Updated on: Jan 01, 2022 | 4:00 PM
ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೊಸ ವರ್ಷವನ್ನು ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ಜೊತೆ ಆಚರಿಸಿದರು. ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿದ್ದ ಕೊಹ್ಲಿ & ಕಂಪೆನಿ ಹೊಸ ವರ್ಷವನ್ನು ಭರ್ಜರಿಯಾಗಿ ಬರಮಾಡಿಕೊಂಡರು.
ಹೊಸ ವರ್ಷದ ಸಂಭ್ರಮಾಚರಣೆಯ ಚಿತ್ರಗಳನ್ನು ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಟೀಮ್ ಇಂಡಿಯಾ ಆಟಗಾರರು ಹಾಗೂ ಸಿಬ್ಬಂದಿಗಳನ್ನು ಕಾಣಬಹುದು.
ಹೊಸ ವರ್ಷದಲ್ಲಿ ಎಲ್ಲರ ಜೀವನ ಸಂಭ್ರಮ ಮತ್ತು ಸಂತೋಷದಿಂದ ಕೂಡಿರಲಿ. ನಮ್ಮ ಕಡೆಯಿಂದ ಪ್ರೀತಿಯ ಸಂದೇಶ...ಎಂದು ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಕೂಡ ವಿರಾಟ್ ಕೊಹ್ಲಿ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ಈ ವರ್ಷ ನಾವು ದೊಡ್ಡ ಸಂತೋಷವನ್ನು ಪಡೆದುಕೊಂಡಿದ್ದೇವೆ.' ಹೀಗಾಗಿ 2021 ಕ್ಕೆ ಹೃದಯಂತರಾಳದಿಂದ ಧನ್ಯವಾದಗಳು ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾ ಆಟಗಾರ ಅಶ್ವಿನ್ ಕೂಡ ತಂಡದ ಜೊತೆಗಿನ ಫೋಟೋವನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಇನ್ನೊಂದೆಡೆ ಟೀಮ್ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕುಟುಂಬದ ಜೊತೆಗಿನ ಫೋಟೋ ಹಂಚಿಕೊಂಡು, 2020 ಮತ್ತು 2021 ಹಲವು ಸವಾಲುಗಳೊಂದಿಗಿನ ವರ್ಷಗಳಾಗಿವೆ. 2022 ಎಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ನಿಮಗೆ ಹೊಸ ವರ್ಷದ ಶುಭಾಶಯಗಳು ಎಂದು ತಿಳಿಸಿದ್ದಾರೆ.