Multibagger: ಈ ಬ್ಯಾಂಕಿಂಗ್​ ಸ್ಟಾಕ್​ ಮೇಲೆ 23 ವರ್ಷದ ಹಿಂದೆ ಮಾಡಿದ 1 ಲಕ್ಷ ರೂ. ಹೂಡಿಕೆ ಈಗ 2.68 ಕೋಟಿ ರೂ.

ಈ ಬ್ಯಾಂಕಿಂಗ್ ಸ್ಟಾಕ್ ಮೇಲೆ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ 23 ವರ್ಷದಲ್ಲಿ 2.68 ಕೋಟಿ ರೂಪಾಯಿ ಆಗಿದೆ. ಯಾವುದು ಆ ಷೇರು ಎಂಬ ಬಗ್ಗೆ ವಿವರ ಇಲ್ಲಿದೆ.

Multibagger: ಈ ಬ್ಯಾಂಕಿಂಗ್​ ಸ್ಟಾಕ್​ ಮೇಲೆ 23 ವರ್ಷದ ಹಿಂದೆ ಮಾಡಿದ 1 ಲಕ್ಷ ರೂ. ಹೂಡಿಕೆ ಈಗ 2.68 ಕೋಟಿ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 01, 2022 | 1:22 PM

ಷೇರು ಮಾರುಕಟ್ಟೆಯ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅದೊಮ್ಮೆ ಹೇಳಿದ ಪ್ರಕಾರ, ಹೂಡಿಕೆ ಅಂದರೆ ಒಳ್ಳೆಯ ಸಮಯದಲ್ಲಿ ಉತ್ತಮ ಷೇರುಗಳನ್ನು ಆರಿಸುವುದು ಮತ್ತು ಅವು ಉತ್ತಮ ಕಂಪೆನಿಗಳಾಗಿ ಉಳಿಯುವವರೆಗೆ ಅದರೊಂದಿಗೆ ಉಳಿಯುವುದು. ಬರ್ಕ್‌ಷೈರ್ ಹಾಥ್‌ವೇ ಅಧ್ಯಕ್ಷ ಮತ್ತು ಸಿಇಒ ಕೂಡ ಆದ ಬಫೆಟ್ ಹೇಳುವಂತೆ, ಷೇರು ಮಾರುಕಟ್ಟೆಯ ಹೂಡಿಕೆದಾರರು ಎಲ್ಲಿಯವರೆಗೆ ಸ್ಟಾಕ್ ಅನ್ನು ಇಟ್ಟುಕೊಳ್ಳಲು ಸಾಧ್ಯವೋ ಅಲ್ಲಿಯ ತನಕ ಇರಿಸಿಕೊಳ್ಳಲು ಸಲಹೆ ನೀಡುತ್ತಾರೆ. ಹಣ ಗಳಿಸಬಹುದಾದ್ದು ಷೇರುಗಳ ಖರೀದಿ ಅಥವಾ ಮಾರಾಟದಲ್ಲಿ ಅಲ್ಲ, ಆದರೆ ಕಾಯುವುದರಲ್ಲಿ ಎಂದು ಹೇಳಿದ್ದರು. ‘ಖರೀದಿಸಿ, ಇಟ್ಟುಕೊಳ್ಳಿ ಮತ್ತು ಮರೆತುಬಿಡಿ’ ತಂತ್ರವನ್ನು ನಂಬುವವರು ಸಮಯ ಕಳೆದಂತೆ ದೊಡ್ಡ ಮೊತ್ತವನ್ನು ಗಳಿಸುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಬ್ಯಾಂಕಿಂಗ್ ಸ್ಟಾಕ್ ಬೆಲೆಯು ರೂ. 5.52ರಿಂದ (1ನೇ ಜನವರಿ 1999 ರಂದು NSEನಲ್ಲಿ ಬೆಲೆ) ರೂ. 1481ಕ್ಕೆ (31 ಡಿಸೆಂಬರ್ 2021ರಂದು NSE ದರ) 23 ವರ್ಷಗಳಲ್ಲಿ ಸುಮಾರು 268 ಪಟ್ಟು ಏರಿಕೆ ಕಂಡಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಷೇರು ಬೆಲೆ ಇತಿಹಾಸ ಎಚ್​ಡಿಎಫ್​ಸಿ ಬ್ಯಾಂಕ್ ಷೇರು ಕಳೆದ ಆರು ತಿಂಗಳಿನಿಂದ ಮಾರಾಟದ ಒತ್ತಡದಲ್ಲಿದೆ. ಕಳೆದ ಒಂದು ತಿಂಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಬೆಲೆ ಸುಮಾರು ಶೇ 1.50ರಷ್ಟು ಕುಸಿದಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಅದು ಕೇವಲ ಶೇ 4ರಷ್ಟು ಲಾಭವನ್ನು ದಾಖಲಿಸಿದೆ. ಆದರೆ ಎಚ್‌ಡಿಎಫ್‌ಸಿ ಬ್ಯಾಂಕ್ ಕೆಟ್ಟ ಕಂಪನಿ ಎಂದು ಇದರ ಅರ್ಥವಲ್ಲ ಮತ್ತು ಇದರಿಂದ ದೂರ ಇರಬೇಕು ಅಂತಲೂ ಅಲ್ಲ. ಇತರ ಯಾವುದೇ ಬ್ಯಾಂಕಿಂಗ್ ಸ್ಟಾಕ್‌ನಂತೆ, ಎಚ್‌ಡಿಎಫ್‌ಸಿ ಬ್ಯಾಂಕ್ ಕಳೆದ ಒಂದು ವರ್ಷದಿಂದ ಕೊರೊನಾ ಬಿಕ್ಕಟ್ಟಿನ ಪರಿಣಾಮ ಎದುರಿಸುತ್ತಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಷೇರು ಭಾರತದಲ್ಲಿನ ಮಲ್ಟಿಬ್ಯಾಗರ್ ಷೇರುಗಳಲ್ಲಿ ಒಂದಾಗಿದೆ. ಕಳೆದ 5 ವರ್ಷಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಬೆಲೆಯು ಸುಮಾರು ರೂ. 596ರಿಂದ ರೂ. 1481ಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇಕಡಾ 150ರಷ್ಟು ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಬೆಲೆ ಸುಮಾರು ರೂ. 215ರಿಂದ ರೂ. 1481ಕ್ಕೆ ಹೆಚ್ಚಳ ಆಗಿದ್ದು, ಈ ಅವಧಿಯಲ್ಲಿ 7 ಪಟ್ಟು ಹೆಚ್ಚು ಲಾಭ ಕಂಡಿದೆ. ಕಳೆದ 20 ವರ್ಷಗಳಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಷೇರಿನ ಬೆಲೆಯು ಸುಮಾರು ರೂ. 22ರ ಹಂತಗಳಿಂದ ರೂ. 1481ಕ್ಕೆ ಮೇಲೇರಿದ್ದು, ಕಳೆದ ಎರಡು ದಶಕಗಳಲ್ಲಿ ಸುಮಾರು 67 ಪಟ್ಟು ಹೆಚ್ಚಳವಾಗಿದೆ. ಆದರೆ ಕಳೆದ 23 ವರ್ಷಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ರೂ. 5.52ರಿಂದ ರೂ. 1481ಕ್ಕೆ ತಲುಪಿದೆ. ಈ ಅವಧಿಯಲ್ಲಿ ಷೇರುದಾರರಿಗೆ ಸುಮಾರು ಶೇ 26,725ರಷ್ಟು ಲಾಭವನ್ನು ನೀಡಿದೆ.

ಹೂಡಿಕೆ ಮೇಲೆ ಪರಿಣಾಮ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಬೆಲೆ ಇತಿಹಾಸ ಗಮನಿಸುವುದಾದರೆ, ಹೂಡಿಕೆದಾರರು 5 ವರ್ಷಗಳ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಅದರ ರೂ. 1 ಲಕ್ಷ ಇಂದು 2.5 ಲಕ್ಷ ರೂಪಾಯಿ ಆಗುತ್ತಿತ್ತು. 10 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಕೌಂಟರ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಇಂದು ರೂ. 7 ಲಕ್ಷ ಆಗುತ್ತಿತ್ತು. ಆದರೆ ಅದೇ 1 ಲಕ್ಷ ರೂಪಾಯಿ 20 ವರ್ಷಗಳಲ್ಲಿ 67 ಲಕ್ಷಕ್ಕೆ ಬದಲಾಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 23 ವರ್ಷಗಳ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳಲ್ಲಿ 1 ಲಕ್ಷ ಹೂಡಿಕೆ ಮಾಡಿ, ರೂ. 5.52 ಮಟ್ಟದಲ್ಲಿ ಒಂದು ಷೇರು ಖರೀದಿಸಿದ್ದರೆ ಮತ್ತು ಹೂಡಿಕೆದಾರರು ಈ ಬ್ಯಾಂಕಿಂಗ್ ಸ್ಟಾಕ್‌ನಲ್ಲಿ ಇಲ್ಲಿಯವರೆಗೆ ಹೂಡಿಕೆ ಮಾಡಿದ್ದರೆ ಆ 1 ಲಕ್ಷ ಇಂದು ರೂ. 2.68 ಕೋಟಿಗೆ ಬದಲಾಗುತ್ತಿತ್ತು.

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ