ್ 19 ಸೋಂಕಿತರ (Covid 19 Cases in India) ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಇಂದು ಬರೋಬ್ಬರಿ 3,17, 532 ಕೊರೊನಾ ಕೇಸ್​ಗಳು ದಾಖಲಾಗಿವೆ. ನಿನ್ನೆ 2,82, 970 ಪ್ರಕರಣಗಳು ದಾಖಲಾಗಿದ್ದವು. ನಿನ್ನೆಗಿಂತಲೂ ಇಂದು ಬರೋಬ್ಬರಿ 34,562 ಕೇಸ್​ಗಳು ಹೆಚ್ಚಾಗಿವೆ. ಹಾಗೇ, 24 ಗಂಟೆಯಲ್ಲಿ 491 ಮಂದಿ ಕೊರೊನಾದಿಂದ ಮೃತಪಟ್ಟಿವೆ. ದೇಶದಲ್ಲೀಗ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ  38,218,773ಕ್ಕೆ ತಲುಪಿದೆ. ದಿನದ ಪಾಸಿಟಿವಿಟಿ ರೇಟ್​ 16.41 ಆಗಿದೆ. ನಿನ್ನೆ ಈ ರೇಟ್​ 15.13 ಇತ್ತು. ಕೊರೊನಾ ಸಕ್ರಿಯ ಪ್ರಕರಣಗಳು 19,24,051 ಇವೆ. ಹಾಗೇ, ಚೇತರಿಕೆ ಪ್ರಮಾಣ ಶೇ.93.69ಕ್ಕೆ ಇಳಿಕೆಯಾಗಿದೆ. ಇನ್ನೊಂದೆಡೆ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಕ್ಯೆ  9,287 ಕ್ಕೆ ತಲುಪಿದೆ.

ಕೇರಳದಲ್ಲಿ ಕೊರೊನಾ ವಿಪರೀತ ಹೆಚ್ಚಳವಾಗುತ್ತಿದ್ದು, ಅಲ್ಲೀಗ ಪಾಸಿಟಿವಿಟಿ ರೇಟ್​ ಶೇ.37ರಷ್ಟಿದೆ. ಅದರಲ್ಲೂ ಮುಂದಿನ ಮೂರು ವಾರಗಳು ಕೇರಳದ ಪಾಲಿಗೆ ಅತ್ಯಂತ ಕಠಿಣ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಹೇಳಿದ್ದಾರೆ. ಮುಂಬೈನಲ್ಲಿ ಇಂದು ಮತ್ತೆ 12 ಪೊಲೀಸರಲ್ಲಿ ಕೊರೊನಾ ದೃಢಪಟ್ಟಿದೆ. ಅಲ್ಲಿಗೆ ಒಟ್ಟು ಕೊರೊನಾ ಸೋಂಕಿತ ಪೊಲೀಸರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ. ಇದುವರೆಗೆ ಮುಂಬೈನಲ್ಲಿ ಒಟ್ಟು 127 ಪೊಲೀಸರು ಕೊರೊನಾದಿಂದ ಮೃತಪಟ್ಟಿದ್ದಾರೆ. ದೇಶಾದ್ಯಂತ ಹಲವು ರಾಜ್ಯಗಳು ಕೊರೊನಾ ಮೂರನೇ ಅಲೆಯ ಉತ್ತುಂಗವನ್ನು ನೋಡುತ್ತಿವೆ. ಇದರ ಬೆನ್ನಲ್ಲೇ ಭಾರತದಲ್ಲಿ ಕೊರೊನಾ ಲಸಿಕೆ ನೀಡಿಕೆ ಅಭಿಯಾನವೂ ವೇಗವಾಗಿ ಸಾಗುತ್ತಿದೆ. ಒಟ್ಟಾರೆ ವಯಸ್ಕರಿಗೆ 159 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ.  15-18 ವಯಸ್ಸಿನವರಿಗೂ ಕೊರೊನಾ ಲಸಿಕೀಕರಣ ನಡೆಯುತ್ತಿದ್ದು, ಆಯ್ದ ವರ್ಗಗಳಿಗೆ ಬೂಸ್ಟರ್ ಡೋಸ್ ಕೂಡ ನೀಡಲಾಗುತ್ತಿದೆ.

ದೇಶದಲ್ಲಿ ಬುಧವಾರದವರೆಗೆ ಒಟ್ಟು 70,93,56,830 ಸ್ಯಾಂಪಲ್​ಗಳನ್ನು ಕೊವಿಡ್​ 19 ತಪಾಸಣೆಗೆ ಒಳಪಡಿಸಲಾಗಿದೆ. ಬುಧವಾರ ಒಂದೇ ದಿನ  19,35,180 ಮಾದರಿಗಳನ್ನು ಟೆಸ್ಟ್​ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಭಾರತದಲ್ಲಿ 2020ರ ಆಗಸ್ಟ್​ 7ರಂದು ಕೊವಿಡ್ 19 ಸೋಂಕಿನ ಸಂಖ್ಯೆ 20 ಲಕ್ಷದ ಗಡಿ ದಾಟಿತ್ತು. ಹಾಗೇ, ಆಗಸ್ಟ್ 20ರಂದು 30 ಲಕ್ಷ ಮೀರಿತು. ನೋಡನೋಡುತ್ತಿದ್ದಂತೆ ಭಾರತದಲ್ಲಿ ಕೊವಿಡ್​ 19 ಸೋಂಕಿತರ ಸಂಖ್ಯೆ 2021ರ ಮೇ 4ರಂದು 2 ಕೋಟಿ ದಾಟಿ, ಜೂನ್​ 23ರಂದು ಮೂರು ಕೋಟಿಯನ್ನೂ ದಾಟಿದೆ.

ಇದನ್ನೂ ಓದಿ: ದುನಿಯಾ ವಿಜಯ್​ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿದ ಅಭಿಮಾನಿ; ಇಲ್ಲಿವೆ ಫೋಟೋಗಳು​

Published On - 9:50 am, Thu, 20 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ