Mangalore News: ಕುಕ್ಕರ್ ಬಾಂಬ್​ ಆತಂಕದ ಬೆನ್ನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ! ​

ಮಂಗಳೂರು ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿತ್ತು. ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಜನ ವಾರಸುದಾರರಿಲ್ಲದ ಬ್ಯಾಗ್ ಪತ್ತೆಯಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದರು.

Mangalore News: ಕುಕ್ಕರ್ ಬಾಂಬ್​ ಆತಂಕದ ಬೆನ್ನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ! ​
ಕುಕ್ಕರ್ ಬಾಂಬ್​ ಆತಂಕದ ಬೆನ್ನಲ್ಲೇ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ! ​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 22, 2022 | 11:43 AM

ಮಂಗಳೂರು: ಕರಾವಳಿ ಭಾಗದಲ್ಲಿ ಕುಕ್ಕರ್ ಬಾಂಬ್​ (Cooker Bomb) ಆತಂಕದ ಬಳಿಕ ಸೋಮವಾರ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ (KSRTC bus stand) ವಾರಸುದಾರರಿಲ್ಲದ ಬ್ಯಾಗ್ ಪತ್ತೆಯಾಗಿತ್ತು. ​ಇದರಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು. ಮಂಗಳೂರು ಸ್ಫೋಟ ಪ್ರಕರಣದ (Mangaluru blast case) ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿತ್ತು. ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಜನ ವಾರಸುದಾರರಿಲ್ಲದ ಬ್ಯಾಗ್ ಪತ್ತೆಯಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದರು. ಶ್ವಾನ ದಳದೊಂದಿಗೆ ದೌಡಾಯಿಸಿದ ಪೊಲೀಸರು ತಪಾಸಣೆ ಕಾರ್ಯದಲ್ಲಿ ತೊಡಗಿದರು.

ಶೋಧದ ಬಳಿಕ ಬ್ಯಾಗಿನಲ್ಲಿ ಅನಾಹುತಕಾರಿ ಅಂಶಗಳೇನೂ ಪತ್ತೆಯಾಗಲಿಲ್ಲ. ಯಾವುದೋ ಪ್ರಯಾಣಿಕರು ಈ ಬ್ಯಾಗ್ ಬಿಟ್ಟು ಹೋಗಿರಬಹುದು. ಅದರಲ್ಲಿ ಹಳೆಯ ಬಟ್ಟೆ ಮತ್ತು ಕೆಲವು ಪಾತ್ರೆಗಳು ಇದ್ದವು. ಅದರಲ್ಲಿ ಬೆಲೆಬಾಳುವ ವಸ್ತುಗಳೇನೂ ಕಂಡುಬರಲಿಲ್ಲ ಎಂದು ಬಾರ್ಕೆ ಪೊಲೀಸ್​ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.

ಆಟೋ ಚಾಲಕನ ಆರೋಗ್ಯ ಸುಧಾರಣೆ:

ಈ ಮಧ್ಯೆ, ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಪುರುಷೋತ್ತಮ್​​ ಆರೋಗ್ಯ ಸುಧಾರಣೆ ಆಗಿದೆ. ಪ್ರಮುಖ ಆರೋಪಿ ಶಾರಿಕ್​ ಎಲ್ಲೆಲ್ಲಿ ಹೋಗಿದ್ದ ಎಲ್ಲದರ ಬಗ್ಗೆಯೂ ತನಿಖೆ ಆಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್​ ತಿಳಿಸಿದ್ದಾರೆ. ಇನ್ನು ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶಾರಿಕ್​ ನ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಕಮಿಷನರ್​​ ಶಶಿಕುಮಾರ್​ ಆಗಮಿಸಿದ್ದಾರೆ.

Also Read: Mangalore Blast: ಐಸಿಸ್ ಉಗ್ರರ ನಂಟಿನ ಮೂವರು ಶಂಕಿತರಿಂದ ಮಂಗಳೂರು ಸ್ಫೋಟಕ್ಕೆ ಕುಮ್ಮಕ್ಕು: ಪೊಲೀಸರ ಶಂಕೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Tue, 22 November 22