Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷಗಳ ಜೈಲು ಶಿಕ್ಷೆ ಬದಲು ವೃದ್ದನನ್ನು ಅಂಗನವಾಡಿಯಲ್ಲಿ ಸೇವೆಗೆ ಬಿಟ್ಟ ಜಡ್ಜ್: ಹೈಕೋರ್ಟ್ ವಿಶೇಷ ತೀರ್ಪು, ಚರ್ಚೆಗೆ ಗ್ರಾಸವಾಯ್ತು

ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ನಿವಾಸಿ ಐತಪ್ಪ ನಾಯ್ಕರದ್ದು ತೀರಾ ಬಡ ಕುಟುಂಬ. 2008ರಲ್ಲಿ ಜಾಗದ ವಿಚಾರದಲ್ಲಿ ಕಿರುಕುಳ ನೀಡಿದ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಐತಪ್ಪ ನಾಯ್ಕ ಹಲ್ಲೆ ಮಾಡಿದ್ದರು. ಪ್ರಕರಣದಲ್ಲಿ ಬಂಟ್ವಾಳದ ಕೋರ್ಟ್, ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ...

ಎರಡು ವರ್ಷಗಳ ಜೈಲು ಶಿಕ್ಷೆ ಬದಲು ವೃದ್ದನನ್ನು ಅಂಗನವಾಡಿಯಲ್ಲಿ ಸೇವೆಗೆ ಬಿಟ್ಟ ಜಡ್ಜ್: ಹೈಕೋರ್ಟ್ ವಿಶೇಷ ತೀರ್ಪು, ಚರ್ಚೆಗೆ ಗ್ರಾಸವಾಯ್ತು
ಎರಡು ವರ್ಷಗಳ ಜೈಲು ಶಿಕ್ಷೆ ಬದಲು ವೃದ್ದನನ್ನು ಅಂಗನವಾಡಿಯಲ್ಲಿ ಸೇವೆಗೆ ಬಿಟ್ಟ ಜಡ್ಜ್: ಹೈಕೋರ್ಟ್ ವಿಶೇಷ ತೀರ್ಪು, ಚರ್ಚೆಗೆ ಗ್ರಾಸವಾಯ್ತು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 06, 2023 | 10:52 AM

ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ ನ್ಯಾಯಾಲಯ ಗರಿಷ್ಠ ಪ್ರಮಾಣದ ಶಿಕ್ಷೆ ಕೊಡುತ್ತದೆ. ಇಲ್ಲೊಬ್ಬರು ವೃದ್ದರು 15 ವರ್ಷಗಳ ಹಿಂದೆ ನೆರೆಮನೆಯ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಹೈಕೋರ್ಟ್ (Karnataka High court) ಸ್ಪೆಷಲ್ ತೀರ್ಪೊಂದನ್ನು (judgement) ನೀಡಿದೆ. ಹೈಕೋರ್ಟ್ ನೀಡಿರುವ ಈ ತೀರ್ಪು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಹಾಗಾದ್ರೆ ಏನಿದು ಶಿಕ್ಷೆ, ಯಾಕೀ ಚರ್ಚೆ ಅನ್ನೋ ಸ್ಟೋರಿ ನೋಡಿ. ಹೌದು… ಅಪರಾಧ ಪ್ರಕರಣಗಳಲ್ಲಿ ತಪ್ಪೆಸಗಿದವರಿಗೆ ಗರಿಷ್ಠ ಶಿಕ್ಷೆ ಕೊಡಬೇಕೆಂದೇ ಕಾನೂನು ಹೇಳುತ್ತದೆ. ಆದರೆ ಜೈಲು ಕೈದಿಗಳಲ್ಲಿಯೂ ಸನ್ನಡತೆಗೆ ಮನ್ನಣೆ ಕೊಡುವುದು ನ್ಯಾಯಾಲಯದ ವಾಡಿಕೆ. ಈ 81 ವರ್ಷ ಪ್ರಾಯದ ವೃದ್ಧನ ಪಾಲಿಗೆ (accused), ಹೈಕೋರ್ಟ್ ಔದಾರ್ಯ ತೋರಿದ್ದು, ವಯಸ್ಸು, ಸನ್ನಡತೆ, ಪ್ರಾಮಾಣಿಕತೆ ಪರಿಗಣಿಸಿ ಜೈಲು ಶಿಕ್ಷೆಯ ಬದಲು ಅಂಗನವಾಡಿಯಲ್ಲಿ ಸೇವೆ ಮಾಡಲು ಹಚ್ಚಿದೆ. ಅದರಂತೆ, ವೃದ್ಧ ವ್ಯಕ್ತಿಯೀಗ ಕರೋಪಾಡಿ ಗ್ರಾಮದ (Mangalore) ಮಿತ್ತನಡ್ಕದ ಅಂಗನವಾಡಿಯಲ್ಲಿ ಶುಚಿತ್ವದ ಕೆಲಸದಲ್ಲಿ ತೊಡಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ನಿವಾಸಿ ಐತಪ್ಪ ನಾಯ್ಕರದ್ದು ತೀರಾ ಬಡ ಕುಟುಂಬ. 2008ರಲ್ಲಿ ಜಾಗದ ವಿಚಾರದಲ್ಲಿ ಕಿರುಕುಳ ನೀಡಿದ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಐತಪ್ಪ ನಾಯ್ಕ ಹಲ್ಲೆ ಮಾಡಿದ್ದರು. ಪ್ರಕರಣದಲ್ಲಿ ಬಂಟ್ವಾಳದ ಕೋರ್ಟ್, ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿತ್ತು. ಆದರೆ ದೂರುದಾರ ವ್ಯಕ್ತಿ ಆರೋಪಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೆಂದು ಮಂಗಳೂರಿನ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 2014ರಲ್ಲಿ ಆರೋಪಿ ಐತಪ್ಪ ನಾಯ್ಕನಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿತ್ತು.

ಮಂಗಳೂರಿನ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಐತಪ್ಪ ನಾಯ್ಕ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಕ್ಕಳಿಲ್ಲದ ವೃದ್ಧ ಮತ್ತು ಮನೆಯಲ್ಲಿ ಪತ್ನಿ ಒಬ್ಬಂಟಿಯಾಗಿರುವುದರಿಂದ, ವಯಸ್ಸನ್ನು ಸಹ ಪರಿಗಣಿಸಿ ಶಿಕ್ಷೆಗೆ ವಿನಾಯ್ತಿ ನೀಡಬೇಕೆಂದು ವಕೀಲರು ಕೋರಿದ್ದರು. ಆರೋಪಿ ಐತಪ್ಪ ನಾಯ್ಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ಪಶ್ಚಾತ್ತಾಪ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಕೆಳಗಿನ ಕೋರ್ಟಿನ ಶಿಕ್ಷೆಯನ್ನು ರದ್ದುಗೊಳಿಸಿದ್ದಾರೆ. ಅದರ ಬದಲಿಗೆ ಒಂದು ವರ್ಷ ಕಾಲ ಸ್ಥಳೀಯ ಅಂಗನವಾಡಿಯಲ್ಲಿ ವೇತನ ಇಲ್ಲದೆ ಸೇವೆ ಮಾಡುವಂತೆ ಆದೇಶ ಮಾಡಿದ್ದಾರೆ. ಅದರಂತೆ, ಕರೋಪಾಡಿ ಗ್ರಾಮದ ಮಿತ್ತನಡ್ಕ ಅಂಗನವಾಡಿಯಲ್ಲಿ ವೃದ್ಧ ಐತಪ್ಪ ನಾಯ್ಕ ಈಗ ಶುಚಿತ್ವದ ಕೆಲಸ ಆರಂಭಿಸಿದ್ದಾರೆ.

ಹಣ ಉಳ್ಳವರು ಶಿಕ್ಷೆಯಾದರೂ, ಏನಾದ್ರೂ ಕಿತಾಪತಿ ಮಾಡಿ ಶಿಕ್ಷೆಯಿಂದ ಪಾರಾಗುತ್ತಾರೆ. ಬಡಪಾಯಿ ಐತಪ್ಪ ನಾಯ್ಕನಿಗೆ ಬಂಟ್ವಾಳದ ವಕೀಲರೊಬ್ಬರು ಸಹಾಯ ಹಸ್ತ ನೀಡಿದ್ದು, ಹೈಕೋರ್ಟಿನಲ್ಲಿ ವಾದಿಸಿ ನ್ಯಾಯ ದೊರಕಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಜೈಲು ಸೇರುವ ಬದಲು ಮನೆ ಬಳಿಯಲ್ಲೇ ಅಂಗನವಾಡಿ ಸೇವೆಗೆ ಜೋಡಿಸುವ ಕೆಲಸ ಮಾಡಿದ್ದಾರೆ. ಹೈಕೋರ್ಟ್ ನೀಡಿರುವ ಈ ರೀತಿಯ ಅಪರೂಪದ ತೀರ್ಪು ವೃದ್ಧ ದಂಪತಿಯ ಬಾಳಲ್ಲಿ ಬದುಕಿನ ಆಶಾಭಾವ ಮೂಡಿಸಿದೆ. ಜೊತೆಗೆ ಚರ್ಚೆಗೆ ಗ್ರಾಸವಾಗಿದೆ

ವರದಿ: ಅಶೋಕ್, ಟಿವಿ9, ಮಂಗಳೂರು

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್