ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ. ಮೂವರು ವೆಂಕಟೇಶ್ ಎಂಬುವರ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಕಳವು ಮಾಲು ಸ್ವೀಕರಿಸಿದ್ದೀರಾ ಎಂದು ಬೆದರಿಸಿ ದರೋಡೆ ಮಾಡಿದ್ದಾರೆ. ತಿಪಟೂರು ಪೊಲೀಸರು ಎಂದು ಹೇಳಿ ಹಣ, ಆಭರಣ ವಶಕ್ಕೆ ಪಡೆದಿದ್ದಾರೆ. ಸುಮಾರು 600 ಗ್ರಾಂ ಆಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ.
ನಿನ್ನೆ (ಡಿ.31) ಸಂಜೆ ಮೂವರು ವೆಂಕಟೇಶ್ ಮನೆಗೆ ಬಂದಿದ್ದರು. ಇಬ್ಬರು ಪೊಲೀಸರ ಸೋಗಿನಲ್ಲಿ ಬಂದು ಓರ್ವ ಕಳ್ಳನೆಂದು ಕರೆತಂದಿದ್ದಾಗಿ ಹೇಳಿದ್ದರು. ಕಳ್ಳತನದ ಮಾಲು ತಮಗೆ ಕೊಟ್ಟಿದ್ದಾನೆಂದು ಹೇಳಿಕೊಂಡು ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡಿದ್ದಾರೆ. ನಾವು ತಿಪಟೂರು ಪೊಲೀಸರು ಅಂ ಹೇಳಿತ ಮನೆಯಲ್ಲಿದ್ದ ಹಣ ಮತ್ತು ಆಭರಣವನ್ನು ವಶಕ್ಕೆ ಪಡೆದು ಪರಾರಿಯಾಗಿದ್ದಾರೆ. ಈ ಸಂಬಂಧ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದು, ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯಲ್ಲಿ ಕೊಲೆ ಕಲಬುರಗಿ ನಗರದ ತಾಜ್ ನಗರದಲ್ಲಿ ದುಷ್ಕರ್ಮಿಗಳು ಕಲ್ಲಿನಿಂದ ತಲೆ ಜಜ್ಜಿ ವ್ಯಕ್ತಿಯೋರ್ವನನ್ನ ಕೊಲೆ ಮಾಡಿದ್ದಾರೆ. ಕಳೆದ ರಾತ್ರಿ ಖಾಲಿ ಜಾಗದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು ಮಡಿಕೇರಿ ತಾಲೂಕಿನ ಪಾಲೂರು ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೈಕಾಲು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಅಸಾಧ್ಯ. ಇದು ಕೊಲೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೃತ ದುರ್ದೈವಿ ಗಿರೀಶ್ ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ಹೋಗಿದ್ದರು. ಡಿಸೆಂಬರ್ 27 ರಿಂದ ನಾಪತ್ತೆಯಾಗಿದ್ದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾಗಿದ್ದ ಗಿರೀಶ್ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ
KL Rahul: ಟೀಮ್ ಇಂಡಿಯಾ ನಾಯಕನಾಗುವ ಈ ಸ್ಟಾರ್ ಆಟಗಾರನ ಕನಸು ಭಗ್ನ: ಬಿಸಿಸಿಐಯಿಂದ ದೊಡ್ಡ ಶಾಕ್
ಅದ್ಭುತ ಉದ್ಯಾನವನದಿಂದ ಕೂಡಿದೆ ಅಮೀನಗಡ ಪೊಲೀಸ್ ಠಾಣೆ; ಪರಿಸರ ಕಾಳಜಿಗೆ ಜನರಿಂದ ಮೆಚ್ಚುಗೆ