ಬೆಂಗಳೂರು, ಅ.23: ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕಣ್ಣುಗಳಿಗೆ ಬೇಡಿಕೆ ಹೆಚ್ಚಿದೆ (Eye Donation). ಸಾವಿರಾರು ಜನರು ದೃಷ್ಠಿ ದೋಷದಿಂದ ಕಣ್ಣು ಕಳೆದುಕೊಂಡವರು ಪ್ರಪಂಚ ನೋಡಲು ಆಗದೆ ಕಣ್ಣು ಪಡೆಯಲು ಕ್ಯೂನಲ್ಲಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ದಿವಗಂತ ನಟ ಪುನೀತ್ ರಾಜ್ಕುಮಾರ್ (Puneeth Rajkumar) ಹೆಸರಲ್ಲಿ ಐ ಬ್ಯಾಂಕ್ (Eye Bank) ಓಪನ್ ಮಾಡಲು ಚಿಂತನೆ ನಡೆದಿದೆ.
ರಾಜ್ಯದಲ್ಲಿ ಕಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಅನೇಕ ಕಾರಣಗಳಿಂದ ಕಣ್ಣು ಕಳೆದುಕೊಂಡವರು, ದೃಷ್ಠಿ ದೋಷದಿಂದ ಬಳಲುತ್ತಿರುವವರು ಜಗತ್ತು ನೋಡಲು ಕಣ್ಣುಪಡೆಯಲು ಕಾಯುತ್ತಿದ್ದಾರೆ. ಇಂತವರಿಗೆ ದೃಷ್ಠಿ ಭಾಗ್ಯ ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಕಣ್ಣು ದಾನ ಹೆಚ್ಚಿಸಲು ಮುಂದಾಗಿದೆ. ಹೀಗಾಗಿ ಸ್ಯಾಂಡಲ್ವುಡ್ ಯುವರತ್ನ ಪುನೀತ್ ರಾಜ್ಕುಮಾರ್ ಹೆಸರಲ್ಲಿ ಐ ಬ್ಯಾಂಕ್ ತೆರೆಯಲು ಸರ್ಕಾರ ಚಿಂತನೆ ಮಾಡಿದೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಾಮರಾಜನಗರದ ಯುವಕ; ಮೃತನ ಆಸೆಯಂತೆ ಕುಟುಂಬಸ್ಥರಿಂದ ನೇತ್ರದಾನ
ಸರ್ಕಾರಿ ಆಸ್ಪತ್ರೆಗಳಲ್ಲಿ ಪುನೀತ್ ರಾಜಕುಮಾರ್ ಹೆಸರಲಿ ಐ ಬ್ಯಾಂಕ್ ತೆರೆಯಲು ಚಿಂತನೆ ನಡೆದಿದೆ. ಈಗಾಗಲೇ ರಾಜ್ಯದಲ್ಲಿ ಸಾವಿರಾರು ಜನರು ದೃಷ್ಠಿದೋಷ ಅನುಭವಿಸುತ್ತಿದ್ದಾರೆ. ಸಾವಿರಾರು ಜನರು ಕಣ್ಣಿಗಾಗಿ ಕ್ಯೂನಲ್ಲಿದ್ದಾರೆ. ಹೀಗಾಗಿ ಪುನೀತ್ ರಾಜಕುಮಾರ್ ಹೆಸರಲ್ಲಿ ಆರೋಗ್ಯ ಇಲಾಖೆ ಐ ಬ್ಯಾಂಕ್ ಆರಂಭಿಸಲು ಮುಂದಾಗಿದೆ. ನಟ ಪುನೀತ್ ಹೆಸರಲ್ಲಿ ಐ ಬ್ಯಾಂಕ್ ಶುರು ಮಾಡಿದ್ರೆ ಹೆಚ್ಚು ಜನರು ಕಣ್ಣಿನದಾನಕ್ಕೆ ಮುಂದಾಗುತ್ತಾರೆ. ಜನ ಜಾಗೃತಿಯಾಗುತ್ತೆ ಅನ್ನೋ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಐ ಬ್ಯಾಂಕ್ ಶುರು ಮಾಡುವ ಪ್ಲಾನ್ ಗೆ ಮುಂದಾಗಿದೆ. ಈ ಬಗ್ಗೆ ರಾಜಕುಮಾರ್ ಐ ಬ್ಯಾಂಕ್ ಸಂಘಟನೆಯಿಂದಲೂ ಸರ್ಕಾರಕ್ಕೆ ಮನವಿ ಕೇಳಿ ಬಂದಿದೆ.
ಪುನೀತ್ ರಾಜಕುಮಾರ್ ಹೆಸರಲ್ಲಿ ಐ ಬ್ಯಾಂಕ್ ಮೂಲಕ ಕಣ್ಣಿನ ದಾನ ಹೆಚ್ಚು ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಪುನೀತ್ ಹೆಸರಿನ ಮೂಲಕ ಐ ಬ್ಯಾಂಕ್ ಓಪನ್ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಐ ಡೋನೆಷನ್ ಹೆಚ್ಚಿಸಿ ದೃಷ್ಠಿದೋಷವುಳವರ ಬಾಳಿಗೆ ಬೆಳಕು ನೀಡಲು ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ