ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೊಗಾಗಿ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ, ಬಂಧಿತನ ಮೊಬೈಲ್​ನಲ್ಲಿ ಸಾವಿರಾರು ವಿಡಿಯೊ

| Updated By: ಆಯೇಷಾ ಬಾನು

Updated on: Nov 22, 2022 | 11:38 AM

ಬಿಬಿಎ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿರುವ ಶುಭಂ, ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿದ್ದ. ಈಗಾಗಲೇ 1200ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋ ಚಿತ್ರೀಕರಿಸಿದ್ದಾನೆ.

ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೊಗಾಗಿ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ, ಬಂಧಿತನ ಮೊಬೈಲ್​ನಲ್ಲಿ ಸಾವಿರಾರು ವಿಡಿಯೊ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸಲು ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡುತ್ತಿರುವಾಗ ವಿದ್ಯಾರ್ಥಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಶುಭಂ ಎಂ ಆಜಾದ್, ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದು ಗಿರಿನಗರ ಪೊಲೀಸರು ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿದ್ದಾರೆ.

ಬಿಬಿಎ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿರುವ ಶುಭಂ, ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿದ್ದ. ಈಗಾಗಲೇ 1200ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋ ಚಿತ್ರೀಕರಿಸಿದ್ದಾನೆ. ಹಾಗೂ ಸ್ನೇಹಿತೆಯರು ಜೊತೆಯಲ್ಲಿದ್ದಾಗಲು ಅವರ ಅರೆನಗ್ನ ಪೋಟೋ ತೆಗೆದಿರುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಲು ಹೋದಾಗ ಯುವತಿಯರು ಚೀರಾಡಿದ್ದಾರೆ. ಈ ವೇಳೆ ಆರೋಪಿ ವಿದ್ಯಾರ್ಥಿ ಪರಾರಿಯಾಗಿದ್ದಾನೆ. ಸಿಸಿಟಿವಿ ಪರಿಶೀಲನೆ ವೇಳೆ ಶುಭಂ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿ ವಿದ್ಯಾರ್ಥಿ ಶುಭಂ, ಈ ಹಿಂದೆಯೂ ಇದೇ ರೀತಿ ಮಾಡಿ ಸಿಕ್ಕಿಬಿದ್ದು ಅಪಾಲಜಿ ಬರೆದುಕೊಟ್ಟಿದ್ದ. ಆದ್ರೆ ಈ ಬಾರಿ ಕಾಲೇಜು ಆಡಳಿತ ಮಂಡಲಿ ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಬಂಧಿತ ವಿದ್ಯಾರ್ಥಿಯ ಮೊಬೈಲ್ ನಲ್ಲಿ 1200 ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳು ಪತ್ತೆಯಾಗಿವೆ. ಆರೋಪಿ ಬಳಿ ಮತ್ತೊಂದು ಮೊಬೈಲ್ ಇದ್ದು ಅದರಲ್ಲಿ ಮತ್ತಷ್ಟು ವಿಡಿಯೋಗಳು ಪತ್ರೆಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಯ ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ: Mangaluru: ಕುಕ್ಕರ್ ಬಾಂಬ್​ ಆತಂಕದ ಬೆನ್ನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ! ​

ರಸ್ತೆ ಬದಿಯ ಹೋಟೆಲ್​ಗೆ ನುಗ್ಗಿದ ಕಾರು

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ರಸ್ತೆ ಬದಿಯ ಹೋಟೆಲ್​ಗೆ ಕಾರು ನುಗ್ಗಿದೆ. ಅದೃಷ್ಟವಶಾತ್ ಭಾರಿ ಅನಾಹುತ ಸಂಭವಿಸಿಲ್ಲ. ಘಟನೆಯಿಂದ ರಸ್ತೆ ಬದಿಯಲ್ಲಿದ್ದ ಐದಕ್ಕೂ ಅಧಿಕ ಹೋಟೆಲ್ ಗಳಲ್ಲಿದ್ದ ಪೀಠೋಪಕರಣಳಿಗೆ ಸಂಪೂರ್ಣ ಹಾನಿಯಾಗಿದೆ. ಕುಡಿದ ಮತ್ತಿನಲ್ಲಿ ಮಹೀಂದ್ರಾ XUV ಕಾರು ಚಾಲನೆ ಮಾಡಿದ ಚಾಲಕ, ನಿಯಂತ್ರಣ ತಪ್ಪಿ ಹೋಟೆಲ್​ಗಳ ಒಳಗೆ ನುದ್ದಿದ್ದಾನೆ. ಸದ್ಯ ಹೋಟೆಲ್​ನಲ್ಲಿ ಮಲಗಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಕಾರ್ ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ತೋಟದ ಮನೆಯಲ್ಲಿ ಆಭರಣ ಹಾವುಗಳು

ತುಮಕೂರಿನ ಡಿಎಮ್ ಪಾಳ್ಯ ಬಳಿಯ ತೋಟದ ಮನೆಯಲ್ಲಿ ಸುಮಾರು ಆರು ಆಭರಣ ಹಾವುಗಳು ಪತ್ತೆಯಾಗಿವೆ. ಡಿಎಮ್ ಪಾಳ್ಯದ ಭಾಗ್ಯ ಲಕ್ಷ್ಮಮ್ಮ ಎಂಬುವರ ತೋಟದ ಮನೆಯಲ್ಲಿ ಹಾವುಗಳು ಪತ್ತೆಯಾಗಿವೆ. ಮೂರು ಹಾವುಗಳು ತೆಂಗಿನಕಾಯಿಗಳಲ್ಲಿ ಸೇರಿಕೊಂಡಿದ್ದು ಉಳಿದ ಮೂರು ಹಾವುಗಳು ಮನೆಯ ಗೋಡೆಯಲ್ಲಿ ಸೇರಿಕೊಂಡಿದ್ದವು. ಸದ್ಯ ಸ್ಥಳಕ್ಕೆ ಉರಗ ಸಂರಕ್ಷಕ ದಿಲೀಪ್ ಭೇಟಿ ನೀಡಿ ಹಾವುಗಳ ರಕ್ಷಣೆ ಮಾಡಿದ್ದಾರೆ. ತೋಟದ ಮನೆಯಾದ ಕಾರಣ ಮೊಟ್ಟೆ ಇಟ್ಟುಕೊಂಡು ಹಾವುಗಳು ವಾಸವಿದ್ದ ಸಾಧ್ಯತೆ ಇದೆ.

Published On - 11:38 am, Tue, 22 November 22