ಬೆಂಗಳೂರು: ಎಸ್ಎಸ್ಎಲ್ಸಿ(SSLC) ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಈ ಬಾರಿ ಶೇ.20ರಷ್ಟು SSLC ಪಠ್ಯ ಕಡಿತಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಾಗಿದ್ದಾರೆ. ಸದ್ಯ ಟಿವಿ9 ವರದಿ ಪ್ರಸಾರ ಬಳಿಕ ರಾಜ್ಯ ಶಿಕ್ಷಣ ಇಲಾಖೆ ಎಚ್ಚೆತ್ತೆಕೊಂಡಿದೆ. ಈ ಸಂಬಂಧ ಇಂದೇ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಸೂಚಿಸಿದ್ದಾರೆ.
ಪ್ರತಿ ವರ್ಷ 240ಕ್ಕೂ ಹೆಚ್ಚು ಬೋಧನಾ ದಿನಗಳು ಸಿಗುತ್ತಿತ್ತು. ಅದರಲ್ಲೇ ಶೇ.100ರಷ್ಟು ಪಠ್ಯ ಬೋಧಿಸಲು ಶಿಕ್ಷಕರಿಗೆ ಒತ್ತಡವಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ತಡವಾಗಿ ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 140ಕ್ಕೂ ಕಡಿಮೆ ದಿನಗಳು ಇವೆ. ಇದರಿಂದ ಪಠ್ಯ ಬೋಧನೆಗೆ ಶಿಕ್ಷಕರಿಗೂ ಒತ್ತಡವಾಗುತ್ತಿತ್ತು. ಒತ್ತಡದಲ್ಲೇ ಬೇಗ ಪಠ್ಯ ಮುಗಿಸಲು ಶಿಕ್ಷಕರು ನಾನಾ ಸರ್ಕಸ್ ಮಾಡ್ತಿದ್ರು. ದಿನಕ್ಕೊಂದು ಪಾಠದಂತೆ ಬೋಧನೆ ಮಾಡುತ್ತಿದ್ರು. ವಿಜ್ಞಾನ, ಗಣಿತ ಪ್ರಾಯೋಗಿಕ ಪಾಠಗಳು ಕಡಿತ ಮಾಡಿದ್ದರು. ಒತ್ತಡದಿಂದ ವಿದ್ಯಾರ್ಥಿಗಳಿಗೂ ಪಾಠ ಅರ್ಥವಾಗುತ್ತಿರಲಿಲ್ಲ. ಪಠ್ಯ ಕಡಿತ ಮಾಡಲು ಶಿಕ್ಷಕರು, ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿ ಬಂದಿತ್ತು. ಸದ್ಯ ಈ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು. ಪೂರ್ತಿ ಪಠ್ಯದಿಂದ ಆಗುತ್ತಿದ್ದ ಶಿಕ್ಷಕರ ಒತ್ತಡ, ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಸುದ್ದಿ ಮಾಡಿತ್ತು.
ಹೀಗಾಗಿ ಪಠ್ಯ ಕಡಿತಕ್ಕೆ ಶಿಕ್ಷಣ ಸಚಿವರು ಮುಂದಾಗಿದ್ದಾರೆ. ಈ ಬಗ್ಗೆ ತಜ್ಞರು, ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಇಂದು ಸಭೆ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸಲಿದ್ದಾರೆ. ಶಿಕ್ಷಣ ಇಲಾಖೆಯಿಂದ ಇಂದೇ ಅಧಿಕೃತ ಆದೇಶ ಪ್ರಕಟವಾಗಲಿದೆ.
ಈ ಹಿಂದೆ ಈ ಸಂಬಂಧ ಮಾತನಾಡಿದ್ದ ಸಚಿವರು, ರಾಜ್ಯದ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಸಬ್ಜೆಕ್ಟ್ಗಳಲ್ಲಿ ಮಾತ್ರ ಶೇ. 100ರಷ್ಟು ಪೂರ್ಣ ಪಠ್ಯ ಮಾಡ್ತೇವೆ. ಉಳಿದ ವಿಷಯಗಳಲ್ಲಿ ಶೇ.100ರಷ್ಟು ಪಠ್ಯ ಬಗ್ಗೆ ಒತ್ತು ನೀಡ್ತಿಲ್ಲ. 2 ಭಾಷೆಗಳಲ್ಲಿ ಪಠ್ಯ ಪೂರೈಸದಿದ್ದರೆ ಮುಂದಿನ ತರಗತಿಗಳಲ್ಲಿ ತೊಂದರೆ ಆಗುತ್ತೆ ಎಂದು ಟಿವಿ9ಗೆ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದರು.
ಇದನ್ನೂ ಓದಿ: ಎರಡು ಸಬ್ಜೆಕ್ಟ್ಗಷ್ಟೇ ಒತ್ತು; ಉಳಿದ ವಿಷಯಗಳಲ್ಲಿ ಪೂರ್ಣ ಪಠ್ಯ ಕಲಿಸುವುದಿಲ್ಲ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್