ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಕಡಿಮೆ; ಕಂದಾಯ ಸಚಿವ ಆರ್ ಅಶೋಕ್ ಘೋಷಣೆ

| Updated By: sandhya thejappa

Updated on: Jan 01, 2022 | 2:15 PM

ಜಿಪಿಎ, ಅಗ್ರಿಮೆಂಟ್ ಮಾಡಿಕೊಂಡವರಿಗೆ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು ಅಂತಿದ್ದವರಿಗೆ 10 ಪರ್ಸೆಂಟ್ ಡಿಸ್ಕೌಂಟ್ ಮಾಡಲಾಗಿದೆ. ರಾಜ್ಯಾದ್ಯಂತ ಶೇ.10ರಷ್ಟು ಗೈಡೆನ್ಸ್ ವ್ಯಾಲ್ಯೂ ಡಿಸ್ಕೌಂಟ್ ಕೊಡಲಾಗಿದೆ- ಆರ್ ಅಶೋಕ್

ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಕಡಿಮೆ; ಕಂದಾಯ ಸಚಿವ ಆರ್ ಅಶೋಕ್ ಘೋಷಣೆ
ಸಚಿವ ಆರ್ ಅಶೋಕ್
Follow us on

ಬೆಂಗಳೂರು: ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಕಡಿಮೆಗೊಳಿಸಿ ಕರ್ನಾಟಕ ಸರ್ಕಾರ ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡಿದೆ. ಮಾಧ್ಯಮದೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಕಂದಾಯ ಇಲಾಖೆಯಿಂದ ಹೊಸ ವರ್ಷದ ಗಿಫ್ಟ್ ನೀಡಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆಸ್ತಿ ವಹಿವಾಟು ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಕಡಿಮೆ ಮಾಡಲಾಗುತ್ತದೆ. ಕೇವಲ ಮೂರು ತಿಂಗಳು ಮಾತ್ರ ಅವಕಾಶ ನೀಡಲಾಗಿದೆ ಅಂತ ತಿಳಿಸಿದ್ದಾರೆ.

ಜಿಪಿಎ, ಅಗ್ರಿಮೆಂಟ್ ಮಾಡಿಕೊಂಡವರಿಗೆ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು ಅಂತಿದ್ದವರಿಗೆ 10 ಪರ್ಸೆಂಟ್ ಡಿಸ್ಕೌಂಟ್ ಮಾಡಲಾಗಿದೆ. ರಾಜ್ಯಾದ್ಯಂತ ಶೇ.10ರಷ್ಟು ಗೈಡೆನ್ಸ್ ವ್ಯಾಲ್ಯೂ ಡಿಸ್ಕೌಂಟ್ ಕೊಡಲಾಗಿದೆ. ಜಮೀನು, ಸೈಟು, ಫ್ಲಾಟ್ ಯಾವುದೇ ಖರೀದಿಸಿದರು 10 ಪರ್ಸೆಂಟ್ ಕಡಿಮೆ ಮಾಡಿದ್ದೇವೆ. ಇವತ್ತಿನಿಂದ ಇದು ಅನ್ವಯವಾಗಲಿದೆ ಅಂತ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಇನ್ನು ಡಿಕೆ ಶಿವಕುಮಾರ್ ಆರೋಪ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ  ಸಚಿವ ಅಶೋಕ್,  ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರು ವರ್ಷ ಇತ್ತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ರು. ನಯಾ ಪೈಸಾ ನೀರಾವರಿಗೆ ಮೀಸಲಿಡಲಿಲ್ಲ. ಅದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಏನೂ ಮಾಡದಿದ್ದಕ್ಕೆ ಒಂದು ಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಗಿಮಿಕ್ ಪಾದಯಾತ್ರೆ. ಜನರ ಬಗ್ಗೆ ಅವರಿಗೆ ಕಿಂಚಿತ್ ಕಾಳಜಿ ಇಲ್ಲ. ಮೇಕೇದಾಟು ಬಗ್ಗೆ ಈಗ ಮೈ ಪರಚಿಕೊಳ್ತಿದ್ದಾರೆ. ನನಗೆ ಮಸಾಲೆ ಬೇಕಿಲ್ಲ, ಅವರಿಗೆ ಬೇಕಿರೋದು. ಇವರಿಗೆ ನಿಜವಾಗಿ ಕಾಳಜಿ ಇದ್ರೆ, ಅಧಿಕಾರದಲ್ಲಿ ಇದ್ದಾಗಲೇ ಮಾಡ್ತಿದ್ರು ಅಂತ ಹೇಳಿದರು.

ಇದನ್ನೂ ಓದಿ

ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರನ್ನು ಇಂಪ್ರೆಸ್​ ಮಾಡಲು ಬಾದಾಮ್​ ಹಲ್ವಾ ಮಾಡಿಕೊಡಿ – New Year 2022

Multibagger: ಈ ಬ್ಯಾಂಕಿಂಗ್​ ಸ್ಟಾಕ್​ ಮೇಲೆ 23 ವರ್ಷದ ಹಿಂದೆ ಮಾಡಿದ 1 ಲಕ್ಷ ರೂ. ಹೂಡಿಕೆ ಈಗ 2.68 ಕೋಟಿ ರೂ.

Published On - 2:09 pm, Sat, 1 January 22