- Kannada News Photo gallery Impress your family and friends with Badam Ka Halwa and Enjoy Winter With them
ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರನ್ನು ಇಂಪ್ರೆಸ್ ಮಾಡಲು ಬಾದಾಮ್ ಹಲ್ವಾ ಮಾಡಿಕೊಡಿ – New Year 2022
Winter 2022: ಚಳಿ ಹೆಚ್ಚಾಗುತ್ತಿದೆ. ಹೊಸ ವರ್ಷವೂ ಆಗಮಿಸಿದೆ. ನಿಮ್ಮ ಪ್ರೀತಿಪಾತ್ರ ಕುಟುಂಬದವರು ಮತ್ತು ಸ್ಮೇಹಿತರನ್ನು ಇಂಪ್ರೆಸ್ ಮಾಡಲು ಬಾದಾಮ್ ಹಲ್ವಾ (Badam Ka Halwa) ಮಾಡಿಕೊಡಿ. ಅದಕ್ಕೂ ಮುಂಚೆ ಬಾದಾಮ್ ಹಲ್ವಾ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ, ನೋಡಿ/ ಮಾಡಿ!
Updated on:Jan 01, 2022 | 1:17 PM

ಮೂರು ಪದಾರ್ಥಗಳ ಬಾದಾಮ್ ಹಲ್ವಾ! s100 ಗ್ರಾಂ ಆಲ್ಮಂಡ್ (almonds). 1/4 ಕಪ್ ಸಕ್ಕರೆ (sugar). 1 ಚಮಚ ತುಪ್ಪ (ghee)

ಮಾಡುವ ವಿಧಾನ: ನೀರನ್ನು ಕುದಿಸಿ, ನಂತರ ಅದರಲ್ಲಿ ಬಾದಾಮಿ ಬೀಜಗಳನ್ನು ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ಹೊರತೆಗೆದು ಸಿಪ್ಪೆ ಸುಲಿದಿಟ್ಟುಕೊಳ್ಳಿ.

ಸಿಪ್ಪೆ ಸುಲಿದಿಟ್ಟುಕೊಂಡ ಬೀಜಗಳನ್ನು ಚೆನ್ನಾಗಿ ಗ್ರೈಂಡ್ ಮಾಡಿಕೊಂಡು ಪೇಸ್ಟ್ ಥರಾ ಮಾಡಿಕೊಳ್ಳಿ. ಬಾಂಡಲಿಯಲ್ಲಿ ತುಪ್ಪ ಹಾಕಿ ಕಾಯಿಸಿಟ್ಟುಕೊಳ್ಳಿ. ತುಪ್ಪ ಕರಗಿದ ಮೇಲೆ ಬಾದಾಮಿ ಪೇಸ್ಟ್ ಅನ್ನು ಸೇರಿಸಿ.

ತುಪ್ಪ ಮತ್ತು ಬಾದಾಮಿ ಪೇಸ್ಟ್ಅನ್ನು ಚೆನ್ನಾಗಿ ಕಲಕುತ್ತಾ, ಹುರಿದಿಟ್ಟುಕೊಳ್ಳಿ. ಸೀದುಹೋಗದಂತೆ ನಿಗಾ ವಹಿಸಿ. ಈ ಹಂತದಲ್ಲಿ ಹುರಿದ ಬಾದಾಮಿ ಪೇಸ್ಟ್ ಮತ್ತು ತುಪ್ಪಕ್ಕೆ ಸಕ್ಕರೆ ಸೇರಿಸಿ. ಕಡಿಮೆ ಒಲೆಯಲ್ಲಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡುತ್ತಾ, ಹುರಿದಿಟ್ಟುಕೊಳ್ಳಿ.

ಬಿಸಿ ಸ್ವಲ್ಪ ಕಡಿಮೆ ಆದ ಮೇಲೆ ನಿಮ್ಮ ಪ್ರೀತಿ ಪಾತ್ರರಿಗೆ ಸಿಹಿ ಸವಿಯನ್ನು ಹಂಚಿ, ಹೊಸ ವರ್ಷಕ್ಕೆ ವೆಲ್ಕಂ ಹೇಳಿ WelCome 2022!
Published On - 1:17 pm, Sat, 1 January 22
























