
ಬೆಂಗಳೂರು, ಸೆಪ್ಟೆಂಬರ್ 10: ಸೈಬರ್ ಕ್ರೈಂ ವಂಚನೆ ಜಾಲಕ್ಕೆ ಸಿಲುಕುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಸರ್ಕಾರಿ ಅಧಿಕಾರಿಗಳನ್ನು ಈ ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ. ಇದೀಗ ಇಂತಹದ್ದೆ ಒಂದು ಘಟನೆ ನಡೆದಿದೆ. ಮಾಜಿ ಶಾಸಕರೊಬ್ಬರಿಗೆ (MLA) ಡಿಜಿಟಲ್ ಅರೆಸ್ಟ್ (digital arrest) ಮಾಡುವ ಮೂಲಕ ಕಿಡಿಗೇಡಿಗಳು ಬರೋಬ್ಬರಿ 30 ಲಕ್ಷ ರೂ ವಂಚಿಸಿದ್ದಾರೆ.
ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಔರಾದ್ನ ಮಾಜಿ ಶಾಸಕ ಗುಂಡಪ್ಪ ವಕೀಲ್ಗೆ ವಂಚನೆ ಮಾಡಲಾಗಿದೆ. ಆಗಸ್ಟ್ 12ರಂದು ಸಿಬಿಐ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದ್ದ ವಂಚಕರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್ಸ್ನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ವ್ಯವಹಾರ ನಡೆದಿದೆ ಎಂದು ಡಿಜಿಟಲ್ ಅರೆಸ್ಟ್ ನಾಟಕವಾಡಿದ್ದಾರೆ.
ಇದನ್ನೂ ಓದಿ: ಪ್ರತೇಕ ಘಟನೆ: ಕೇಂದ್ರ ಸಚಿವರ ಹೆಸರಿನಲ್ಲಿ ರಾಜ್ಯಪಾಲ ಗೆಹ್ಲೋಟ್ಗೆ ಫೋನ್ ಕರೆ, ಜಡ್ಜ್ಗೆ 12 ಸಾವಿರ ರೂ. ವಂಚನೆ!
ಬಳಿಕ ನಿಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಿ. ಪ್ರಾಪರ್ಟಿ ತನಿಖೆ ಮಾಡಬೇಕೆಂದು 30 ಲಕ್ಷ ರೂ. ಡೆಪಾಸಿಟ್ ಮಾಡಿಸಿಕೊಂಡಿದ್ದಾರೆ. ಆನ್ಲೈನ್ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸಲಾಗುವುದು. ತನಿಖೆಯ ನಂತರ ಆ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿದ್ದಾರೆ.
ಹೀಗೆ ಸತತ ತಮ್ಮನ್ನು ಸಂಪರ್ಕಿಸುತ್ತಾ ಡಿಜಿಟಲ್ ಬಂಧನದಲ್ಲಿರಿಸಿ ಹಣದ ವ್ಯವಹಾರ ಮಾಡುತ್ತಿದ್ದ ವಂಚಕರ ಈ ವಂಚನೆ ಜಾಲ ಅರಿತ ಶಾಸಕ ಸದ್ಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಫೋಟೋ, ಹೆಸರು ಬಳಸಿ ನಕಲಿ ಫೇಸ್ಬುಕ್ ಖಾತೆ ಓಪನ್, ಎಫ್ಐಆರ್ ದಾಖಲು
ಇನ್ನು ಸೈಬರ್ ಕಾಲದಲ್ಲಿರುವ ಜನರಿಗೆ ಅದರಿಂದಲೇ ವಂಚನೆ ಆಗುತ್ತಿರುವುದು ಮಾತ್ರ ದುರಂತವೇ ಎನ್ನಬಹುದು. ಸಾಮಾನ್ಯ ಜನರಾಗಿದ್ದರೂ, ಜನಪ್ರತಿನಿಧಿಯಾದರೂ ಸೈಬರ್ ವಂಚಕರಿಗೆ ವಂಚನೆಯೇ ಮುಖ್ಯ. ದಿನದಿಂದ ದಿನಕ್ಕೆ ಸಾಕಷ್ಟು ಜನರು ಈ ಡಿಜಿಟಲ್ ಅರೆಸ್ಟ್ಗೆ ಒಳಗಾಗುತ್ತಿರುವುದು ವರದಿ ಆಗುತ್ತಿವೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:50 am, Wed, 10 September 25