ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಟ್ಟು 1220 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. 1175 ಮಂದಿ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಎಂದಿನಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರ ಸಂಖ್ಯೆ ವರದಿಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತಗ್ಗುತ್ತಿಲ್ಲ. ರಾಜ್ಯದಲ್ಲಿ ಪ್ರಸ್ತುತ 18,404 ಸಕ್ರಿಯ ಸೋಂಕು ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಶೇ 0.68, ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಶೇ 1.55 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,53,064 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28,97,254 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಒಟ್ಟು 37,380 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 319 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 202 ಜನರು ಚೇತರಿಸಿಕೊಂಡಿದ್ದಾರೆ. 8 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 12,38,834 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,15,103 ಮಂದಿ ಚೇತರಿಸಿಕೊಂಡಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 19, ಬೆಂಗಳೂರು ನಗರ 319, ಚಾಮರಾಜನಗರ 5, ಚಿಕ್ಕಬಳ್ಳಾಪುರ, ರಾಮನಗರ 3, ಚಿಕ್ಕಮಗಳೂರು 34, ಚಿತ್ರದುರ್ಗ 12, ದಕ್ಷಿಣ ಕನ್ನಡ 232, ದಾವಣಗೆರೆ 8, ಧಾರವಾಡ 9, ಗದಗ 4, ಹಾಸನ 81, ಹಾವೇರಿ, ಕಲಬುರಗಿ 3, ಕೊಡಗು 64, ಕೋಲಾರ 9, ಕೊಪ್ಪಳ 2, ಮಂಡ್ಯ 20, ಮೈಸೂರು 86, ಶಿವಮೊಗ್ಗ 35, ತುಮಕೂರು 51, ಉಡುಪಿ 150, ಉತ್ತರ ಕನ್ನಡ 32, ಯಾದಗಿರಿ 3
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು 8, ದಕ್ಷಿಣ ಕನ್ನಡ 4, ಉತ್ತರ ಕನ್ನಡ 2, ಬೆಂಗಳೂರು ಗ್ರಾಮಾಂತರ, ವಿಜಯಪುರ 1, ಧಾರವಾಡ 1, ಕೋಲಾರ 1, ಮಂಡ್ಯ 1.
ಇಂದಿನ 03/09/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/0cQ902Tt2Y @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/cIQgGDyUai
— K’taka Health Dept (@DHFWKA) September 3, 2021
(Karnataka Covid Numbers 1220 Infected 19 Deaths on September 3)
ಇದನ್ನೂ ಓದಿ: ಕೇರಳದಲ್ಲಿ 11 ನೇ ತರಗತಿಯ ಪರೀಕ್ಷೆಗೆ ತಡೆ, ಕೊವಿಡ್ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದ ಸುಪ್ರೀಂಕೋರ್ಟ್
ಇದನ್ನೂ ಓದಿ: ಸೆಪ್ಟೆಂಬರ್ 11 ರೊಳಗೆ ಕೊವಿಡ್ ಡೆತ್ ಸರ್ಟಿಫಿಕೇಟ್ ಕುರಿತು ಮಾರ್ಗಸೂಚಿಗಳನ್ನು ರೂಪಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್