ಒಪ್ಪಿತ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್

|

Updated on: Mar 10, 2023 | 9:05 PM

ಪ್ರೀತಿಸಿ ಮದುವೆಯಾಗುವುದಾಗಿ‌ ನಂಬಿಸಿ ಅತ್ಯಾಚಾರ ಆರೋಪ ಸಂಬಂಧ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್, ಒಪ್ಪಿತ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಒಪ್ಪಿತ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ‌ ನಂಬಿಸಿ ಅತ್ಯಾಚಾರ ಆರೋಪ ಸಂಬಂಧ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ (Karnataka High Court), ಒಪ್ಪಿತ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಪ್ರೀತಿಸಿ ಮದುವೆಯಾಗುವುದಾಗಿ‌ ನಂಬಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾಗಿ ಮಲ್ಲಿಕಾರ್ಜುನ ದೇಸಾಯಿ ಗೌಡರ್ ಎಂಬಾತನ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದ ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಐದು ವರ್ಷಗಳ ಸಂಬಂಧ ಬಲವಂತದ್ದೆಂದು ಹೇಳಲು ಸಾಧ್ಯವಿಲ್ಲ. ಒಪ್ಪಿತ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅದಾಗ್ಯೂ, ಮಲ್ಲಿಕಾರ್ಜುನ ವಿರುದ್ಧ ದಾಖಲಾದ ಬೆದರಿಕೆ, ಹಲ್ಲೆ‌ ಆರೋಪದ ವಿಚಾರಣೆ ಮುಂದೂಡಿ ಆದೇಶಿಸಿದೆ.

ಅತ್ಯಾಚಾರ ಆರೋಪ ಅಥವಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯು ಸಂತ್ರಸ್ತೆಯನ್ನು ವಿವಾಹವಾದರೆ ಆತನ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸಲಾಗುತ್ತದೆ. ಇಂತಹ ಅನೇಕ ನಿರ್ದರ್ಶನಗಳು ಕಣ್ಣಮುಂದಿದೆ. ಅದಾಗ್ಯೂ, ಕೆಲವೊಮ್ಮೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಥವಾ ಪೊಲೀಸ್ ತನಿಖೆಯಲ್ಲಿ ದೋಷ ಕಂಡುಬಂದಲ್ಲಿ ಆರೋಪಿತ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಂಡ ನಿರ್ದರ್ಶನವೂ ಇದೆ. 2022ರ ಡಿಸೆಂಬರ್​ 24ರಂದು ಕರ್ನಾಟಕ ಹೈಕೋರ್ಟ್, ಅತ್ಯಾಚಾರ ಆರೋಪದ ಪ್ರಕರಣವೊಂದನ್ನು ರದ್ದುಪಡಿಸಿತ್ತು. ಸಾಧ್ಯಾ ಸಾಧ್ಯತೆಗಳ ಆಧಾರದಲ್ಲಿ ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಎರಡು ವರ್ಷಗಳ ಜೈಲು ಶಿಕ್ಷೆ ಬದಲು ವೃದ್ದನನ್ನು ಅಂಗನವಾಡಿಯಲ್ಲಿ ಸೇವೆಗೆ ಬಿಟ್ಟ ಜಡ್ಜ್: ಹೈಕೋರ್ಟ್ ವಿಶೇಷ ತೀರ್ಪು, ಚರ್ಚೆಗೆ ಗ್ರಾಸವಾಯ್ತು

ಬಾಲಕಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ 45 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಸಂತ್ರಸ್ತೆ ಹೇಳಿಕೆ ಆರೋಪವನ್ನು ಸಾಬೀತು ಪಡಿಸುವಂತಿರಲಿಲ್ಲ. ಜೊತೆಗೆ, ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರಲಿಲ್ಲ. ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಅಗತ್ಯವಾದ ವೈದ್ಯಕೀಯ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಇದೇ ಕಾರಣದಿಂದ 2005ರಲ್ಲಿ ಮಂಡ್ಯದ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ತನಿಖಾಧಿಕಾರಿಗಳು ಆರೋಪಿಗಳ ಮೇಲೆ ಮಾಡಿರುವ ಆರೋಪವನ್ನು ಸೂಕ್ತ ರೀತಿಯಲ್ಲಿ ದಾಖಲಿಸಿಲ್ಲ. ಸಾಕ್ಷ್ಯಾಧಾರಗಳು ಮತ್ತು ವೈದ್ಯಕೀಯ ದಾಖಲೆಗಳು ಸಂತ್ರಸ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ದೃಢಪಡಿಸಿಲ್ಲ. ಹೀಗಾಗಿ ಆರೋಪಿಯನ್ನು ತಪ್ಪಿತಸ್ಥ ಎನ್ನುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿ ಪ್ರಕರಣವನ್ನು ರದ್ದುಪಡಿಸಿ ಆದೇಶಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 pm, Fri, 10 March 23